ತಿದ್ದಬೇಕಾದ ಕೊರತೆಯೆ ಇಲ್ಲ, ಈ ಮಾತೆ ಶತ್ರುಗಳು ಕೂಡ ಮೆಚ್ಚುವ ಸತ್ಯವಾಗಿರುತ ಜನದ ಮನದಿಂದೆದ್ದ ನುಡಿಯೊಳೂ ಮೂಡಿದೆ. ನಿನ್ನ ಹೊರ ಚೆಲುವು ಮೆಚ್ಚಿಗೆ ಮಕುಟ ಗಳಿಸಿದೆ, ಮೆಚ್ಚಿ ನುಡಿಯುವ ನಾಲಿಗೆಗಳೆ ಕಣ್ಣಿಗೆ ಸಿಗುವ ನೋಟದಾಚೆಗು ಸಾಗಿ ಮತ್ತೇನೊ ಗ...

ವಿಧಿಯಾಡಿದ ಆಟ ಎಲ್ಲಾ ನಿಶ್ಚಯಿಸಿ ಅಚಲ ರಜೆ ಮುಗಿಸಿ ಹೊರಟು ಹೋದಾಗ ಪ್ರೇರಣಾಳಿಗೆ ಕನಸಿನ ಸಾಮ್ರಾಜ್ಯ ನಿರ್‍ಮಾಣವಾಗಿತ್ತು. ಈಗ ಹೆಚ್ಚಿನ ಸಮಯವೆಲ್ಲಾ ಸುಶೀಲಮ್ಮನ ಜತೆಗೆ ಕಳೆಯುತ್ತಿತ್ತು. ಅವರಿಗೆ ಎಲ್ಲಾ ರೀತಿಯಲ್ಲೂ ಸಹಾಯಕಳಾಗಿ ನಿಲ್ಲುತ್ತಿದ್ದ...

ಕನಸು ಬಿದ್ದಿತ್ತು ನನಗೊಂದು ಮದುವೆಯ ಮುನ್ನಾ ದಿನದಂದು ಅಲ್ಲಿತ್ತು ಸಂಭ್ರಮ ತುಸು ಜೋರು ಅದರಲ್ಲಿ ಅವಳದೇ ಕಾರು ಬಾರು. ಅಲ್ಲಿಯೇ ಕುಳಿತಿದ್ದೆ ಕಾರಿಡಾರಿನಲ್ಲಿ ನಾನು ತಂಗಾಳಿಯಂತೆ ಸುಳಿಯುತ ಬರಲವಳು ನೋಡಿಯೂ ನೋಡದಹಾಗೆ ತಿರುಗಿದಳು ಆ ಕ್ಷಣದಲ್ಲೇ ...

ಬನ್ನಿ ಕೂಗಾಡೋಣ ಸ್ಟೇಚ್ಛೆಯಾಗಿ ಕಿತ್ತಾಡೋಣ ಬಾಯ್ತುಂಬ ಜಗಳ ಮಾಡೋಣ ಸಂಶಯ, ಅಸಮಾಧಾನ ಅಶಾಂತಿ, ಜಿಗುಪ್ಸೆ ಪರಸ್ಪರ ಮಿಥ್ಯಾರೋಪ ಎಲ್ಲ ಹೊರ ಹಾಕೋಣ ನೋವಿಳಿಸಿ ಹಗುರಾಗೋಣ ದ್ವೇಷ ರೋಷ ಮರೆಯೋಣ ನಗುತ ನಗುತ ಬಾಳೋಣ. ಮೌನಾರೋಪ ಬೇಡ ಶೀತಲ ಯುದ್ಧ ಬೇಡ ಮನ...

‘ಆಳ ನಿರಾಳ’ದ ಈ ಕಾಲಮಿನಲ್ಲಿ ನಾನು ಹಲವಾರು ವಿಷಯಗಳ ಕುರಿತು ಬರೆಯುತ್ತಿದ್ದೇನೆ. ವಾರ ವಾರವೂ ಬರೆಯುವಾಗ ಈ ತರದ ವೈವಿಧ್ಯತೆ ಅನಿವಾರ್ಯವಾಗಿ ಬಂದೇ ಬರುತ್ತದೆ. ಸಾಹಿತ್ಯ, ಭಾಷೆ, ಶಿಕ್ಷಣ, ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ, ಸಂಸ್ಕೃತಿ ಮುಂತಾದ...

ಅಂತರಂಗದ ಹೂವು ಅರಳಿತು ಶಿವನ ಸುಂದರ ಮಿಲನದಿ ಜಡವು ಜಾರಿತು ಜ್ಯೋತಿ ಚಿಮ್ಮಿತು ಜ್ಞಾನ ಸೂರ್ಯನ ಉದಯದಿ ನಶೆಯು ಏರಿತು ಖುಶಿಯು ತುಂಬಿತು ಮೌನದಾರತಿ ಬೆಳಗಿತು ಬಿಂದು ರೂಪದ ಜ್ಯೋತಿ ಅರಳಿತು ಸಿಂಧು ರೂಪವ ಬೆರೆಯಿತು ಹಾಲುಜೇನು ಕಾಮಧೇನು ಹೃದಯ ಹೂಬನ...

ಗಿರಾಕಿಯೊಬ್ಬ ಕೇಳಿದ – “ಮೇಡಂ ನಿಮ್ಮ ಹೋಟೆಲ್ ಹೆಸರು ನೀಲವೇಣಿ ಯೆಂದು ಯಾಕೆ ಬದಲಾಯಿಸಿದಿರಾ?” ಶೀಲಾ ಹೇಳಿದ್ಲು – “ಈಗೀಗ ಊಟದಲ್ಲಿ ಕೂದಲು ಬರುವುದು ಜಾಸ್ತಿಯಾಗಿದೆ, ಅದಕ್ಕೆ..” *****...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...