ಒಕ್ಕಲೆಬ್ಬಿಸದಿರಿ ನನ್ನ ಈ ತುಂಡು ನೆಲವೆ ನನಗೆ ಅನ್ನ ಚಿನ್ನ ಅಗೋ…ಅದೇ ನಾ ಕೈಯಾರೆ ಬೆಳೆದ ನಿಂಬೆ ದಾಳಿಂಬೆ ಹೇಗೆ ತೂಗಿದೆ ನೋಡಿ ಚಾಚಿ ರೆಂಬೆ ಕೊಂಬೆ ಇಗೋ… ಇದೇ ಬಾಳೆ…. ಹೊಂಬಾಳೆ ಇನ್ನೇನು ಹಣ್ಣಾಗಲಿದೆ ನಾಳೆ ಇನ್ನೀ&#8230...

ಇದ್ದಿಲು ಎಲ್ಲವೂ ಖರ್ಚಾಗಿದೆ: ಬಕೆಟ್ ಖಾಲಿ. ಸಲಿಕೆ ನಿಷ್ಟ್ರಯೋಜಕ: ಒಲೆ ತಣ್ಣಗಾಗಿದೆ. ಕೋಣೆ ತಣ್ಣಗೆ ಕೊರೆಯುತ್ತಿದೆ. ಕಿಟಕಿಯ ಹೊರಗೆ ಮಂಜು ಮುಚ್ಚಿದ ಎಲೆಗಳು ಸ್ತಬ್ಧವಾಗಿ ನಿಂತಿವೆ; ಆಕಾಶ ಬೆಳ್ಳಿಯ ಪರದೆಯಾಗಿದೆ. ನನಗೆ ಇದ್ದಿಲು ಬೇಕಾಗಿದೆ. ...

ಹಕ್ಕಿ-ಪಕ್ಕಿ ಮೂಕವಾಗಿ ಗಿರಿ-ಶಿಖರ ಮೌನತಾಳಿ ಗಿಡ-ಮರ ಆಗೊಮ್ಮೆ ಈಗೊಮ್ಮೆ ಸುಯ್ಯೆಂದು ಉಸಿರು ಬಿಡುತಿವೆ ಎಲ್ಲೋ ನರಿಯ ಕೂಗೊಂದು ಕೇಳುತಿದೆ ಜಿರ್ರೋ ಎನ್ನುತಿದೆ ಜೀರುಂಡೆ ಖಗ-ಮೃಗ ಬರುತಿಹವು ಬಾಯಾರಿಸಲು ನದಿ-ಸಾಗರದೊಡಲು ಸೇರಲು ಬಯಸುತಿವೆ ಹಳ್ಳ-ಕ...

ಅಮ್ಮನೇಕೆ ಮೌನವಾಗಿದ್ದಾಳೆ? ನಕ್ಕು ನಲಿದು ನಮ್ಮೊಡನಾಡಿದ ಬೈದು ಹೊಡೆದು ನಮ್ಮ ತಿದ್ದಿದ ಅಮ್ಮನೇಕೆ ಮೌನವಾಗಿದ್ದಾಳೆ? ನೋವು ನಲಿವು ಎಲ್ಲ ತಿಂದು ಏರು ಪೇರುಗಳಲಿ ಈಜಿ ನಮ್ಮ ಜೀವಚೇತನವಾಗಿದ್ದ ಅಮ್ಮನೇಕೆ ಮೌನವಾಗಿದ್ದಾಳೆ? ಪ್ರೀತಿಯ ಹಲವು ಹರವುಗಳ ...

ನನ್ನ ವಾಣಿಗೆ ಸಾರವಾಗೆಂದು ಮರಮರಳಿ ನಿನ್ನ ಕರೆಯುತ್ತ ಎಷ್ಟೆಲ್ಲ ಸ್ಫೂರ್ತಿಯ ಪಡೆದೆ, ಈಗ ಕಬ್ಬಿಗರೆಲ್ಲ ನನ್ನ ದಾರಿಗೆ ಹೊರಳಿ ಅವರ ಕವಿತೆಗೆ ನಿನ್ನ ನೆರಳಲ್ಲಿ ಮೆರವಣಿಗೆ. ನನ್ನಂಥ ಮೂಕನನೂ ಹಾಡಹಚ್ಚಿದ ಕಣ್ಣು ಇನ್ನಿಂಥ ದಡ್ಡನನೂ ಹಾರಹಚ್ಚಿದ ಚೆಲ...

ರಘುಕುಲ ಸೋಮನವತಾರ ಸೂರ್ಯವಂಶದಲ್ಲಿ ಅನೇಕ ರಾಜರು ಜನ್ಮ ತಾಳಿ ಅಯೋದ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾವಿರಾರು ವರ್ಷ ರಾಜ್ಯಭಾರ ಮಾಡಿದರು. ಅವರಲ್ಲಿ ಅಜರಾಯನ ಮಗನೇ ಪ್ರಸಿದ್ಧನಾದ ದಶರಥರಾಜನು; ಇವನು ಪರಾಕ್ರಮಶಾಲಿಯಾಗಿದ್ದು ದೇವತೆಗಳೂ ಇವ...

ಅಂದು ಏನು ಹೇಳಿದ್ದೆ ತಂದೆ ನೆನ- ಪಿಹುದೆ ನಿನಗೆ ಮತ್ತೆ? ಕೈಯನೆಂದಿಗೂ ಬಿಡೆನು ಎಂದಿದ್ದೆ ಮತ್ತೆ ಏಕೆ ಬಿಟ್ಟೆ ? ದಿವ್ಯ ಜೀವನದ ಸಾಧನೆಗೆ ಎಂದು ಬದ್ಧನಾಗಿ ಇದ್ದೆ ಉನ್ಮಾದದೊಂದು ಅಮಲಿನಲಿ ಗುರುವೆ ನೆಲಕುರುಳಿ ಹೊರಳಿ ಬಿದ್ದೆ ವಿಷವ ನೆಕ್ಕಿ ಬದುಕ...

ನೆರಿಗೆ ಸೀರೆಯುಟ್ಟ ನಾರಿ ಚಂದ್ರ ಮೊಗದ ನನ್ನ ಪೋರಿ ಬಂದು ನಿಲ್ಲು ಒಂದು ಸಾರಿ ಕೇಳುವೆ ನಾ ನಿನ್ನ ಮಧುರ ವಾಣಿ ಸುಮದ ಹಾಗೆ ನಿನ್ನ ಮನ ದುಂಬಿಯಾಗಿ ಗುಣುಗಲೇನು? ಮಧುವಿನಂತೆ ನಿನ್ನ ತನುವು ಮಡಿಲಲಿ ಮಲಗಿ ಹೀರಲೇನು? ಚಂದದಲಿ ನೀನು ಚಂದ ವರ್ಣಿಸಲಸಾಧ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...