ಫಜೀತಿ

ಕನಸು ಬಿದ್ದಿತ್ತು ನನಗೊಂದು
ಮದುವೆಯ ಮುನ್ನಾ ದಿನದಂದು
ಅಲ್ಲಿತ್ತು ಸಂಭ್ರಮ ತುಸು ಜೋರು
ಅದರಲ್ಲಿ ಅವಳದೇ ಕಾರು ಬಾರು.

ಅಲ್ಲಿಯೇ ಕುಳಿತಿದ್ದೆ ಕಾರಿಡಾರಿನಲ್ಲಿ ನಾನು
ತಂಗಾಳಿಯಂತೆ ಸುಳಿಯುತ ಬರಲವಳು
ನೋಡಿಯೂ ನೋಡದಹಾಗೆ ತಿರುಗಿದಳು
ಆ ಕ್ಷಣದಲ್ಲೇ ಬಂಧಿಸಿದೆ ಬಾಹುಗಳಿಂದ ಅವಳನ್ನು

ನಾಚಿ ನೀರಾಗುವಷ್ಟರಲ್ಲಿ ಅವಳು
ಕೈ ಬಿಟ್ಟೆ ಮುತ್ತೊಂದನು ಕೊಟ್ಟು
ನಾಚುತ್ತ ಓಡಿ ಹೋದವಳೇ ನಿಂತು
‘ನಾಳೆ ಇದೆ ತಡೀರಿ ನಿಮಗಿನ್ನು!’ ಎನ್ನಲು

ನನಗಾಗ ಎದೆಯೊಳಗೆ ದಿಗಿಲು
ಏನೂ ತಿಳಿಯದಾಗಿ ಕನವರಿಸಲು
ಎಚ್ಚರವಾಯ್ತು ಮಧ್ಯರಾತ್ರಿ ಹೊತ್ತು
ಸಧ್ಯ ಮಂಟಪವೆಲ್ಲ ಮಲಗಿತ್ತು ಗಪ್ ಚುಪ್!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಕೂಗಾಡೋಣ
Next post ಅಂಗರಕ್ಷಕ

ಸಣ್ಣ ಕತೆ

 • ಮೇಷ್ಟ್ರು ವೆಂಕಟಸುಬ್ಬಯ್ಯ

  ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ತಿಮ್ಮರಾಯಪ್ಪನ ಬುದ್ಧಿವಾದ

  ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…