ಬಾರೆ ಗೆಳತಿ

ಬಾರೆ ಗೆಳತಿ ಬಾರೆ
ಕೃಷ್ಣ ಬಂದ ನೀರೆ
ನಿನ್ನ ಮುಖವ ತೋರೆ
ಮನದ ಮಬ್ಬು ಜಾರೆ

ದಣಿದು ಬಂದ ರಂಗ
ಏಕೆ ಮನಕೆ ಭಂಗ
ಬಾರೆ ಬಾರೆ ಹೀಂಗ
ತಳುವಬೇಡ ಹಾಂಗ

ಕೊಳಲ ನುಡಿಸಲಾರ
ಜಾಣೆ ನೀನೆ ಬಾರ
ಅವನ ಹೃದಯ ಭಾರ
ಇಳಿಸೆ ನೀನೆ ಬಾರ

ಕಮಲ ಕಣ್ಣು ಬಾಡಿ
ನಿನ್ನ ನೆಲ್ಲು ನೋಡಿ
ದಣಿದಿರುವವೆ ಕಾಡಿ-
ದೆಯಲ ಬಾರೆ ಓಡಿ

ನಿಮ್ಮ ನಿಮ್ಮ ವಿರಸ
ಸೃಷ್ಟಿಗೆಲ್ಲ ವಿರಸ
ನಿಮ್ಮ ಪ್ರೇಮ ಸರಸ
ಸೃಷ್ಟಿಗೆಲ್ಲ ಹರುಷ

ಬಾರೆ ಗೆಳತಿ ಬಾರೆ
ಕೃಷ್ಣ ಬಂದ ನೀರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತೆಯಲ್ಲಿ
Next post ರಾವಣಾಂತರಂಗ – ೩

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…