ಮನಸು ಮನಸು

ಮನಸು ಮನಸು ಕೂಡಿದಾಗ
ಸೊಗಸು ಹಾಡು ಮೂಡಿತು
ಸೊಗಸು ಹಾಡ ಕೇಳಿ ನವಿಲು
ಗರಿಯ ಕೆದರಿ ಕುಣಿಯಿತು ||ಮ||

ಬಾಳ ಪುಟವು ತೆರೆದಾಗ
ಜೀವ ಕೆಳೆಯು ಮೂಡಿತು
ಬಾಳಿಗಾನಂದ ಆದ ಕ್ಷಣವು
ಹರುಷ ತುಂಬಿ ನಲಿಯಿತು ||ಮ||

ನಿನ್ನ ನೆನಪು ಕಾಡಿದಾಗ
ಕನಸು ಕಲ್ಪನೆ ಮೂಡಿತು
ಕನಸಿನಾ ನೆನಪು ಮಧುರ
ರೂಪವಾಗಿ ನನ್ನ ಕಾಡಿತು ||ಮ||

ನಿನ್ನ ಒಲುಮೆ ನಲುಮೆ
ಭಾವ ತಾನಗಾನ ಮೂಡಿತು
ಭಾವದುಸಿರ ಹೂವ ಚೆಲ್ಲಿ
ಮನಕೆ ಸಂತಸ ತಂದಿತು ||ಮ||

ನಿನ್ನ ಕಾಣುವ ಆತುರದಲಿ
ಸೊಗಸಾದ ಹಾಡು ಮೂಡಿತು
ಆ ಹಾಡ ಕೇಳಿ ಕೋಗಿಲೆ
ವಸಂತನ ಕೂಗಿ ಕರೆಯಿತು ||ಮ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನ್ಯಾಯಾಂಗ: ಒಂದು ನೋಟ
Next post ಮಗು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…