
ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ ಗಾನವೇದಿಕೆಯೆನಿಸಿ, ಝಗಝಗಿಸಿ, ಈಗ ಬರಿ ಹಣ್ಣೆಲೆಯೆ ತುಂಬಿರುವ, ಇಲ್ಲ ಒಂದೆರಡಿರುವ, ಅಥವ ಚಳಿಕೊರೆತಕ್ಕೆ ಬೆದರಿ ಎಲ್ಲಾ ಉದುರಿ ಭಣಗುಡುವ ಒಣಕೊಂಬೆ ಕಾಂಡಗಳ ಹೇಮಂತ ನನ್ನ ಮೈಯಲ್ಲಿ ನೆಲೆ ಹೂಡುವುದ ನೋ...
ವಾತ್ಸಲ್ಯದ ಗಣಿ ಶೂರ್ಪನಖಿ ನಮ್ಮೆಲ್ಲರ ಮುದ್ದಿನ ತಂಗಿ, ಮುದ್ದು ಜಾಸ್ತಿಯಾದುದರ ಕಾರಣ ಅವಳು ಹಠಮಾರಿಯಾಗಿಯೇ ಬೆಳೆದಳು. ಕೇಳಿದ್ದು ಕೊಡಲಿಲ್ಲವೆಂದರೆ ಭೂಮಿ ಆಕಾಶ ಒಂದು ಮಾಡುತ್ತಿದ್ದಳು. ಅವಳ ಕಣ್ಣೀರಿಗೆ, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾ...
ಬಾರೆ ಗೆಳತಿ ಬಾರೆ ಕೃಷ್ಣ ಬಂದ ನೀರೆ ನಿನ್ನ ಮುಖವ ತೋರೆ ಮನದ ಮಬ್ಬು ಜಾರೆ ದಣಿದು ಬಂದ ರಂಗ ಏಕೆ ಮನಕೆ ಭಂಗ ಬಾರೆ ಬಾರೆ ಹೀಂಗ ತಳುವಬೇಡ ಹಾಂಗ ಕೊಳಲ ನುಡಿಸಲಾರ ಜಾಣೆ ನೀನೆ ಬಾರ ಅವನ ಹೃದಯ ಭಾರ ಇಳಿಸೆ ನೀನೆ ಬಾರ ಕಮಲ ಕಣ್ಣು ಬಾಡಿ ನಿನ್ನ ನೆಲ್ಲು...
ಉಸಿರು ತುಂಬಿದ ಕ್ಷಣದಿಂದ ಯಾಚನೆಗೊಡ್ಡಿದ ಅನಾಥ ಬೊಗಸೆ ಬಿಕ್ಕಳಿಸುತ್ತಲೇ ಇದೆ ಕೊಚ್ಚಿ ಬಂದ ಮಹಾಪೂರ ತುಂಬಿಟ್ಟುಕೊಳಲಾಗದೇ ಅದಕ್ಕೆ ಬರಿದೇ ಮುಳುಗಿ ಮೀಯುವ ಸಂಭ್ರಮ ಉಕ್ಕುವ ನೀರಿನಲ್ಲೂ ಕರಗಿಸುವ ಆರ್ದ್ರತೆ! ಆ ಸೆಳೆತಕ್ಕೆ ಪುಟ್ಟ ಬೊಗಸೆಯೇ ಕರಗಿ ...
ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ; ಖಗ ಹಾರಿತು ಗೂಡಿನ ಒಳಗೆ; ಜಗವೆಲ್ಲಾ ಬೆಳಗಿತು ದೀಪವು ಬೆಳಗೆ, ಗಗನಾಂಗಣದಲ್ಲಿ ಉಡು ತೊಳಗೆ; ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ; ಹೊಗುತಿರುವುದು ಕತ್ತಲೆ ಇಳೆಗೆ. ಓ-ಮಗುವೇ, ನೀ ಸಂಜೆಯ ಗಳಿಗೆಯಲಿ ನಗುತಲಿ...
ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ – ವಿಜ್ಞಾನೇಶ್ವರಾ *****...















