ಪ್ರೀತಿ ಎಂಬ ಹೂದೋಟದಲ್ಲಿ
ರಾಮನೆಂಬ ಗಿಳಿಯ ಅಡಗಿಸಿಕೊಂಡೆ ||

ಪ್ರೀತಿ ಎಂಬ ಹೊನ್ನ ಪಂಜರದಲ್ಲಿ
ಮುದ್ದು ಮಾಡಿ ಬಚ್ಚಿಟ್ಟುಕೊಂಡೆ ||

ಚಂದಾದ ಗಿಳಿಯು ಬೆಳ್ಳಿ ಚಂದಕ್ಕಿ
ಆಡುವ ಚಂಚಲೆ ನನ್ನ ಗಿಳಿಯು ||

ಬಾನಂಚಿನ ಸೆರೆಯ ಹೂ ತಾರೆಯಂತೆ
ಬಿಟ್ಟರೆ ಹಾರಾಡುವ ನನ್ನ ಗಿಳಿಯು ||

ಬಿಟ್ಟರೂ ಬಿಡಲಾರೆ ನನ್ನ ಗಿಳಿಗೆ
ಹೊಂಚು ಹಾಕುವ ಸವತಿಯರೆಡೆಗೆ ||

ಭಾವದ ಗಿಳಿ ಅನುರಾಗದ ಗಿಳಿ
ಅರಿತು ಅರಿಯದ ಜಾಣ ನನ್ನ ಗಿಳಿಯು ||

ಪ್ರೀತಿ ಎಂಬ ಹೂದೋಟದಲ್ಲಿ
ರಾಮನೆಂಬ ಗಿಳಿಯ ಕಟ್ಟಿಕೊಂಡೆ ||
*****