ಉಸ್ಮಾನ್ ಸಾಗರದ ದಂಡೆಯಿಂದ

ತದೇಕ ಚಿತ್ತದಿಂದ ಎಲಾ ಯುವಕ ನೀನು ಅದೇನ ನೋಡುತ್ತಿರುವೆ ಗಾದೆಮಾತಿನ ಮೀನ ಹೆಜ್ಜೆಗಳನ್ನೋ ಅಥವ ನೀನು ಪ್ರೀತಿಸುವ ಹೆಣ್ಣಿನ ನಿಗೂಢ ಒಳದಾರಿಗಳನ್ನೋ? ತಳಮಳಿಸುವ ಸರೋವರದ ತೆರೆಗಳ ಮೇಲೆ ತೇಲಿ ಬರುತಿರುವ ಛಿದ್ರ ಚಿತ್ರ ತಳೆಯುವುದಾವ...

ನನ್ನ ತಂದೆ

ಎಲ್ಲರಂತಿರಲಿಲ್ಲ ನನ್ನ ತಂದೆ ಹೆಣ್ಣ ಕರುಳ ಗಂಡು ಜೀವ ಮಕ್ಕಳೆಂದರೆ ಅವಗೆ ಮರಳು ಮಾಯೆ ಗುರಿಯ ತತ್ವದ ತಿಳಿಸಿ ದಿಟ್ಟತನವನು ಕಲಿಸಿ ಬದುಕು ಚಾತುರ್ಯ ಬೆರೆಸಿ ಬೆಳಸಿದನು ಪುಟ್ಟ ಕೈಗಳ ಹಿಡಿದು ಭರವಸೆಯ ಒತ್ತಿದನು...

ಪುಟಿದೇಳುವ ರಾಗದುಸಿರ

ಪುಟಿದೇಳುವ ರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಸದ್ವಿಚಾರ ತಾಳದಗಲ ಮಾನಭಿಮಾನದಿಂ ಮೆರೆದ...

ಎಲ್ಲಿಹನು ?

ಹರನ ನಾಮವ ಹಿಡಿದು ದಿನಬೆಳಗು ಹಾಡುವಿ ಆ ಹರನು ಇನ್ನಾರು ತಿಳಿಯಲಾರಿ ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ ನಿಜಭಕ್ತಿ ತೊರೆದೀಶನನು ಕಾಣಲಾರಿ ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ? ಅಹಂಕಾರದೊಳು ನೀ ಮರೆದು ಪೂಜಿಸಲು...
ಜಾಣ ಕುರುಡೇ?

ಜಾಣ ಕುರುಡೇ?

[caption id="attachment_11247" align="alignleft" width="300"] ಚಿತ್ರ: ಗರ್‍ಡ್ ಆಲ್ಟ್‌ಮನ್[/caption] ಪ್ರಿಯ ಸಖಿ, ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ...

ಬಾನು ರೆಪ್ಪೆ ಮುಚ್ಚುತಿದೆ

ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ, ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ, ಮಾತಾಡದೆ ಸಂಭ್ರಮದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿಗೂಡುತ್ತಿದೆ ಬೆಳುದಿಂಗಳ ಕೊರಳು! ದಡವ ಕೊಚ್ಚಿ ಹರಿಯುತಿದೆ ನದಿಗೆ ಮಹಾಪೂರ,...