ವಾಗ್ದೇವಿ – ೧೭

ವಾಗ್ದೇವಿ – ೧೭

ಮೀರಮುನಷಿ ಅಶ್ವತ್ಥನಾರಾಯಣನ ಸಂಕೇತಕ್ಕನುಗುಣ ವಾಗಿ ದಾಮೋದರಪಂತರು ಎದ್ದು ನಿಂತು ವೇದವ್ಯಾಸನ ಮನವಿಯನ್ನು ಓದಲಾರಂಭಿಸಿದನು. ಹ್ಯಾಗೆಂದರೆ-

“ಶ್ರೀಮದ್‌ರಾಜಾಧಿರಾಜಮಹ:ರಾಜ ವಸಂತನಗರದ ಭೂಪತಿಗಳ ಸಂಸ್ಥಾನಕ್ಕೆ ಕುಮುದಪುರದ ವೇದವ್ಯಾಸ ಉಪಾಧ್ಯನು ಅತಿ ವಿನಯದಿಂದ ಬರಕೊಂಡ ಅರ್ಜಿ, ದೇವರು! ನಾನು ಗೀರ್ವುಣ ಭಾಷೆಯಲ್ಲಿ ಅಭಿಜ್ಞತೆ ಯುಳ್ಳವದಾದ ಕಾರಣ ಕುಮುದಪುರದ ಶ್ರೀಮಠ ಚಂಚಲನೇತ್ರ ಯತಿ ಗಳು ತನ್ನ ಮನದ ನನ್ನನ್ನು ಪುರಾಣಿಕನಾಗಿ ನೀಮಿಸಿರುತ್ತಿದ್ದರು. ನಾನು ಆ ಉದ್ಯೋಗವನ್ನು ಸರಿಯಾಗಿ ನಡಿಸಿಕೊಂಡು ಬರುತ್ತಿದ್ದೆ. ಈ ಯತಿಗಳು ಷಡ್ವೈರಿಗಳನ್ನು ಜಯಿಸಿದವರೆಂಬ ಪ್ರಖ್ಯಾತಿಯುಳ್ಳವರಾಗಿ ತಮ್ಮ ಸದ್ಗುಣ ಗಿಂದ ಸಕಲ ಜನರಿಗೂ ಮಾನ್ಯರಾಗಿರುವ ಕಾಲದಲ್ಲಿ ದುರದೃಷ್ಟದಿಂದಲೋ ದುರ್ದಶೆಯಿಂದಲೋ ವಾಗ್ದೇವಿ ಎಂಬ ಹೆಸರಿನ ಒಬ್ಬಕೆಯ ಮೋಹಜಾಲ ದಲ್ಲಿ ಸಿಕ್ಕಿಬಿದ್ದು ಯತಿಯಾಗಿ ತಾನು ನಡಿಯಬೇಕಾದ ಮಾರ್ಗವನ್ನೇ ಪರಿತ್ಯಜಿಸಿ ಹೆಸರು ಪೂರ್ತಿ ಸನ್ಯಾಸಧರ್ಮವನ್ನು ನಡೆಸುವ ತೀರಾ ಕಪಟ ಸನ್ಯಾಸಿಯಂತೆ ಪ್ರವರ್ತಿಸುವದರಿಂದ ಹುಟ್ಟುವ ಅಸಹ್ಯವನ್ನು ತಡೆಯ ಕೂಡದೆ ಒಂದು ದಿನ ಏಕಾಂತದಲ್ಲಿ ನಾನು ರವಷ್ಟು ಅನುವಾದಿಸಿದ್ದಕ್ಕಾಗಿ ಅವರು ಏಕಾಏಕಿ ಪ್ರಕೋಪಿಸಿ ನನ್ನ ಮೇಲೆ ದ್ವೇಶತಾಳಿದರು. ಮತ್ತು ನನ್ನನ್ನು ಉದ್ಯೋಗದಿಂದ ತೆಗೆದುಹಾಕಿದರು. ನಾನು ಸುಮ್ಮಗಾದೆ. ಹಾಗೆಯೇ ಕೆಲವು ದಿವಸಗಳಲ್ಲಿ ನದೀ ಸ್ಥಾನಕ್ಕೆ ಹೋಗುವ ನೆವನದಿಂದ ವಾಗ್ದೇವಿಯು ತನ್ನ ವೆಂಪುತೋರಸುವದಕ್ಕಾಗಿ ಗೆಳೆಯರ ಕೂಟದಿಂದ ಪರಿವೃತಳಾಗಿ ಮಾಡುತ್ತಿದ್ದ ವರ್ಯಟನವನ್ನು ಕೆಲವು ಯವ್ವನಸ್ಥರು ನೋಡಿ ಪದ್ಯರೂಪವಾಗಿ ಅವಳನ್ನು ನಿಂದಿಸಿದ ಸಿಟ್ಟಿನಿಂದ ಚಂಚಲ ನೇತ್ರ ಸ್ವಾಮಿಗಳು ಆ ಯೌವ್ವನಸ್ಥರನ್ನು ಬಹಿಷ್ಟರಿಸಿ ಅವರನ್ನು ಸಂಪರ್ಕ ವಾಗಿ ನಡಕೊಂಡರೆಂಬ ಹೇತುವಿನಿಂದ ಮರ್ಯಾದಸ್ಪರಾದ ಬೇರೆ ಕೆಲವರನ್ನು ಸಹಾ ತ್ಯಜಿಸಿಟ್ಟಿದ್ದಾರೆ. ಈ ಯತಿಗಳ ಭ್ರಷ್ಟತನದಿಂದ ಇಡೀ ಬ್ರಾಹ್ಮಣ್ಯಕ್ಕೆ ಅಸೂಯೆ ಉಂಟಾಗಿಯದೆ. ಹಾಗೆ ತ್ಯಜಿಸಲ್ಪಟ್ಟಿವರಲ್ಲಿ ನಾನು ಒಬ್ಬನಾದುದರಿಂದ ನಾನು ಮಾಡುವ ಅನ್ಯಾಯದ ಬಾಧೆಯನ್ನು ತಡೆಯಲಿ ಕ್ಕಾಗದೆ ವಸಂತನಗರದಲ್ಲಿರುವ ಬೇರೆ ನಾಲ್ಕು ಮರಾಧಿಪತಿಗಳಿಗೆ ಬರಹ ಮೂಲಕವಾಗಿ ಅರಿಕೆ ಮಾಡಿಕೊಂಡೆನು. ಆದರೆ ಅವರ್ಯಾರೂ ನನ್ನ ಮನ ವಿಗೆ ಕಿವಿಕೊಡದೆ ನನಗೆ ಧಿಕ್ಕರಿಸಿಬಿಟ್ಟಿದ್ದಾರೆ. ಹೀಗಾಗಿ ನನ್ನ ಸಂಕಷ್ಟವು ಮತ್ತೂ ಹೆಚ್ಚಾಗಿಯದೆ ಆದುದರಿಂದ ಮಹಾಸ್ವಾಮಿಯ ಓಲಗದಲ್ಲಿ ನಿವೃತ್ತಿ ಹೊಂದುವ ಆಶೆಯಿಂದೆ ಸನ್ನಿಧಾನದ ಮರೆಹೊಕ್ಳಿರುತ್ತೇನೆ. ನೀತಿ ಪರಿಪಾಲ ನಾರ್ಥವಾಗಿ ಮಹಾಸ್ವಾಮಿಗಳ ಸರ್ಕಾರದವರು ಲೋಕನಿಂದ್ಯವಾದ ಕೃತ್ಯ ದಲ್ಲಿ ಅಮರಿಕೊಂಡಿರುವ ಸ್ತ್ರೀಲಂಪಟ ಯತಿಯನ್ನು ದಂಡಕ್ಕೆ ಗುರಿಪಡಿಸ ಬೇಕಾಗಿ ದೀನಭಾವದಿ:ದ ಬೇಡಿಕೂಳ್ಳುತ್ತೇನೆ, ದೇವರು”

“ಓದಿ ಹೇಳಿದ ಅರ್ಜಿಯನ್ನು ನೀನು ಬರಕೊಂಡದ್ದೋ? ಅದರಲ್ಲಿ ಬರೆದ ಸಂಗತಿಗಳೆಲ್ಲ ಯಥಾರ್ಥವೋ?” ಎಂದು ಮೀರಮುನಷಿಯವರಿಂದ ಕೇಳಲ್ಪಟ್ಟಾಗ “ಅರ್ಜಿಯಲ್ಲಿ ಅನೃತ ಒಂದಾದರೂ ಇಲ್ಲ, ಶ್ರೀರಾಮನಾಣೆ” ಎಂದು ವೇದವ್ಯಾಸ ಉಪಾಧ್ಯನು ಪ್ರಮಾಣಮಾಡಿ ಹೇಳಿದನು. ರಾಮಾ ಎಂಬ ಶಬ್ದವನ್ನು ಕೇಳಿದೊಡನೆ ಕಿರಿ ದಿವಾನನು ತನ್ನ ಕಿವಿಗಳಲ್ಲಿ ಕೈಬೆರಳು ಗಳನ್ನು ಹೊಗಿಸಿಬಿಟ್ಟು “ಶಿವಾ ಶಿವಾ ಎನ್ನಬಾರದೇ ಹಾರುವಾ” ಎಂದನು. “ಶಿವಾ ಶಿವಾ” ಎಂಬ ಶಬ್ದ ಕೇಳುತ್ತಲೇ ಹಿರೀ ಪ್ರಧಾನನು ತನ್ನ ಕಿವಿಗಳನ್ನು ತದ್ರೀತಿ ಮುಚ್ಚಿಕೊಂಡು “ರಾಮ ರಾಮ” ಎಂದನು. ಕೊಂಚ ಸಮಯದ ವರೆಗೆ ಹಿರೆ ಮತ್ತು ಕಿರೆ ದಿನಾನರು ಗಾಳಿಯೂ ಮಿಸುಕಾಡದಂತೆ ಕಿವಿಗಳನ್ನು ಮುಚ್ಚಿಕೊಂಡೇ ಅವರವರ ದೇವರ ನಾಮಗಳನ್ನು ಉಚ್ಚರಿಸಿದರು. ಶಾನೆ ಹೊತ್ತು ಹೀಗೆ ಕಳೆದರೆ ಅರಸನು ಕೋಪಿಸುವನೆಂಬ ಹೆದರಿಕೆಯಿಂದ ಉಭ ಯ ದಿವಾನರು ತಮ್ಮ ಕಿವಿಗಳಿಗೆ ಅವುಗಳ ಸ್ವಾತಂತ್ರ್ಯವನ್ನು ಕೊಟ್ಟರು. “ನೀನು ಮನವಿಯಲ್ಲಿ ಯತಿಯ ಮೇಲೆ ಬರೆದಿರುವ ಅಪವಾದವನ್ನು ಪ್ರತಿ ಪಾದನ ಮಾಡುವಿಯಾ?” ಎಂದು ಅರಸನು ಪ್ರಶ್ನೆಮಾಡಲು, “ಮಹಾ ಸ್ವಾಮಾ, ನನ್ನ ಕೇಳಿಕೆಯನ್ನು ಪ್ರತಿಪಾದಿಸುವದಕ್ಕೆ ಸಿದ್ಧನಾಗಿರುತ್ತೇನೆ. ವಿಚಾರಣೆಗೆ ಮಾತ್ರ ಅಪ್ಪಣೆಯಾಗಲಿ” ಎಂದು ವೇದವ್ಯಾಸನು ಬೇಡಿ ಕೊಂಡನು. ಅರ್ಜಿದಾರನ ವಕೀಲನು ಏನಾದರೂ ಹೇಳಿಕೊಳ್ಳುವದಕ್ಕೆ ಆಶೆಯುಳ್ಳವನೋ ಎಂದು ಕಿರೀದಿವಾನನು ಕೇಳಿದಾಗ ವಕೀಲನು ಸಣ್ಣ ದೊಂದು ಉಪನ್ಯಾಸವನ್ನು ಮಾಡಿದನು. ಹ್ಯಾಗೆಂದರೆ–

ಮಹಾಸ್ವಾಮಿ, ಸಕಲಸಂಗತಿಗಳು ಫಿದ್ವಿಯ ಅರ್ಜಿಯಲ್ಲಿ ಕೂಲಂಕ ಷವಾಗಿ ಬರಿಯೋಣಾಗಿದೆ. ಪರಂತು ಅವುಗಳ ಯಥಾರ್ಥಕತೆಯನ್ನು ನಿಷ್ಕರ್ಷೆ ಮಾಡುವ ಹಾಗೆ ಒಂದು ನ್ಯಾಯವಾದ ವಿಚಾರಣೆಯು ಅಗತ್ಯವದೆಯಷ್ಟೇ. ಪರಂತು ಫಿದ್ವಿಯು ಮಾರ್ಗತಪ್ಪಿ ಸನ್ನಿಧಾನದ ಮುಂದೆ ಬಂದವನಲ್ಲ. ಅಂದರೆ ಅವನು ಮುಂದಾಗಿ ನಾಲ್ಕು ಮಠಾಧಿಪತಿಗಳಿಗೆ ಚಂಚಲನೇತ್ರರ ದೂರನ್ನು ಹೇಳಿದ್ದಾನೆ. ಪರಂತು ಆ ಯತಿಗಳು ಫಿದ್ವಿಯ ಮಾತಿಗೆ ಕಿವಿಗೊಡದೆ ಅವ ನನ್ನು ತುಚ್ಛೇಕರಿಸಿದ ದೆಸೆಯಿಂದ ಅವನು ಕಳೆಗುಂದಿ ಮಹಾಸ್ವಾಮಿಯ ಪಾದಗಳ ಮುಂದೆ ಬಂದು ನಿವೃತ್ತಿ ಹೊಂದುವನೆಂಬ ಕೋರಿಕೆಯಲ್ಲಿದ್ದಾನೆ. ಮುಖ್ಯವಾಗಿ ಅವನು ಮುಯ್ಯಿಗೆ ಮುಯ್ಯಿ ತೀರಿಸಲಿಕ್ಕೆ ಬಂದವನಲ್ಲ, ಅವನ ನಿಜಸ್ಥಿತಿ ತಿಳಿದವರು ಅವನ ಮೇಲೆ ಅಂಥಾ ಅನುಮಾನ ಗ್ರಹಿಸಲಿಕ್ಕಿಲ್ಲ. ಅಂದರೆ ಇಡೀ ಬ್ರಹ್ಮಸಮೂಹಕ್ಕೇನೆ ಕುಂದು ಬರುವ ಹಾಗಿನ ಕುಮಾರ್ಗ ವನ್ಶು ಚಂಚಲನೇತ್ರರು ಅವಲಂಬಿಸಿ ಲೋಕ ನಿಂದ್ಯಕ್ಕೆ ಗುರಿಯಾಗಿರುವ ದರಿಂದ ಫಿದ್ವಿಯು ಕೇಳಿಕೊಳ್ಳುವ ನಿವೃತ್ತಿಯು ಅವನೊಬ್ಬನ ಮಟ್ಟಿಗೆ ಮಾತ್ರವಲ್ಲ, ಸರ್ವಲೋಕೋಪಕಾರಾರ್ಥವಾಗಿ ಅವನು ವದ್ದಾಡುವದಾ ಗಿರುತ್ತದೆ. ಪರಂತು ಏವಂಚ ಇಂಥಾ ಮೊಕದಮೆಯಲ್ಲಿ ಮಹಾಸ್ವಾಮಿಗಳ ಅಪ್ಪಣೆಯಾಗದಿದ್ದರೆ ನೀತಿಯೇ ಮುಳುಗುವದಾಗುತ್ತದೆ. ಪರಂತು ಹೆಚ್ಚಿಗೆ ಅರಿಕೆ ಮಾಡಿಕೊಳ್ಳಲಿಕ್ಕೆ ನಾನು ಶಕ್ತನಲ್ಲ. ಇನ್ನೂ ಫಿದ್ವಿಯ ಪುಣ್ಯ ಮಹಾ ಸ್ವಾಮಿಯ ಚಿತ್ತವೆನ್ನುತ್ತೇನೆ, ಪರಂತು ಬೇರೇನು ಹೇಳಲಿ ಪರಾಕೆ”

ವಕೀಲನ ಭಾಷಣದಲ್ಲಿ ಅಡಗಿರುವ ಪರಂತು ಎಂಬ ಶಬ್ದಗಳನ್ನು ಭೀಮಾಚಾರ್ಯನು ಜಾಗ್ರತೆಯಿಂದ ಎಣಿಸಿಕೊಂಡು ನೆನಸಿನಲ್ಲಿ ಇಟ್ಟು ಕೊಂಡನು. ಮತ್ತು ಮುಗುಳು ನಗೆಯಿಂದ ವೇದವ್ಯಾಸನ ಮೋರೆಯನ್ನು ನೋಡುತ್ತಾ “ಪರಂತು” ಗಳ ಮಾಲೆಯನ್ನು ಮಾಡಿಸಿ ನಿನ್ನ ಕುತ್ತಿಗೆಗೆ ಹಾಕಿಕೊ, ಕಾಸೊಂದು ಖರ್ಚಿಲ್ಲದೆ ಅದೃಶ್ಯಾಭರಣ ಒಂದು ದೊರಕಿಸಿ ಕೊಂಡಂತಾಯಿತು.” ಎಂದನು.

ವಾಡಿಕೆಯಂತೆ ಕಿರೀದಿವಾನರ ಅಭಿಪ್ರಾಯ ಮುಂದಾಗಿ ತಿಳಿಯುವ ಅವಶ್ಯವಿದೆ, ಎಂದು ಮಹಾಸ್ವಾಮಿಯ ಅಪ್ಪಣೆಯಾಯಿತು. ಆಗ ಚೆನ್ನಬಸ ವಯ್ಯನು ಎದ್ದು ನಿಂತು ಮಾತಾಡಲಿಕ್ಕೆ ಉಪಕ್ರಮಿಸಿದನು. “ಮಹಾಸ್ವಾ ಮಿಯ ಪಾದಕ್ಕೆ ನಮೋನಮಃ! ಈ ಹಾರುವನ ಮನವಿಯಲ್ಲಿ ಒಬ್ಬ ಸನ್ಯಾ ಸಿಯ ಮೇಲೆ ಘೋರವಾದ ದೋಷಾರೋಪಣೆ ತುಂಬಾ ಇದೆ. ಹಾರುವರ ಮಕ್ಕಳು ಇಂಥಾ ಭಂಡಾಟ ಮಾಡಬಹುದೇ? ಬಾಯಿಯಲ್ಲಿ ಬಣ್ಣಾಚಾರ ನಡತೆಯಲ್ಲಿ ಅನಾಚಾರವಾಯಿತಲ್ಲ! ಪ್ರಪಂಚದ ಗೊಡವೆಯನ್ನು ಬಿಡಬೇ ಕಾದ ಯತಿಯು ಸ್ತ್ರೀಮೋಹಕ್ಕೆ ಒಳಗಾಗಿ ಮನಸ್ವಿ ನಡಕೊಳ್ಳುವದಾದರೆ ಅವನ ಗುರುತ್ವ ಹ್ಯಾಗೆ ಉಳದೀತು? ಅವನು ಶಿಷ್ಯರಿಗೆ ಹೇಗೆ ಮಾನ್ಯನಾ ದಾನು? ಲೋಕದಲ್ಲಿ ಧರ್ಮಾಧರ್ಮ ವಿಚಾರ ಹ್ಯಾಗೆ ನಡೆದೀತು? ಮಹಾ ಸ್ವಾಮಿಯ ರಾಜ್ಯದಲ್ಲಿ ಇದುವರಿವಿಗೂ ಇಂಥಾ ಹೊಲಸು ನಡೆದಂತೆ ನನ್ನ ಅನುಭವದಲ್ಲಿಲ್ಲವು. ಈಗ ಎದುರಿಗೆಬಂದಿರುವ ಪ್ರಕರಣದಲ್ಲಿ ಶೀಘ್ರ ಅನ್ವೇ ಷಣ ಮಾಡುವದೇ ಕರ್ತವ್ಯವೆಂದು ನನ್ನ ಮನಸ್ಸಿಗೆ ತೋರುತ್ತೆ. ಆ ಕಪಟ ಯತಿಯನ್ನೂ ಅವನ ಸತಿಯನ್ನೂ ರಾಜದ್ವಾರಕ್ಕೆ ಕರತರಿಸಿ ಶಿಕ್ಷೆಗೆ ಗುರಿ ಪಡಿಸುವದು ನ್ಯಾಯವಾದೀತೆಂಬ ನನ್ನ ವಿಜ್ಞಾಪನೆಯು ಮಹಾಸ್ವಾಮಿಯ ಚಿತ್ತಕ್ಕೆ ಒಡಂಬಡಿಕೆಯಾಗುವದೆಂದು ಭಾವಿಸುತ್ತೇನೆ. ಹೆಚ್ಚಿಗೆ ಅರಿಕೆ ಮಾಡಿಕೊಳ್ಳಲಿಕ್ಕೆ ಪಾದಸೇವಕನು ಶಕ್ತನಲ್ಲ.”

ಹಿರೇ ದಿವಾನರ ಅಭಿಪ್ರಾಯ ಹ್ಯಾಗೆಂದು ಅರಸನು ಕೇಳಿದನು. ಆದಿ ಕೇಶವರಾಯನು ಬಿನ್ನವಿಸಿದ್ದೇನಂದರೆ–

“ಮಹಾಸ್ವಾಮಿಯ ಪಾದಕ್ಕೆ ಬಡಕಿಂಕರನು ಹೆಚ್ಚು ಸಮಯ ಅರಿಕೆ ಮಾಡಿಕೊಳ್ಳತಕ್ಕದ್ದೇನದೆ? ಈ ಮೊಖದಮೆಯಲ್ಲಿ ದೋಷಾರೋಪಣೆ ಮಾಡ ಲ್ಪಟ್ಟ ಯತಿಯು ವೈಷ್ಣವಮತದ ಸನ್ಯಾಸಿಯಾಗಿ ಅದೇ ಮತದವನಾದ ನನಗೂ ಮಾನ್ಯನಾದ ಪ್ರಯುಕ್ತ ನನ್ನ ಅಭಿಪ್ರಾಯ ಎಷ್ಟು ನಿಷ್ಪಕ್ಷಪಾತದ್ದಾದರೂ ನಾನು ವಶೀಲಿ ಮಾಡುತ್ತೇನೆಂಬ ಅಪವಾದ ಜನರು ನನ್ನ ಮೇಲೆ ಹಾಕದೆ ಇರಲಾರರು. ಅದು ಹಾಗಿರಲ್ಲಿ ಪ್ರಕೃತದ ವಿಚಾರದಲ್ಲಿ ನನ್ನ ಅಭಿಪ್ರಾಯ ಹೇಳುವದಕ್ಕೆ ನಾನು ಅಂಜತಕ್ತ ಅಗತ್ಯವೇನೂ ಇಲ್ಲ. ಒಬ್ಬ ಯತಿಯ ಮೇಲೆ ಒಬ್ಬಾತನು ಎದುರು ನಿಂತು ದೋಷಾರೋಪಣೆ ಮಾಡುವದಕ್ಕೆ ಧೈರ್ಯಪಟ್ಟಾಗ ಅದನ್ನು ಕುರಿತು ಪರಿಶೋಧನೆ ಮಾಡಿ ವ ಸತ್ಯಾಸತ್ಯ ನಿಷ್ಕರ್ಷೆಮಾಡುವದು ಬೇರೆ ನಾಲ್ಕು ಮಠದವರ ಕೆಲಸವಾಗಿತ್ತು. ಪರಂತು ಅವರು ವಾದಿಯ ಬಿನ್ನಪವನ್ನು ಗಣ್ಯಕ್ಕೆ ತಾರದೆ ಸುಮ್ಮಗಿರುವದು. ಕೇವಲ ಅನ್ಯಾಯವಾದ್ದೆಂತ ನಾನು ತಿಳಕೋಥೇನೆ. ವಾದಿಯು ಮಹಾಸ್ವಾಮಿಯ ಮುಂದೆ ತಂದ ಮನವಿಯು ನಿಷ್ಠಾರಣವಾ ದ್ದೆಂದು ಯಾರೂ ಹೇಳಕೂಡದು. ವಿಚಾರಮಾಡತಕ್ಕ ಮರಾಧಿಪತಿಗಳು ಈ ವಿಷಯದಲ್ಲಿ ಪ್ರವೇಶಿಸದೆ ಇದ್ದಕಾರಣ ವಾದಿಯು ಮಹಾಸ್ವಾಮಿಗೆ ದೂರು ಕೊಟ್ಟಿದ್ದು ಸರಿಯಾದ್ದೇ, ಯತಿಯನ್ನೂ ವಾಗ್ದೇವಿಯನ್ನೂ ಕರತರಿಸಿ ಶಿಕ್ಷೆಗೆ ಗುರಿಪಡಿಸಬೇಕೆಂಬಂತೆ ಕಿರೀ ದಿನಾನರು ಅಭಿಪ್ರಾಯಪಟ್ಟಿದ್ದು ಉಚಿತವೆಂದು ನಾನು ಹ್ಯಾಗೆ ಹೇಳಲಿ! ಮತಸಂಬಂಧವಾದ ಕಾರ್ಯದಲ್ಲಿ ಬೇರೆ ಮರಾಧಿಪತಿಗಳು ಪ್ರವೇಶಿಸಿ, ತಮ್ಮ ಹಾಗೆ ಮಠಾಥಿಪತಿಯಾದ ಇನ್ನೊಬ್ಬ ಸನ್ಯಾಸಿಯ ಮೇಲೆ ಬಂದ ಅವಪಾದದ ಮೂಲಶೋಧನೆ ಮಾಡದೆ ಹೋದರೆ ಮಹಾಸ್ವಾಮಿಯ ಸರ್ಕಾರದಿಂದ ಆಯಾ ಮಠಕ್ಕೆ ಸಲ್ಲುವ ತಸ್ದೀಕುಇನಾಮು ಉತ್ತಾರ ಇತ್ಯಾದಿ ಉಚಿತಗಳನ್ನು ತಾಮಸವಿಲ್ಲದೆ ಜಫ್ತುಮಾಡುವ ಅಗತ್ಯಬೀಳುವದೆಂದು ಎಚ್ಚರಿಸಿ, ಅವರು ಆ ಮೇಲೆಯೂ ಸುಮ್ಮಗಿದ್ದುಕೊಂಡರೆ ಮಹಾಸ್ವಾಮಿಯ ಸನ್ನಿಧಿಯಿಂದಲೇ ಮುಂದಿನ ವಿಚಾರಣೆಯು ನಡಿಯುವದು ವಿಹಿತನಾದ ಮಾರ್ಗವೆಂತ ನನಗೆ ತೋರು ತ್ತದೆ. ಹೆಚ್ಚು ಅರಿಕೆಮಾಡಿ ಕೊಳ್ಳಲಿಕ್ಕೆ ಶಕ್ತನಲ್ಲ, ಮಹಾಸ್ವಾಮೀ!”

ಬಳಿಕ ಅರಸನು ತನ್ನ ಗುರುವಿನ ಮುಖವನ್ನು ನೋಡಿದಾಗ ಕೊಂಚ ಸಮಯ ಬಾಯಿಬಿಚ್ಚದೆ ಕೊನೆಗೆ “ಜಿನಧರ್ಮವನ್ನು ಪಾಲಿಸು? ಎಂದು ದೀರ್ಫಸ್ವರದಿಂದ ಗುರುವರ್ಯನು ಹೇಳಿದನು. ಆ ಕ್ಷಣ ಜಮೇದಾರ ರಾಮಸಿಂಗನು ಘಂಟೆಯ ಸೂತ್ರವನ್ನು ಎಳೆದನು ಘಂಟೆಯಿಂದ ಗಂಭೀರ ನಾದ ಹುಟ್ಟಿತು. “ಹಿರೇ ದಿವಾನರ ಅಭಿಪ್ರಾಯವು ನ್ಯಾಯವಾದ್ದು. ಮಿಕ್ಕ ನಾಲ್ಕು ಸನ್ಯಾಸಿಗಳು ವೇದವ್ಯಾಸ ಉಪಾಧ್ಯನ ಮನವಿಯನ್ನು ಕುರಿತು ಯುಕ್ತವಾದ ಪರಾಮರ್ಶೆಯನ್ನು ಮಾಡದೆ ಪಕ್ಷಪಾತ ಮಾಡಿದರೆ ಅವರಿಗೆ ಸರ್ಕಾರದಿಂದ ಸಿಕ್ಕುವ ಇನಾಮು ಮರ್ಯಾದೆ ಕಳಕೊಳ್ಳ ಬೇಕಾಗುವದೆಂದು ಅವರಿಗೆ ಎಚ್ಚರಿಸಿ, ಆಜ್ಞಾ ಪ್ರಕಾರ ಹೋಗಬೇಕು. ಅವರು ಅದನ್ನು ಮನ್ನಿ ಸದೆ ಹೋದ ಪಕ್ಷದಲ್ಲಿ ಮನವಿದಾರನು ಪುನಃ ಅರಿಕೆಮಾಡಿಕೊಂಡರೆ ನೋಡಬಹುದು” ಎಂದು ರಾಜಾಜ್ಞೆಯಾಯಿತು.

ಈ ತೀರ್ಪು ಸರ್ವರಿಗೂ ಹಿತವಾಯಿತು. ಭೀಮಾಚಾರ್ಯನು ಅತಿ ಸಂತೋಷಪಟ್ಟನು. ತಾನು ವೇದವ್ಯಾಸ ಉಪಾಧ್ಯನ ಪಕ್ಷಹಿಡಿದು ಮಾಡಿದ ಪ್ರಯತ್ನವು ಸಫಲವಾಯಿತು. ಅದರ ಅವಸಾನವು ಹ್ಯಾಗೂ ಆಗಲಿ; ಇನ್ನು ತಾನು ಊರಿಗೆ ಹೋಗುವದೇ ಸೈ; ನೀನು ಬೇಕಾದ್ದು ಮಾಡೆಂದು ಗೆಳೆಯಗೆ ಹೇಳಲಾಗಿ– “ಆಹಾ! ನನ್ನ ಕೊರಳು ಕೊಯ್ಯುವ ಯುಕ್ತಿ ಮಾಡುವಿರಾ, ಆಚಾರ್ಯರೇ? ತಮ್ಮ ಪ್ರಯತ್ನದ ಬಲದಿಂದ ನಾನು ಗೆದ್ದ ಹಾಗಾಯಿತು. ಮುಂದೆ ನಡೆಯತಕ್ಕ ಕೆಲಸವಂತೂ ಪ್ರಯಾಸವಾದ್ದು. ಇದು ತಮಗೆ ಚನ್ನಾಗಿ ಗೊತ್ತಿದ್ದು ನನ್ನ ಕೈಬಿಡಲಿಕ್ಕೆ ನೋಡುತ್ತೀರಾ, ಸ್ವಾಮೀ? ತಮ್ಮ ಭಕ್ತನಾದ ನನ್ನ ಮೇಲೆ ಪೂರ್ಣ ವಾತ್ಸಲ್ಯವಿಟ್ಟು ನಡಿಸಬೇಕು” ಎಂದು ವೇದವ್ಯಾಸನು ನಮಿಸಿದನು. ಇವರೊಳಗೆ ಹೀಗೆ ಸಂಭಾವಣೆ ನಡಿಯುವಾಗ ಪರಂತು ಗೋವಿಂದ ಪಂಡಿತರು ಬಂದು– “ಆಚಾರ್ಯರೇ! ತಮ್ಮ ಪಂಥ ಗೆದ್ದಹಾಗಾಯಿತು” ಎಂದರು. *ಸ್ವಾಮೀ ತಮ್ಮ ಸಾಹಸದಿಂದ ಗೆದ್ದೆವು: ಮುಂದೆ ಆಗತಕ್ಕ ಮಹತ್ಕಾರ್ಯ ಹೀಗೆಯೇ ಇದೆ. ತಮ್ಮ ಕಟಾಕ್ಷದ ಪ್ರಭಾವದಿಂದ ಬಡ ವೇದವ್ಯಾಸನು ಜಯಪಡಬೇಕಲ್ಲದೆ ಅವನೊಬ್ಬನ ಕೈಯಿಂದ ಏನಾಗುವದು? “ಏಕೋ ದೇವೋ ಕೇಶವೋವಾ ಶಿವೋವಾ.’ ಕಡೇವರಿಗೂ ಯಾರಾದರೂ ಒಬ್ಬನನ್ನೇ ನಂಬಬೇಕಲ್ಲದೆ ಇದ್ದವರ ಕೈಕಾಲು ಹಿಡಿದು ಏನು ಪುರುಷಾರ್ಥವಿದೆ? ಕರುಣಿಗಳಾದ ತಮ್ಮ ಮೇಲೆ ವೇದವ್ಯಾ ಸನು ಪೂರ್ಣ ವಿಶ್ವಾಸವಿಟ್ಟರುವದು ದಿಟ. ಅವನನ್ನು ಸರ್ವಧಾ ಬಿಟ್ಟು ಹಾಕ ಬಾರದು” ಎಂದು ಭೀಮಾಚಾರ್ಯನು ಪಂಡಿತಗೆ ಹೊಗಳಿ ಚೆನ್ನಾಗಿ ಉಬ್ಬಿ ಸಿಬಿಟ್ಟನು. “ಆಚಾರ್ಯರೇ! ತಾವು ನನ್ನ ತೀರ್ಥರೂಪರಿಗೆ ಸಮಾನ ರಾಗಿದ್ದೀರಿ; ತಮ್ಮ ಮಾತು ನನ್ನ ತಲೆಯ ಮೇಲೆ ಇರಲಿ. ವೇದವ್ಯಾಸ ಉಪಾಧ್ಯನು ಹೆದರಬೇಕ್ಯಾಕೆ? ಪ್ರತಿಫಲವಾಗಿ ನಾನು ಒಂದು ಕಾಸಾದರೂ ಈಸುಕೊಳ್ಳದೆ ಅವನಿಗೆ ಪೂರ್ಣಸಹಾಯ ಮಾಡಲಿಕ್ಕೆ ಅನುಮತಿಸಿದ್ದೇನೆ; ಸಾವಿರ ಮಾತ್ಯಾಕೆ?” ಎಂದು ಧೈರ್ಯಕೊಟ್ಟು ಅಂದು ರಾತ್ರೆ ಭೋಜನಕ್ಕೆ ಬೇರೆ ಎಲ್ಲಿಗೂ ಹೋಗಕೂಡದು; ತನ್ನಲ್ಲಿಗೇನೇ ಬರಬೇಕಾಗಿ ವಕೀಲನು ವಿಪ್ರರಿಬ್ಬರಿಗೂ ಹೇಳಿಕೊಂಡನು. ಆ ರಾತ್ರಿ ವಕೀಲರಲ್ಲಿ ದಿವ್ಯಭೋಜನವಾ ಯಿತು. ಮರುದಿನ ಬೆಳಿಗ್ಗೆ ದ್ವಿಜರೀರ್ವರೂ ಗೋವಿಂದ ಪಂಡಿತನ ಅಪ್ಪಣೆ ಪಡಕೊಂಡು, ರ್‌ರುಷದಿಂದ ನೃಸಿಂಹಪುರಕ್ಕೆ ತೆರಳಿ, ನೃಪತಿಯ ಪರವಾನೇ ಕಾದುಕೊಂಡಿದ್ದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೇವೆ
Next post ಯಃ ಪಶ್ಯತಿ ಸ ಪಶ್ಯತಿ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…