ಇರುವುವಂದದಾರೂಪ
ಕನ್ನಡ ತಾಯ್ ಬೆಳದಿಂಗಳ ದೀಪ
ಹೃದಯವಂತಿಕೆ ನಡೆ ನುಡಿಯೊಳಾಡೆ
ಹಚ್ಚಿರೈ ಕನ್ನಡದ ದೀಪ ||

ಕತ್ತಲೆಯ ಓಡಿಸಿ ಇರುಳ
ಸಜ್ಜನಿಕೆಯ ಕಳೆಯ ಬಯಸಿ
ಭಾಂದವದೊಳಾಡೆ ಸೆಲೆಯಾಗಿ ಬನ್ನಿರೈ ||

ಬಾನಾಡಿ ಹಕ್ಕಿ ಬೆಳ್‌ಮುಗಿಲ
ಇಂಪಾದ ತಂಗಾಳಿ ಅಲೆಯಲಿ
ಸೊಲ್ಲ ಕೊರಳ ದನಿಗೂಡಿ ಹಾಡಿರೈ ||

ತಿಳಿನೀಲಿ ಆಗಸೇದಾ ನೆಲೆ
ಚೆಲ್ವ ಚಿತ್ರ ಮೆರೆಯುವಂದದಿ
ಬಿಡಿಸಿರೈ ಕವಿ ಕುಂಚದಲಿ ಕಸ್ತೂರಿ ಕನ್ನಡವ ||
*****