Month: February 2019

#ಕವಿತೆ

ಓ ಎನ್ನ ಸೋದರಿ !

0

ಓ ಎನ್ನ ಸೋದರಿ! ವೀರ ಭಾರತದ ನಾರಿ ! ಬಾ ಇಲ್ಲಿ ಹೊರಜಗಕೆ, ಶಾಂತಿ ಸಮತೆಯ ಎಡೆಗೆ ಹೋಗುವಾ ನಾವೆಲ್ಲ ಗಗನ ಗಡಿಯ ಮೀರಿ ಕರೆಯುತಿಹುದು ನೋಡಲ್ಲಿ ! ಬಾ ಭಾವಿನಾಡಿನೆಡೆಗೆ ನಿನಗಂದರವರಾರು ಅಬಲೆ ನೀನಿರುವಿ ಎಂದು ಅರಿಯಲಾರರೇ ಆದಿ ಅವತಾರ ಶಕ್ತಿ ಯಾರು ? ಕೂರಸಿಗಳಾಟೋಪದಲಿ ಇದಿರಾದರಾರು ಅಂದು ನಿನ್ನ ನೀ ತಿಳಿದು ಏಳು, […]

#ವಿಜ್ಞಾನ

ಜೈವಿಕ ಬಾಂಬ್! ಭೂ ಪ್ರಳಯ!!

0

ಜೀವ ವಿಜ್ಞಾನದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆಗಳ ದುಷ್ಪಲವಾಗಿದೆ ಎಂದು ಅಸಂಖ್ಯ ಮಾನವೀಯ ಹೃದಯಿಗಳು ಭಯವನ್ನು ವ್ಯಕ್ತಪಡಿಸಿವೆ. ಈ ಮಾತು ಸತ್ಯ ಜೈವಿಕ ಬಾಂಬಿನಿಂದ ಅಸಂಖ್ಯಾತ ಪಿಡುಗುಗಳು ಆಕ್ರಮಿಸಿ ಜಗತ್ತಿನ ಜೀವಿಗಳ ಮಾರಣ ಹೋಮವಾಗುತ್ತಿರುವುದು ವಾಸ್ತವದ ಸಂಗತಿಯಾಗಿದೆ. ವಿಶ್ವದ ಎರಡನೆ ಮಹಾಯುದ್ಧದಲ್ಲಿಯೂ ಕೂಡ ಭಾಗಿಯಾಗಿದ್ದ ದೇಶಗಳು ಜೈವಿಕ ಸಮರಾಸ್ತ್ರಗಳನ್ನು ಬಳಸಿದ್ದವು. ಇವುಗಳಲ್ಲಿ ಖ್ಯಾತವಾದದ್ದೆಂದರೆ ಜಪಾನಿ ರಾಜಸೇನೆಯ ‘ಯುನಿಟ್ […]

#ಕವಿತೆ

ಬಾಗಿಲ ಬಡಿದಿದೆ ಭಾವೀ ವರ್ಷ

0

ಬಾಗಿಲ ಬಡಿದಿದೆ ಭಾವೀ ವರ್ಷ ಬಗೆ ಬಗೆ ಭರವಸೆ ನೀಡಿ, ಭ್ರಮೆ ನಮಗಿಲ್ಲ ನೋವೋ ನಲಿವೋ ಬರುವುದ ಕರೆವೆವು ಹಾಡಿ. ಎಲ್ಲ ನಿರೀಕ್ಷೆ ಸಮಯ ಪರೀಕ್ಷೆಗೆ ಕೂರದೆ ವಿಧಿಯೇ ಇಲ್ಲ, ಕೂತದ್ದೆಲ್ಲ ಪಾಸಾದೀತೆ? ಜೊತೆ ಜೊತೆ ಬೇವೂ ಬೆಲ್ಲ ಕಾಲದ ಚೀಲದೊಳೇನೇ ಇರಲಿ ಕಾಣದ ಅನುಭವ ನೂರು, ಎಲ್ಲವು ಇರಲಿ ನಿಲ್ಲದೆ ಬರಲಿ ಸರಿಗಮ ಪದನಿಸ […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೫

ತಿನ್ನುವ ಮೊದಲೂ ನಂತರವೂ ಹೆಸಿವು ಅಸ್ವಸ್ಥ. ರೊಟ್ಟಿ ಸದಾ ನಿರುಮ್ಮಳ ಏನೇನೂ ಆಗಿಯೇ ಇಲ್ಲವೆಂಬಂತೆ ತಟಸ್ಥ.

#ಹನಿಗವನ

ಸೂರ್ಯನ ಹೆಜ್ಜೆ

0

ಸೂರ್ಯನ ಹೆಜ್ಜೆಗೆ ಭೂಮಿಯ ಗೆಜ್ಜೆ ವ್ಯೋಮಕಾಶದ ಅನಂತಗೀತಕೆ ರಾಗ ತಾಳ ಲಯ ಶಾಂತಿಯ ಸಜ್ಜೆ *****

#ಕವಿತೆ

ಒಂದು ಮಧ್ಯಾಹ್ನ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಮಧ್ಯಾಹ್ನದ ಬಿರು ಬಿಸಿಲು ಹೊರಗೆ ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ ಅಡುಗೆ ಮನೆಯಿಂದ ಪರಿಮಳ ಸೂಸಿ ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ. ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ. ಹೃದಯ ಮನಸ್ಸು ತಣ್ಣಗೆ ಹೈರಾಣ ಗೋಡೆಯ ಗಡಿಯಾರ ಸುಮ್ಮನೆ ಚಲಿಸಿದೆ ಹಣ್ಣು ಹೊತ್ತ ಮರ ಬಾಗಿದೆ ಬಿಸಿಲಿಗೆ ಕಡಲಿನಾಳಕ್ಕಿಂತ ಮನದ ಆಳ ದೊಡ್ಡದು ಮಧು ಹೀರಿದ […]

#ಕವಿತೆ

ಅಂದು – ಇಂದು

0

ಬಿಗುಮಾನ ಒಂದೆಡೆಗೆ ; ಬಿಂಕ ಮತ್ತೊಂದೆಡೆಗೆ. ಬೇರಾವುದೋ ಹೊಸತು ಭಾವನಾವರಿಸಿರಲು ಮೊದಲ ಪರಿಚಯದಂದು ಕಣ್ಣೆತ್ತಿ ನೋಡದೆಯೆ ಮೌನದಲಿ ಮಾತುಗಳ ಮುಳುಗಿಸುತ ಹಿಗ್ಗಿದೆವು. ಚಪಲ ಚಂಚಲ ಕಣ್ಣು ನೋಡಲೆಳಸುತಲಿತ್ತು! ಹೃದಯ ಹರಿಯುತಲಿರಲು ಒಲವ ಹೊನಲಾಗುತಲಿ ಅಂತು ಎಂತೋ ಏನೋ ತಂಗಾಳಿ ಬೀಸಿತ್ತು. ಒಂದೆ ಹೂವರಳಿತ್ತು ನಮ್ಮಿರ್ವರೆದೆಗಳಲಿ! ಆ ಹೂವ ಬಾಳಿಂದು ಚೂರು ಚೂರಾಗುತಿದೆ! ಅಂದಿನಂತಲ್ಲಿಂದು ಅಗಲಿಕೆಯ ಅರುಣ […]

#ಸಣ್ಣ ಕಥೆ

ವಿರೇಚನೆ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ ಮಬ್ಬಾಗುತ್ತಿದೆ, ಕೆಲಸ ನಿಧಾನವಾಗುತ್ತಿದೆ — ಎಂಬೆಲ್ಲ ರೋಗಲಕ್ಷಣಗಳನ್ನು ಹೇಳಿದ ಮೇಲೆ, ಡಾಕ್ಟರರೊಬ್ಬರು ಅವನ ಹೊಟ್ಟೆಯನ್ನು ಅಲ್ಲಲ್ಲಿ ಒತ್ತಿನೋಡಿ ಭೇದಿಗೆ ಔಷಧಿ ಕೊಟ್ಟಿದ್ದರು. ಅದನ್ನು ರಾತ್ರಿ ಊಟವಾದ ಮೇಲೆ […]

#ಹನಿಗವನ

ತಳಹದಿ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಮಕ್ಕಳಿಗೆ ಹಾಕಬೇಕು ಶಿಕ್ಷಣದ ತಳಹದಿ ಯಾರೂ ಕದಿಯದ ವಿದ್ಯೆಯೆಂಬ ಶ್ರೀನಿಧಿ ಕೋಟಿ ಕೋಟಿ ಬೆಳ್ಳಿ ಬಂಗಾರ ನಶ್ವರ ನೀವು ನೀಡಿದ ವಿದ್ಯೆಯೊಂದೇ ಅಮರ *****