ಮೂಡಿದ ಮುಂಜಾನೆ ಹೊಸದಾಗಿದೆ ಪೂರ
ಕಣ್ತೆರೆದ ಕರುಣೆಯಲಿ ಬದುಕಾಗಿದೆ ಹಗುರ /ಪ//

ಹಾರಿದ ಬೆಳ್ಳಕ್ಕಿ ಬಿಡಿಸಿದೆ ರಂಗೋಲಿ
ಎಂದಿನ ರಂಗೋಲಿ ಚೆಲ್ಲಿದೆ ಹೊಸ ಹೋಲಿ

ಹಾಡಿದ ಗಿಳಿ ಕೋಗಿಲೆ ಹೊಸ ರಾಗ ಹಾಡಿದೆ
ಅದರಲಿ ಹೊಸ ಚೇತನ ಹೊಸ ಬದುಕ ತೋರಿದೆ

ದೂರದ ಗಿರಿ ಪರ್ವತ ಹೊಸ ಬದುಕನು ಹರಸಿದೆ
ಮಳೆ ಬಿಸಿಲಿಗೆ ಧೃತಿಗೆಡದೆ ನಿಲ್ಲುವುದ ಕಲಿಸಿದೆ

ಹೊಸ ಹಾಡು ಹೊಸ ಬದುಕು ಇದು ನೂತನ ನಿಯಮ
ಇದರಾಳ ಇದರಗಲ ಅಲ್ಲವೇನು ಪ್ರೇಮ?
*****