ಬನ್ನಿ ಕೂಗಾಡೋಣ
ಸ್ಟೇಚ್ಛೆಯಾಗಿ ಕಿತ್ತಾಡೋಣ
ಬಾಯ್ತುಂಬ ಜಗಳ ಮಾಡೋಣ
ಸಂಶಯ, ಅಸಮಾಧಾನ
ಅಶಾಂತಿ, ಜಿಗುಪ್ಸೆ
ಪರಸ್ಪರ ಮಿಥ್ಯಾರೋಪ
ಎಲ್ಲ ಹೊರ ಹಾಕೋಣ
ನೋವಿಳಿಸಿ ಹಗುರಾಗೋಣ
ದ್ವೇಷ ರೋಷ ಮರೆಯೋಣ
ನಗುತ ನಗುತ ಬಾಳೋಣ.
ಮೌನಾರೋಪ ಬೇಡ
ಶೀತಲ ಯುದ್ಧ ಬೇಡ
ಮನೆ ಮುರಿಯೋ ರಾಜಕೀಯ
ಮನೆ ಮಾಡೋದು ಬೇಡ
ಪ್ರೀತಿ ಶಾಂತಿ ಬೆಳೆಸೋಣ
ಮನ ಮಂದಿರದ ಬೆಳಗೋಣ.
*****
೧೮-೦೩-೧೯೯೨