ಮರೆಯ ಬೇಡ ಮನುಜ ನೀನು ಮಾನವೀಯತೆ| ಮೆರೆಯಬೇಡ ಮನುಜ ನೀನು ಮದವೇರಿದ ಪ್ರಾಣಿಯಂತೆ| ಮನುಷ್ಯಗಲ್ಲದೆ ಮಾನವತೆಯಮೌಲ್ಯ ಪ್ರಾಣಿಗಳಿಗೆ ಶೋಭೆ ತರುವುದೇ|| ಅಧಿಕಾರ ದರ್ಪ ಯಾರ ಬಳಿ ಶಾಶ್ವತವಾಗಿ ನಿಂತಿದೆ| ಯಾರಬಳಿ ಲಕ್ಷ್ಮಿ ಸದಾ ಇರುವಳೆಂದು ಭ್ರಮಿಸುವೆ|...

ಅವಳು ಮುಂಜಾನೆ ಎದ್ದು ಜಳಕ ಮಾಡಿ ಕನ್ನಡಿ ಮುಂದೆ ನಿಂತಳು. ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನದಲ್ಲಿ ಶಾಂತಿ ಮೂರೂ ಅವಳಿಗೆ ಕನ್ನಡಿಯಲ್ಲಿ ಕಂಡಿತು. ನಾನು ಎಷ್ಟು ಆರೋಗ್ಯವಂತೆ ಎಂದುಕೊಂಡಳು. ವೃತ್ತ ಪತ್ರಿಕೆ ಓದಲು ಆರಾಮವಾಗಿ ಕುಳಿತಳು. ಅದ...

ಗಾಯಗೊಂಡು ಚೀರುವೆದೆಗೆ ಗುಟುಕು ಕೊಟ್ಟೆ ಮುಖವಾಡಗಳ ಗೂಢದಲ್ಲಿ ಬುದ್ಧಿಬುರಖಾಗಳ ಬಡಿವಾರದಲ್ಲಿ ಗಾಢವಾಗದೆ ಗಡಿದಾಟಿ ದೋಣಿ ಮೀಟಿ ಏಕಾಂತ ಏದುಸಿರಿಡುವಾಗ ಕಾಂತಾಸಮ್ಮಿತವಾದೆ. ಕೆಣಕುವ ಬೆಡಗು ಗುಟರುವ ಗುಡುಗು ಚಳಿಯ ನಡುಗು- ಗಳ ಉಜ್ಜುವಿಕೆಯಲ್ಲಿ ಕಿ...

ಸತೀಶ್ ಕುಲಕರ್ಣಿಯವರು ಚಳವಳಿಗಳಲ್ಲಿ ತೊಡಗಿ ಕೊಂಡವರು. ಸಿದ್ಧಾಂತ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕ್ರಿಯಾಶೀಲ ವ್ಯಕ್ತಿತ್ವ ಅವರದು. ತಾವು ನಂಬಿದ ತತ್ವಾದರ್ಶನಗಳನ್ನು ಬೀದಿನಾಟಕಗಳ ಮೂಲಕ ಹೇಳುವ ಪ್ರಯ...

ಏನು ಪೇಳಿದನಮ್ಮ ನನ್ನಯ ಪ್ರಿಯನು ಏನು ಸಂದೇಶವ ನೀ ತಂದೆ ಸಖಿಯೆ || ಪ || ಏತಕೆ ಬಾರನೋ ಪ್ರಾಣಪ್ರಿಯನಮ್ಮ ಕಾತರಿಸಿದೆ ಜೀವಾ ತಾಳಲಾರೆನಮ್ಮ ಯಾತನೆ ತಾಳೆನು ಮುಳ್ಳ ಮೇಲಿನ ಬಾಳು ಆತನ ಮಾತೇನು ಪೇಳೆ ಸಖಿ || ೧ || ಕಣ್ಣಲಿ ಅವನದೆ ರೂಪವು ಕುಣಿದಿದೆ ...

ಈ ಗತಿಶೀಲ ಜಗದಲ್ಲಿ ಅತಿಯಾಗದೆ ಇರು ಇತಿಯಾಗದೆ ಇರು ಶ್ರುತಿ ಮಾಡಿದ ವೀಣೆಯ ಹಾಗಿರು ನುಡಿಸುವ ಗಾಯಕ ನುಡಿಸುವ ವೇಳೆಗೆ ನಡೆಸುವ ಗುರು ನಡೆಸುವ ವೇಳೆಗೆ ತಡವರಿಸುವ ಭಯ ಯಾತಕೆ ಹೇಳು ಮಗುವಿನ ಸೋಜಿಗ ಅಂತೆಯೆ ಇರಲಿ ನಗುವಿನ ಚೆಲುವು ಮಾಯದೆ ಇರಲಿ ಮುಗಿ...

ವಾಗ್ದೇವಿಯು ಬಾಗಿಲು ಹಾಕಿ ತಿಪ್ಪಾಶಾಸ್ತ್ರಿಯು ಹೇಳಿದ ಜಾತಕ ಭಾವವನ್ನು ಕುರಿತು ತಾಯಿಯ ಕೂಡೆ ಪ್ರಸ್ತಾಸಿಸುತ್ತಿರುವಾಗ ವೆಂಕಟಪತಿ ಆಚಾರ್ಯನು ಮೆಲ್ಲನೆ ಜಗಲಿಯಿಂದ ಕೆಳಗಿಳಿದು ಬಾಗಲಿಗೆ ಕೈತಟ್ಟಿ “ಭಾಗೀರಥಿ! ಭಾಗೀರಥಿ” ಎಂದು ಕರೆದನು. “ಯಾರದು” ...

ಪ್ರೇಮಕೂ ಸುಳ್ಳಿಗೂ ಎಂತಹ ನಂಟು ಕವಿಯ ಕೇಳಬೇಕು ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಹೇಳಬೇಕು //ಪ// ಇವಳಿಗೆ ಅವನು ಹುಣ್ಣಿಮೆ ಚಂದ್ರ ಅವನಿಗೆ ಇವಳು ನೈದಿಲೆಯು ಇವರ ಮಿಲನವೆ ಮಧುಮಹೋತ್ಸವ ಇದಕೆ ಯಾವುದು ಎಣೆಯು! ಜಗತ್ತು ಎಂದರೆ ಅವನಿಗೆ ಇವಳು ಇವ...

12345...13

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...