ಮೂಡಿದ ಮುಂಜಾನೆ ಹೊಸದಾಗಿದೆ ಪೂರ ಕಣ್ತೆರೆದ ಕರುಣೆಯಲಿ ಬದುಕಾಗಿದೆ ಹಗುರ /ಪ// ಹಾರಿದ ಬೆಳ್ಳಕ್ಕಿ ಬಿಡಿಸಿದೆ ರಂಗೋಲಿ ಎಂದಿನ ರಂಗೋಲಿ ಚೆಲ್ಲಿದೆ ಹೊಸ ಹೋಲಿ ಹಾಡಿದ ಗಿಳಿ ಕೋಗಿಲೆ ಹೊಸ ರಾಗ ಹಾಡಿದೆ ಅದರಲಿ ಹೊಸ ಚೇತನ ಹೊಸ ಬದುಕ ತೋರಿದೆ ದೂರದ ಗಿ...

ಪ್ರೀತಿ ಎಂಬ ಹೂದೋಟದಲ್ಲಿ ರಾಮನೆಂಬ ಗಿಳಿಯ ಅಡಗಿಸಿಕೊಂಡೆ || ಪ್ರೀತಿ ಎಂಬ ಹೊನ್ನ ಪಂಜರದಲ್ಲಿ ಮುದ್ದು ಮಾಡಿ ಬಚ್ಚಿಟ್ಟುಕೊಂಡೆ || ಚಂದಾದ ಗಿಳಿಯು ಬೆಳ್ಳಿ ಚಂದಕ್ಕಿ ಆಡುವ ಚಂಚಲೆ ನನ್ನ ಗಿಳಿಯು || ಬಾನಂಚಿನ ಸೆರೆಯ ಹೂ ತಾರೆಯಂತೆ ಬಿಟ್ಟರೆ ಹಾರಾ...

ಇವರು ಹಿರಿಯರು ತಾವರಿಯದ ಹೊನ್ನು ಕೊಪ್ಪರಿಗೆಗಟ್ಟಲೆ ಇದೆಯೆಂದು ಸುತರಾಂ ಅರಿಯರು ಎಳೆಯರು ಅದರ ಮಾತಾಡಿದರೊ ಇವರ ಬಾಯಿಂದ ಉರಿಯ ಮಳೆ ಕೆಸರ ಹೊಳೆ ಕಣ್ಣೆಲ್ಲ ಬೆಂಕಿಬಳೆ. ನದಿ ಹೊರಳಿದ್ದಕ್ಕೆ ನೆಲ ಕೆರಳಿದ್ದಕ್ಕೆ ಇಷ್ಟು ದಿನ ನಿಂತ ಬಂಡೆ ಈಗ ತಳ ಧಿಕ...

ಎಲ್ಲ ಕಪ್ಪೆಗಳಂತಲ್ಲ ನಮ್ಮ ಗೂಂಕುರು ಕಪ್ಪೆ ಇನ್ನುಳಿದ ಕಪ್ಪೆಗಳೆಲ್ಲ ಇದುರೆದುರು ಬರಿಯ ಸಪ್ಪೆ ಹೆಬ್ಬಂಡೆಯಂತೆ ಹೇಗೆ ಕುಳಿತು ಬಿಟ್ಟಿದೆ ನೋಡಿ ಹೀಗೆ ನಾವು ನಡೆವ ದಾರಿಗಡ್ಡ ಎಲ್ಲಿಂದ ಬಂತೊ ಈ ಗುಡ್ಡ! ಮೇಲೆಲ್ಲ ಕಣಿವೆ ಕೊಳ್ಳ ಅಲ್ಲಿಲ್ಲಿ ಕೆಲವು ...

(೧೨-೧-೧೮೬೩ ರಿಂದ ೪-೭-೧೯೦೨) ನಾನು ಕಾಲೇಜಿನಲ್ಲಿ ಓದುವಾಗ ಆಲಿವರ್ ಗೋಲ್ಡ್‌ಸ್ಮಿತನ “ದಿ ಸಿಟಿಜನ್ ಆಫ್ ದಿ ವರ್ಲ್ಡ್’ ಪುಸ್ತಕವನ್ನು ಪರಿಚಯಿಸಿಕೊಂಡಾಗ ಆಗಲೇ ನನಗೆ ಅದು ದಿ ಸಿಟಿಜನ್ ಆಫ್ ದಿ ವರ್ಲ್ಡ್ ಬದಲು ದಿ ಸಿಟಿಜನ್ ಆಫ್ ದಿ ಯೂನಿವ...

ನಾನೆ ಮಾಮರ ನಾನೆ ಇಂಚರ ನಾನೆ ಮುಳ್ಳಿನ ಪಂಜರ ನಾನೆ ನೂಪುರ ನಾನೆ ಕರ್‍ಪುರ ನಾನೆ ನಿಗಿನಿಗಿ ನಾಗರ ||೧|| ಎದೆಯ ತೊಟ್ಟಿಲು ಹಾಲು ಬಟ್ಟಲು ಏಕೆ ಕೋಪದ ಕರಗಸಾ ನಾನೆ ಸಕ್ಕರೆ ನಗೆಯ ಕೊಕ್ಕರೆ ಏಕೆ ಕಾಗೆಯ ಕಸಮಸಾ ||೨|| ಚಿಪ್ಪು ಒಡೆಯಲಿ ಚಲುವು ಸಿಡಿಯ...

ಅವರಿಬ್ಬರು ಪ್ರೇಮಿಗಳು. ಜಾತಿಯ ಗೋಡೆ ಮಧ್ಯ ಇತ್ತು. ಹುಡುಗಿ ಮೌನವಾಗಿದ್ದಳು. “ಏಕೆ ಈ ಮೌನ ಮಾತಾಡು” ಎಂದ. “ನನ್ನಲ್ಲಿ ನೂರು ಧ್ವನಿಗಳು ಪ್ರತಿಧ್ವನಿಸುತ್ತಿವೆ” ಎಂದಳು. “ನನಗೆ ಕೇಳಿಸಲಿಲ್ಲವಲ್ಲಾ? ಅದು ಯಾರ...

ನನಗೆ ಗೋರಿಯ ತೋಡಿ ನಗುತಿರುವ ಬದುಕೇ ನಗುವ ನಿಲ್ಲಿಸು ನೀನು ಕೆಣಕಬೇಡ ಬಾಳೆ, ತೆಂಗಿನ ಕಾಯಿ, ಹೂವೆಲ್ಲ ಸಿಂಗರಿಸಿ ಗೋರಿ ಬದಿಯಲ್ಲಿ ನನಗೆ ಕಾಯಬೇಡ. ಎಷ್ಟು ಅಡಿ ಉದ್ದವಿದೆ ಎಷ್ಟು ಅಡಿ ಆಳವಿದೆ. ನೀನು ಅಗೆದಿರುವ ಗೋರಿ ಹೇಳು ಬದುಕೆ ಎಷ್ಟೆ ಇದ್ದರು...

1...34567...9

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....