ಅಧ್ಯಾಯ – ೩ ಪರೀಕ್ಷೆ – ಯಾವುದೇ ವಿದ್ಯಾಭ್ಯಾಸ ಶಿಕ್ಷಣ, ತರಬೇತಿಯ ಒಂದು ಅವಿಭಾಜ್ಯ ಅಂಗ, ವಿಷಯಗಳನ್ನು ಕೌಶಲಗಳನ್ನು ವಿದ್ಯಾರ್ಥಿ ಕಲಿತಿದ್ದಾನೆಯೇ? ಇಲ್ಲವೇ? ಕಲಿತಿದ್ದರೆ ಎಷ್ಟು ಚೆನ್ನಾಗಿ ಕಲಿತಿದ್ದಾನೆ, ಅವನ ತಿಳುವಳಿಕೆಯ ಹಾಗ...

ಮೇಷ್ಟ್ರು ರಂಗಪ್ಪ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠ...

ನಿನ್ನೆಯ ದಿನ ಮೈಯೆಲ್ಲವನ್ನು ಗೀರಿಕೊಂಡಿದ್ದವು ಗಾಯಗಳು ನಿನ್ನೆಯ ದಿನ ಮನಸೆಲ್ಲವನ್ನೂ ಹೀರಿಕೊಂಡಿದ್ದವು ಗಾಯಗಳು ನಾನು ಅವುಗಳಿಗೆ ಪರಿಪರಿಯಾಗಿ ತಿಳಿಯ ಹೇಳಿದೆ ಪ್ರೀತಿಯ ಮಾತಿಂದ ಸಂತೈಸಲು ನೋಡಿದೆ ಅವು ನನ್ನನ್ನು ಧಿಕ್ಕರಿಸಿದವು ಅಹಂಕಾರದ ಗಾಯಗ...

ಯಾದವರ ಜಿವಸುಳಿ ವುರಿಗೆರೆಯು ಮೈಸೂರು ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು ಆದಿಯಿಂ ರಾಜ ಕಂಠೀರವರ ದೇವಚಾ ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ ಮೋದದಲಿ ರಾಜಸಿರಿ ಹಾದ...

ಕಾರದ ಹೂಹನಿ ನೀ ಖಾರವಾಗದೇ ಬಾ ಉಬ್ಬರಿಸದೆ ಅಬ್ಬರಿಸದೆ ತೇಲುವ ಮಳೆಬಿಲ್ಲಿಗೆ ಮಧುರ ಸ್ಪರ್ಶ ಮೋಹನನಾಗಿ ಬಾ ಲಘು ತೆಪ್ಪಕ್ಕೆ ನೀರ ಸೆಲೆಯಾಗಿ ಬಾ ಶರಧಿಯಾಳದಿ ಚಿಪ್ಪ ಗರ್ಭವ ಸೇರಿ ಮುತ್ತಾಗು ಬಾ ಒತ್ತಾದ ಗಿಡಗಂಟಿಗೆ ಮಸ್ತಕಾಭಿಷೇಕದ ಮಂತ್ರಜಲವಾಗಿ ಬ...

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ– ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ- ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ ಬದುಕುವ ಒಂದೊಂದು ಉಪಾಯವನವನು ಕರುಣಿಸುವನಯ್ಯ! ಕೆಲವರನು ಕುಣಿಸುವನು ಕೆ...

ಪ್ರಿಯ ಸಖಿ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜೀವನ ವಿಧಾನದಿಂದ ನಿಧಾನಕ್ಕೆ ನಾವು ನೈಜತೆಯಿಂದ ಕೃತಕತೆಯೆಡೆಗೆ ಮುಖ ಮಾಡಿ ನಡೆಯುತ್ತಿದ್ದೇವೆ. ನಮ್ಮ ಒಂದು ದಿನದ ದಿನಚರಿಯನ್ನು ನಮ್ಮ ನಡವಳಿಕೆ, ಮಾತು ಕೃತಿಗಳನ್ನು ಗಮನಿಸಿದರೆ ನಾವೆಷ್ಟು ಕೃತಕವ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...