ರಾ ಎಂಬುದಾಗಿತ್ತು ನಿನ್ನ ಹೆಸರು ಹಲವು ಕಾಲದ ತನಕ ನೈಲ್ ನದಿಯ ಆಚೀಚೆಗೆ ನೀನೊಬ್ಬನೇ ದೇವರು ಹೊಲಗದ್ದೆ ನಿನ್ನ ದಿನದಿನದ ಉದಯ ಅಸ್ತಮಾನಗಳಲ್ಲಿ ಅಗಿ ಫಲವತ್ತು ತುಂಬಿದ ಕಣಜ ನಿನ್ನ ಅಪಾರ ದಯ ನದಿನೀರು ಕೂಡ ಹಾಗೆಯೇ ಹರಿದಿತ್ತು ಅರಿತಿದ್ದೆವು ನಾವದರ...

ಕಿಡಿಕಿಯಿಂದ ಬೆಳಕು ತೂರಿಬಂದಿದೆ; ಬೆಳಗಾಗಿದೆ. ಆದರೆ ಸೂರ್ಯನು ಮೋಡದಲ್ಲಿ ಮರೆಯಾಗಿದ್ದಾನೆ. ಮಳೆಯೂ ಬಾರದು, ಬಿಸಿಲೂ ಬೀಳದು. ಪ್ರಕೃತಿ ಅಳುತ್ತಲೂ ಇಲ್ಲ, ನಗುತ್ತಲೂ ಇಲ್ಲ. ಹಾಸಿಗೆಯ ಮೇಲೆ ಇನ್ನೂ ಬಿದ್ದುಕೊಂಡಿದ್ದ ನಾನು ನಿದ್ದೆಯ ಮಂಪರಿನಲ್ಲಿದ...

ದುಡ್ಡಿದ್ದರೆ ಉಂಗುರ ತಗೋ ಇಲ್ಲದಿದ್ದರೆ ತುಟಿಯ ತುದಿಯ ಮುತ್ತುಕೊಡು. ಏನೂ ತೋಚದಿದ್ದರೆ ನನ್ನೊಡನೆ ಬಾ. ಆಮೇಲೆ ಯಾಕೆಬಂದೆನೋ ಅನ್ನಬಾರದು, ಅಷ್ಟೆ. ಬೆಳಗಿನಲ್ಲಿ ಸೌದೆ ಆರಿಸುತ್ತೀ. ನಿನ್ನ ಕೈಯಲ್ಲಿ ಅವು ಹೂಗಳಾಗುತ್ತವೆ. ದಳ ಎತ್ತಿಕೊಳ್ಳುತ್ತಿದ್...

ಆತ್ಮಯೋಗದ ಭೋಗ ನೋಡೈ ಓಡಿ ಬಂದಳು ಮುಗಿಲಿಮೆ ಶೂನ್ಯ ರಮೆಯೊ ಜೊನ್ನ ಉಮೆಯೊ ಹಾಡಿ ಬಂದಳು ನೀಲಿಮೆ ನಿನ್ನ ಸುಂದರ ಚಲುವ ಕೆನ್ನೆಗೆ ಮುತ್ತ ನಿಟ್ಟವ ಸುಂದರ ಒಮ್ಮೆ ನಿನ್ನಯ ಕಣ್ಣ ಕುಡಿಯಲಿ ಮುಳುಗಿ ಎದ್ದವ ಚಂದಿರ ಮಿನುಗು ಹಲ್ಲಿಗೆ ನಗೆಯ ಮಲ್ಲಿಗೆ ತುಟ...

ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ? ನನ್ನ ಕೌಮಾರ್‍ಯ ಕಂಠ ಒಡೆದದ್ದೆ ಇವಳ ತೊಡೆಮೇಲೆ. ಇವಳ ಹೊಳೆಮೈಯನ್ನು ಸೆಳೆದು ಆಳಗಳಲ್ಲಿ ಇಳಿದು ಸೆಳವುಗಳಲ್ಲಿ ಬೇರಲುಗಿ ಕೊಚ್ಚಿ ಹೋಗಿದ್ದೇನೆ; ಸಕ್ಕರೆ ದಂಡೆಗಳಲ್ಲಿ ಅಕ್ಕರೆಯುಕ್ಕಿ ಮಲಗಿ ಬಿಳಲು ಬಿಟ್ಟಿದ್...

ಮನಸು ಮನಸು ಕೂಡಿದಾಗ ಸೊಗಸು ಹಾಡು ಮೂಡಿತು ಸೊಗಸು ಹಾಡ ಕೇಳಿ ನವಿಲು ಗರಿಯ ಕೆದರಿ ಕುಣಿಯಿತು ||ಮ|| ಬಾಳ ಪುಟವು ತೆರೆದಾಗ ಜೀವ ಕೆಳೆಯು ಮೂಡಿತು ಬಾಳಿಗಾನಂದ ಆದ ಕ್ಷಣವು ಹರುಷ ತುಂಬಿ ನಲಿಯಿತು ||ಮ|| ನಿನ್ನ ನೆನಪು ಕಾಡಿದಾಗ ಕನಸು ಕಲ್ಪನೆ ಮೂಡಿ...

ಕಾನೂನು ತಳವಿಲ್ಲದ ಮಹಾ ಪಾತಾಳ. – ಜಾನ್ ಆರ್ಬುತ್ನಾಟ್ ವಿಶಾಲ ವಿಶ್ವದಲ್ಲಿ ಎಣಿಕೆಗೆಟುಕದ ತಾರಾಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಗೆ ಗೋಚರಿಸಿರುವ ಸೌರವ್ಯೂಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಂಡಲ. ಸೃಷ್ಟಿಯ ಇತರೆ ಮಾತಿರಲಿ ...

ಲೋಕಾಯುಕ್ತ: “ನಿಮ್ಮ ಆಫಿಸಿನಲ್ಲಿ ಯಾರ್‍ಯಾರು ಎಷ್ಟೆಷ್ಟು ಲಂಚವನ್ನು ತೆಗೆದುಕೊಳ್ತಾರೆ ಹೇಳ್ತಿರಾ?” ಎಂದು ಕೇಳಿದಾಗ ಗುಮಾಸ್ತ ಕೇಳಿದ “ಹೇಳಿದರೆ ನಂಗೆಷ್ಟು ಕೊಡ್ತಿರಾ?” *****...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....