ಅದೇದಿನ ರಾತ್ರಿ ಸುಮಾರು ೮ ಗಂಟೆಯ ಸಮುಯದಲ್ಲಿ ವಿಶ್ವ ನಾಥನು ಹಜಾರದಮೇಲಿ ದೀಪದಿದುರಿಗೆ ಕುಳಿತುಕೊಂಡು ರಾಮಾಯಣದ ಪುಸ್ತಕದ ಪುಟಗಳನ್ನು ಮಗುಚಿ ಹಾಕುತ್ತಾ ಮಧ್ಯೆ ಮಧ್ಯೆ ಕಿವಿಕೊಟ್ಟುಕೇಳುತ್ತ ನಿಟ್ಟುಸಿ ರುಬಿಡುತ್ತಿದ್ದನು. ಹಾಗೆಯೇ ಏನನ್ನೋ ಯೋಜಿಸಿ ಪುಸ್ತಕವನ್ನು ಮುಚ್ಚಿಕೊಂಡು ಒಂದು ಪುಟ ವನ್ನು ತೆರದು ಪ್ರಶ್ನೆಯನ್ನು ನೋಡಿದನು. ಕೂಡಲೆ ಮುಖವು ವಿಕಾಸ ವಾಯಿತು. . ಸರಿಸರಿ ಈಗಲೆ ಬರಬೇಕು“ ಎಂದಂದುಕೊಂಡನು. ಆಗ್ಗೆ ಸರಿಯಾಗಿ ಬೀದಿಯಬಾಗಿಲನ್ನು ತಟ್ಟಿದ ಶಬ್ಧ ವಾಯಿತು. ವಿಶ್ವ ನಾಥನು ಝಗ್ಗನೆ ಎದ್ದು “ಅಗೋ ಆ ಪ್ರಶ್ನೆ ಸುಳ್ಳಲ್ಲ. ಕನಸೂ ಸುಳ್ಳ ಲ್ಲ”.. ಎಂದಂದುಕೊಂಡು ಬಾಗಿಲುತೆರೆದು “ಒಳಗೆ ದಯಮಾಡಿ ಸ್ಕಾಮಿ“ ಎಂದನು. ಕೂಡಲೆ ಒಬ್ಬ ಸುಂದರಾಕಾರನಾದ ಯುವಾ ಪುರುಷನು ಮನೆಯೊಳಗೆ ಪ್ರವೇಶಮಾಡಿದನು. ಅವನನ್ನು ಕರೆದು ಕೊಂಡುಹೋಗಿ ಚಾಪೆಯಮೇಲೆ ಕಳ್ಳಿರಿಸಿ, “ ತಮ್ಮ್ರನ್ನು ಕಂಡು ನಾನು ಧನ್ಯನಾದೆನು. ನನಗೆ ನಿನ್ನೆಯರಾತ್ರಿ ಕನಸಿನಲ್ಲಿಯೆ ದೇವರ ಅಪ್ಪಣೆಯಾಗಿತ್ತು` ಎಂದನು. ಅಗಂತುಕನು ವಿಶ್ವನಾಥನ ಮಾತಿಗೆ ಸ್ನಲ್ಪ ಆಶ್ಚರ್ಯಪಟ್ಟು *ಸ್ನಾಮಿ, ನಾನು ಯಾರೆಂಬುದನ್ನು ನೀವು ಬಲ್ಲಿರೆಂದು. ತೋರುತ್ಕದೆ`? ಎಂದನು.
ವಿಶ್ವ – ಇಲ್ಲ. ಆದರೆ ತಾವು ಕನ್ಯಾರ್ಥಿಯಾಗಿ ಬಂದಿರುವಿ ರೆಂಬುದು ಮಾತ್ರ ತಿಳಿಯುವುದು.
ಆಗಂತುಕ – ಅದುಹೇಗೆ ? ವಿಶ್ವ–ಮೊದಲೇ ಹೇಳಿದೆನಷ್ಟೆ, ನಮ್ಮ ಕುಲದೈವವಾದ ಅಂಬಾಭವಾನಿಯು ಸ್ವಪ್ನ ದಲ್ಲಿ ಬಂದು ” ನಾಳೆ ಸಾಯಂಕಾಲವಾದ ಎರಡುಗಳಿಗೆಗೆ ಸರಿಯಾಗಿ ನಿನ್ನ ಮಗಳಿಗನು ರೂಪನಾದ ತರುಣನು ಕನ್ಯಾರ್ಥಿಯಾಗಿ ಬರುವನು. ನೀನು ಯೋಜಚನೆಮಾಡಬೇಡ“ ಎಂದು ಹೇಳಿ ಹೋದಳು. ಸಾಯಂಕಾಲವಾದಾಗಿನಿಂದ ತಮ್ಮ ನಿರೀಕ್ಷಣೆಯಲ್ಲಿಯೆ ಕೂತಿದ್ದೇನೆ:
ಅಗಂ—ಹಾಗಾದರೆ ನನಗೆ ತಮ್ಮ ಮಗಳನ್ನು ಲಗ್ನ ಮಾಡಿ ಕೊಡುವಿರಾ? ನನ್ನ ಕುಲಗೋತ್ರ ತಿಳಿಯಬೇಕಾದು ದಿಲ್ಲವೆ?
ವಿಶ್ವ–ಕುಲವನ್ನು ತಮ್ಮ ಮುಖವು ಹೇಳುವುದು . ತಾವು ಬೇರೆ ಗೋತ್ರದವರಾಗದಿದ್ದರೆ ಅಂಬಾಭವಾ ನಿಯು ಸೂಚನೆಯನ್ನೆ ಕೊಡುತ್ತಿರಲಿಲ್ಲ. ನಾನು ಲಗ್ನ ವತಾಡಿಕೊಡು —
( ಸುಭದ್ರೆಯುಯಾವುದೊ ಕೆಲಸದನಿಮಿತ್ತವಾಗಿ ಹಜಾರದ ಮೇಲಕ್ಕೆ ಬಂದವಳು ತರುಣನನ್ನು ನೋಡಿ ಚಮುಕಿತಳಾಗಿ ಕೈಯಲ್ಲಿದ್ದ ಕಂ ಚಿನಪಂಚಪಾತ್ರೆಯನ್ನು ಕೆಳಗೆಹಾಕಿ`ಬಿಟ್ಸ್ಗಳು. ಅದು ಹಜಾರದಳಲ್ಲಿನ ಮೇಲೆಶಬ್ದಮಾಡಿಕೊಂಡುಬಿದ್ದುಉರುಳಿಕೊಂಡುಹೋಯಿತು. )
ವಿಶ್ವ–ಏಕಮ್ಮಾ ! ಸುಭದ್ರೆ ! ನೆಲವನ್ನು ನೋಡಿಕೊಂಡು ನಡೆಯಬಾರದೆ? (ಸುಭದೆ, ಹೊರಟು ಹೋದಳು. ) ಇವಳೇಸ್ಫಾಮಿ ನನ್ನ ಮಗಳು. ನಾನು ಲಗ್ನ ಮಾಡಿಕೊಡುವೆನೊ ಇಲ್ಲವೂ ಎಂಬುದಕ್ಕೆ__-ತಾವು ಬರು ವುದಕ್ಕೆ ಮುಂಚೆಯೆ ಸಕಲ ಸಲಕರಣೆಯೊಂದಿಗೆ ಪಂಡರಾಪುರಕ್ವೆ ಈ ರಾತ್ರಿಯ ಹೊರಡಲು ಗಾಡಿ ಗಳನ್ನೂ ಸಿದ್ದ ಮಾಡಿದ್ದೇನೆ, ದಯವಿದ್ದರೆ ನಾಳೆಯೆ ಶ್ರೀಪಾಂಡುರಂಗನ ಸನ್ನಿ ಧಿಯಲ್ಲಿ ವಿವಾ ಹವು ನಡೆಯುವುದು. ಆ ನಾನು ಇಷ್ಟುಸುಲಭವಾಗಿ ಕಾರ್ಯವು ನೆರವೇರುವುದೆಂದು ನೆನಸಿರಲಿಲ್ಲ. ದೇವರಸಹಾಯವಿದ್ದು ದರಿಂದ ಆಯಿತು, “ಶುಭಸ್ಯ ಶೀಘ್ರಂ. ”
ಮಾತು ಅಲ್ಲಿಗೆ ನಿಂತಿತು. ಆಗಂತುಕನು ೨೦ ವರ್ಷ ಗಳಿಗೆ ಮೀರದ ವಯಸ್ಸುಳ್ಳವನಾಗಿಯೂ ಅತಿಶಯ ತೇಜಸ್ವಿಯಾಗಿಯೂ ಇದ್ದನು. “ಇಂತಹ ವರನು ತಾನಾಗಿಯೆ ಒಂದುದು ಹೇಗೆ? ಇವ ನನ್ನು ನೋಡಿದರೆ ಸಾಮಾನ್ಯಪುರುಷನಂತೆ ತೋರುವುದಿಲ್ಲ. ಇವ ನಿಗೆ ಇನ್ನೆಲ್ಲಿಯೂ ಕನ್ಯೆ ಸಿಕ್ಕಲಿಲ್ಲವೆ? ಇಲ್ಲದೆ ಇವನೇ ಏತಕ್ಕೆ ಕನ್ಯಾ ರ್ಥಿಯಾಗಿ ಬಂದನು? ತಂದೆ ಯಿಲ್ಲವೊ? ಅಥವಾ ಜಾತಿಯಲ್ಲೇನಾ ದರೂ ಕಡಿಮೆಯೊ ? ಇಲ್ಲವೆ, ಅಂಬಾಭವಾನಿಯ ಅಪ್ಪಣೆಯು ಅವ ನಿಗೂ ಆದುದರಿಂದ ನೆಟ್ಟಗೆ ಇಲ್ಲಿಗೆ ಹೊರಟುಬಂದನೊ?“ ಹೀಗೆ ನಾನಾ ವಿಧವಾಗಿ ಅನುಮಾನಗಳು ವಿಶ್ನನಾಥನಿಗೆ ತೋರಿ ಬಂ ದಾಗ್ಗೂ ಯಾವ ಪ್ರಶ್ನೆ ಯನ್ನಾ ದರೂ ಕೇಳಿದರೆ. ತರುಣನಿಗೆ ಅಸ ಮಾಧಾನ ಉಂಟಾಗಿ “ನಿಮ್ಮ ಮಗಳೇ ಬೇಡ“? ಎಂದು. ಹೇಳಿ ಹೊರಟುಹೋದಾನಂಬ ಭೀತಿಯಿಂದ ಆ ಸಮಾಚಾರವನ್ನೆ ಎತ್ತದೆ ಸುಮ್ಮನಿದ್ದನು.
ಭೋಜನವಾದ ಅನಂತರದಲ್ಲಿಎಲ್ಲರೂರಾಂಫುರವನ್ನು ಬಿಟ್ಟು ಹೊರಟು ಪಂಡರಾ ಫುರವನ್ನು ಸೇರಿದರು, ಅಲ್ಲಿ ಯಥಾವಿಧಿಯಾಗಿ ವಿವಾಹವು ನಡೆಯಿತು. ವರನು ತನ್ನ ಹೆಸರನ್ನು “ಲಕ್ಷ್ಮೀಪತಿ” ಯೆಂದೂ, ತಂದೆಯ ಹೆಸರನ್ನು ‘ಮಹಾದೇವನೆಂದೂ ಹೇಳಿದನು. ರಮಾಬಾಯಿಗೆ, ದೂರುವುದಕ್ಕೆ ಬೀಗಿತಿಯರು ಇಲ್ಲದೆ ಇದ್ದುದರಿಂ ದಲೂ,ತನ್ನ ಕಡೆಯನೆಂಟರೊಬ್ಬರಾದರೂ ಬಾರದೆ ಲಗ್ನವುನೆರವೇರಿದು ದರಿಂದಲೂ ಮನಸ್ಸಿನಲ್ಲಿ ಬಹಳ ಅಸಮಾಧಾನವಾಗಿತ್ತು. ಅದರೂ ಅದನ್ನು ಹೊರಗೆ ಹೇಳದೆ ಬಹಳ ಉಲ್ಲಾಸವನ್ನು ತೋರ್ಪಡಿಸುತ್ತಾ, ಆಊರಿನ ಮುತ್ತೈದೆಯರಲ್ಲಿ ನಾಲ್ಕಾರು ಮಂದಿಯನ್ನು ಆರತಿ ಉರಟಣೆ ಬಾಗಿಲುತಡೆಯುವುದು, ಮುಂತಾದ ಹೆಂಗಸರ ಶಾಸ್ತ್ರಗಳ ನ್ನೊಂದನ್ನೂ ಬಿಡದಂತೆ ನಡೆಸಿದಳು. ಊಟದಕಾಲದಲ್ಲಿ ಅವರಲ್ಲಿಯೆ: ಇಬ್ಬರನ್ನು ಎದುರುಪಕ್ಷದವರನ್ನಾಗಿ ಏರ್ಪಡಿಸಿ ತಾನು ಕಲಿತಿದ್ದ ಬೀಗರ ಹಾಡು ಗಳನ್ನೆ ಲ್ಲಾ ಹೇಳಿ. ಮುಗಿಸಿದಳು . ಹೀಗೆ, ವಿಶೇ ಷವಾಗಿ ಜನಗಳ ಕೂಟವಿಲ್ಲದಿದ್ದರೂ, ಮದುವೆಯು ಸಂಭ್ರಮ ವಾಗಿಯೆಜರುಗಿತು. ಇದೆಲ್ಲವೂ ಮುಗಿದಮೇಲೆ ಒಂದುದಿನ ಲಕ್ಷ್ಮೀ ಪತಿಯು ತಾನು ಒಂದುಕಾರ್ಯಾರ್ಥವಾಗಿ ದೇಶ ಸಂಚಾರಮಾ ಡಬೇಕಾಗಿದೆಯೆಂದೂ , ನಿಲ್ಲುವುದಕ್ಕೆ ಆಸರೆ ಸಿಕ್ಕಿ ದೊಡನೆಯೆ ಎಲ್ಲ ರನ್ನೂ ಕರೆಸಿಕೊಳ್ಳುವೆನೆಂದು ವಿಶ್ನನಾಥನಿಗೆ ತಿಳಿಸಿ, ಹೊರಡಲು ಅಪ್ಪಣೆಯನ್ನು ಕೇಳಿದನು. . ವಿಶ್ನನಾಥನು, ಅಳಿಯನನ್ನು ಬಿಡಲಾರ ದೆ “ಹೊರಡದಿದ್ದರಾಗುವುದಿಲ್ಲವೆ ?. ಎಂದು ಕೇಳಿದನು.
ಲಕ್ಷ್ಮೀಪತಿ-ನನ್ನಿಂದಾಗಬೇಕಾದ ಕಾರ್ಯವೇನಾದರೂ ಇದೆಯೆ ?
ವಿಶ್ವನಾಥ–ಏನೂ ಇಲ್ಲ ನಮಗಿರುವವಳೊಬ್ಬಳೇ ಮಗ ಳು . ನಾವುಭಾಗ್ಯವಂತರಲ್ಲದಿದ್ದರೂ ತಿನ್ನುವುದಕ್ಕೆ ತಕ್ಕಷ್ಟು ಅನುಕೂಲತೆಯನ್ನು ದೇವರು ಉಂಟು ಮಾಡಿ ಕೊಟ್ಟರುವನು. ಆದುದರಿಂದ ನೀವೂ
ಲಕ್ಷ್ಮೀ –ತಮಗೆ ಈಗಿರುವ ಭಾರದಜತೆಗೆನಾನೂ ಒಬ್ಬನು ಸೇರಬೇಕೆ? . ಎಂದಿಗೂ. ಆಗಲಾರದು. . ನಾನು ಈ ಚಿಕ್ಕ ವಯಸ್ಸಿ ನಲ್ಲಿಯೆಯಾವ ಉದ್ಯೋಗವೂ ಇಲ್ಲದೆ ತಿಂದುಕೊಂಡು ಕೂತಿರುವುದು ನ್ಯಾಯವಲ್ಲ, ನನ ಗೂ ದೇವರುಯಥೇಚ್ಛವಾಗಿ ಕೊಟ್ಟಿದ್ದಾನೆ, ಅದರೆ ಕಾರಣಾಂತರದಿಂದ ಅದನ್ನು ಅನುಭವಿಸಲುಮಾರ್ಗ ವಿಲ್ಲ. ನನ್ನ ಸ್ವಂತ ಕಷ್ಟದಿಂದ ಸಂಪಾದಿಸಿ ಹೆಂಡತಿ ಯನ್ನು ಸಾಕಬೇಕೆಂಬ ಉದ್ದೇಶವಿದೆ. ಆದುದರಿಂದ ದಯೆಯಿಟ್ಟು ಅಪ್ಪಣೆಕೊಡಬೇಕು.
ವಿಶ್__ಹಾಗಿದ್ದ ಮೇಲೆ ನಾನು ತಡೆಯುವುದಿಲ್ಲ , ನಿಮಗೆ ದೇವರು ಮಂಗಳವನ್ನುಂಟುಮಾಡಲಿ.
ಲಕ್ಷ್ಮೀಪತಿಯು ಅತ್ತೆಮಾವಂದಿರನ್ನು ನಮಸ್ಕರಿಸಿ ಅವರ ಆಶೀರ್ವಾದವನ್ನು ಪಡೆದು ಪ್ರಯಾಣಮಾಡಿದನು. ಮಾರಣೆಯದಿನ ವಿಶ್ವನಾಥನು ಹೆಂಡತಿಮಗಳೊಂದಿಗೆ ರಾಮ ಪುರವನ್ನು ಸೇರಿದನು .
*****
ಮುಂದುವರೆಯುವುದು