ಆಯಸ್ಸು ಮುಗಿದಿಲ್ಲ ಕಾಲ ಮಿಂಚಿಲ್ಲ ಇನ್ನು ಈ ಗಳಿಗೆ ನಿನ್ನದು ಪಡೆದುಕೊ ಒಳಿತು ಕೆಡಕುಗಳೆರಡು ನಿನ್ನೆದುರು ಇರಲು ಯೋಚಿಸಿ ಆಯ್ಕೆ ಮಾಡಿ ನಿನ್ನ ಸುಧಾರಿಸಿಕೊ ಕ್ಷಣ ಹೊತ್ತಿನ ಸುಖ ಭ್ರಮೆಯಲ್ಲಿ ತೇಲಿ ನಿನ್ನ ನೀನು ನಾಶ ಮಾಡಿಕೊಳ್ಳಬೇಡ ಮನಸ್ಸಿನ ಆಟ...

ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ| ಕನ್ನಡ ಕೀರ್ತಿಯ ಎಲ್ಲೆಡೆ ಬೆಳಗುತ ಕನ್ನಡ ತನದಲಿ ಬಾಳೋಣ| ಕನ್ನಡಸೇವೆಯ ಮಾಡುತ ಕನ್ನಡ ತಾಯಿಗೆ ನಮಿಸೋಣ|| ಕನ್ನಡ ಕಲಿಸಿದ ಗುರುಗಳಿಗೊಮ್ಮೆ ಮನ ಮುಟ್ಟಿ ನಮಿಸೋಣ| ಕನ್ನಡ ಬೆಳೆಸಿದವರೆಲ್ಲರಿಗೊಮ್ಮೆ ತಲೆಯನು ಬಾಗಿಸ...

ಮನೆಯ ಮುಂದಿನ ಕಸ ಗುಡಿಸಿ ನೀರು ಚೆಲ್ಲಿ ವೃದ್ದೆ ಸುಂದರ ರಂಗವಲ್ಲಿ ಹಾಕುತ್ತಿದ್ದಳು. ಚುಕ್ಕಿ ಗೆರೆಗಳಲ್ಲಿ ಅವಳ ಆತ್ಮ ಲೀನವಾಗುತ್ತಿತ್ತು. ವಯಸ್ಸಾದ ವೃದ್ಧ ನೀರುಹಾಕಿ ತೊಳೆದು ಕಾರನ್ನು ಝಗಮಗಿಸುತ್ತಿದ್ದ. ಮಗನೊಂದಿಗೆ ಸ್ಕೂಟರ್ ಮೇಲೆ ಸೊಸೆ ಕುಳ...

ಬಸಿರು ತುಂಬಿದ ಮೋಡ ಕಾದು ಕರೆಯೊ ಭೂಮಿ- ಮುಗಿಲಿನ ಗಂಡ; ಮಳೆ ಮಗುವು ಎಲ್ಲೊ? ತೊಟ್ಟಿಲ ಸಿಂಗರಿಸಿ ಕಾದು ಕಣ್ಣರಳಿಸಿ ಕೂತೆವು ನಾವು ಕೂಸಂತು ಇಲ್ಲೊ. ಮುಗಿಲ ಮೈಯಿಳಿಯಿತೆ? ಕೆಟ್ಟ ಮುನಿಸಾಯಿತೆ? ನೆಲ ಮುಗಿಲು ಗುದ್ದಾಡಿ ಕಷ್ಟ ನಮಗೇ ಬಂತೆ? ನಮ್ಮ ಹ...

Tom Jones ಎಂಬ ಬಾಲಕ ಹುಟ್ಟುತ್ತಾ ಹೆತ್ತವರಿಂದ ತಿರಸ್ಕೃತನಾದ ಪರಿತ್ಯಕ್ತನಾಗಿ ಅನಾಥ ಶಿಶುವಾದಾಗಿನಿಂದ ತನ್ನ ಪ್ರೌಢಪ್ರಾಯದವರೆಗೆ ಹಲವು ರೀತಿಯಲ್ಲಿ ಅನುಭವಗಳ ಸಾರವನ್ನು ಪಡೆಯುತ್ತ, ಭಾವನಾತ್ಮನಾಗಿದ್ದರೂ ಗಟ್ಟಿಗೊಳ್ಳುತ್ತ, ಸಧೃಢನಾಗುತ್ತ, ಸಾ...

[ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದ ಕವಿಸಮ್ಮೇಳನದಲ್ಲಿ ಓದಿದ್ದು] ಓಂ, ಸಹ ನಾವವತು ; ಸಹ ನೌ ಭುನಕ್ತು; ಸಹ ವೀರ್‍ಯಂ ಕರವಾವಹೈ ; ತೇಜಸ್ವಿನಾವಧೀತಮಸ್ತು ; ಮಾ ವಿದ್ವಿಷಾವಹೈ. ಓಂ ಶಾಂತಿಃ ಶಾಂತಿಃ ಶಾಂತಿಃ ೧ ಮೊತ್ತಮೊದಲೇ, ಬೆಳಕಾಗಲೆಂ...

ಯಃ ಪಶ್ಯತಿ ಸ ಪಶ್ಯತಿ ಯಾರು ಕಾಣುವರು ಅವರು ಕಾಣುವರು ಕಾಣುವವನೇ ಮಹಾಮತಿ ಮಹಾ ಸೌಧದ ಸ್ಥಪತಿ ಮಹಾ ತಪಸ್ಸಿನ ಯತಿ ಒಂದೆ ಕಣಾ ಇಬ್ಬರ ಚೇತನ ಅವನಂತಿದ್ದರು ಇವನಂತಿದ್ದರು ಯಃ ಪಶ್ಯತಿ ಸ ಪಶ್ಯತಿ ಬಿರುಗಾಳಿಯ ಅತಿ ಮೆಲುಗಾಳಿಯ ಇತಿ ಒಂದೆ ಕಣಾ ಎರಡರ ಚೇ...

ಮೀರಮುನಷಿ ಅಶ್ವತ್ಥನಾರಾಯಣನ ಸಂಕೇತಕ್ಕನುಗುಣ ವಾಗಿ ದಾಮೋದರಪಂತರು ಎದ್ದು ನಿಂತು ವೇದವ್ಯಾಸನ ಮನವಿಯನ್ನು ಓದಲಾರಂಭಿಸಿದನು. ಹ್ಯಾಗೆಂದರೆ- “ಶ್ರೀಮದ್‌ರಾಜಾಧಿರಾಜಮಹ:ರಾಜ ವಸಂತನಗರದ ಭೂಪತಿಗಳ ಸಂಸ್ಥಾನಕ್ಕೆ ಕುಮುದಪುರದ ವೇದವ್ಯಾಸ ಉಪಾಧ್ಯನು ಅತಿ ...

ಬಣ್ಣ ಬಣ್ಣದ ಅಕ್ಷರಗಳಿಂದ ಬೀಗುತ್ತವೆ ಬೀದಿ ಬೀದಿಗಳಲ್ಲಿ ಜಾಹಿರಾತಿನ ಫಲಕಗಳು ಯಾವ ಅಕ್ಷರಗಳನ್ನೂ ಶಾಶ್ವತವಾಗಿ ತಮ್ಮೊಳಗೆ ಉಳಿಸಿಕೊಳ್ಳದೆ ನಿಸ್ವಾರ್‍ಥ ಸೇವೆ ಸಲ್ಲಿಸುತ್ತವೆ ಶಾಲೆಗಳಲ್ಲಿನ ಕಪ್ಪು ಹಲಗೆಗಳು *****...

ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ ಯಾವುದೊಂದು ಆಗಿದ್ದ೦ಗೀಗಿಲ್ಲ ಎಲ್ಲಾ ಬದಲಾಗಿ ಬಿಟ್ಟಿದೆ, ಯಾರಿದ್ದಾರೆ ಆಗಿನವರು? ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ ಆಗಿದ್ದಂಗೆ ಯಾರಿದ್ದಾರೆ ಈಗ ? ನಗ ನಗ್ತಾ ಕರೆದು ಮಾತಾಡೋರಿಲ್ಲ ಹರ್ಷೋಲ್ಲಾಸ ತೋರು...

1...2324252627...147

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...