ಪೇಟೆ ಬೀದಿಯಲ್ಲಿ
ಹಗಲು –
ಹತ್ತು ಘಂಟೆಯ ಸಮಯ
ಒಬ್ಬ ಬಿದ್ದಿದ್ದ
ಕುಡಿದೋ
ಜ್ಞಾನ ತಪ್ಪಿಯೋ,
ಸತ್ತೋ
ಬಿದ್ದಿದ್ದ.
ನೋಡಲು ಯಾರಿಗೂ
ಮನಸ್ಸಿಲ್ಲ,
ಧೈರ್ಯವಿಲ್ಲ,
ಸಮಯವಿಲ್ಲ
ಸಂಜೆ –
ಅವನು
ತರಕಾರಿ ಮಾರುತ್ತಿದ್ದ.
ಬೆಳಗಿನ ವೇಳೆ
ಸಂತೆಯಲ್ಲಿ
ನಿದ್ದೆ ಮಾಡಿದ್ದ
ಚಿಂತೆ ಇಲ್ಲದವ.
*****
೨೧-೦೨-೧೯೯೨