ಜೈವಿಕ ಬಾಂಬ್! ಭೂ ಪ್ರಳಯ!!

ಜೈವಿಕ ಬಾಂಬ್! ಭೂ ಪ್ರಳಯ!!

ಚಿತ್ರ: ಗರ್‍ಡ್ ಆಲ್ಟ್ ಮನ್

ಜೀವ ವಿಜ್ಞಾನದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆಗಳ ದುಷ್ಪಲವಾಗಿದೆ ಎಂದು ಅಸಂಖ್ಯ ಮಾನವೀಯ ಹೃದಯಿಗಳು ಭಯವನ್ನು ವ್ಯಕ್ತಪಡಿಸಿವೆ. ಈ ಮಾತು ಸತ್ಯ ಜೈವಿಕ ಬಾಂಬಿನಿಂದ ಅಸಂಖ್ಯಾತ ಪಿಡುಗುಗಳು ಆಕ್ರಮಿಸಿ ಜಗತ್ತಿನ ಜೀವಿಗಳ ಮಾರಣ ಹೋಮವಾಗುತ್ತಿರುವುದು ವಾಸ್ತವದ ಸಂಗತಿಯಾಗಿದೆ.

ವಿಶ್ವದ ಎರಡನೆ ಮಹಾಯುದ್ಧದಲ್ಲಿಯೂ ಕೂಡ ಭಾಗಿಯಾಗಿದ್ದ ದೇಶಗಳು ಜೈವಿಕ ಸಮರಾಸ್ತ್ರಗಳನ್ನು ಬಳಸಿದ್ದವು. ಇವುಗಳಲ್ಲಿ ಖ್ಯಾತವಾದದ್ದೆಂದರೆ ಜಪಾನಿ ರಾಜಸೇನೆಯ ‘ಯುನಿಟ್ ೭೩೧’ ಈ ಅಸ್ತ್ರವನ್ನು ಅಂದಿನ ಸಮರದಲ್ಲಿ ಸಿಡಿಸಿದ ಪರಿಣಾಮವಾಗಿ ಪ್ಲೇಗು, ನೆಗಡಿರೋಗ, ಕಾಲರಾ ಮುಂತಾದ ಡಜನ್‌ಗಟ್ಟಲೆ ಭೀಕರ ರೋಗಾಣುಗಳನ್ನು ಉತ್ಪಾದಿಸಿತು. ಈ ಕಾಯಿಲೆಗಳನ್ನು ಶತ್ರುದೇಶಗಳಲ್ಲಿ ಹರಡಿಸಿದ ಯೋಜನೆ ಕೂಡ ಅದಾಗಿತ್ತು. ಜಿನೇವ -ಪ್ರೊಟೋಕಾಲ್ ೧೯೨೫ರ ಅನ್ವಯ ಇಂಥಹ ಅಸ್ತ್ರಗಳನ್ನು ಬಳೆಸುವಂತಿಲ್ಲವೆಂಬ ನಿಯಮವನ್ನೇ ಮಾಡಲಾಗಿತ್ತು ವಿಯಟ್ನಾಂ ಯುದ್ಧದಲ್ಲಿ ಜೈವಿಕ ಸಮರಾಸ್ತ್ರಗಳನ್ನು ಬಳಸಿತ್ತು ಎಂಬ ಬಗ್ಗೆ ಆಧಾರಗಳಿದ್ದವೆಂದು ಅಂದಿನ ಸಂಶೋಧಕ ತಂಡ ಹೇಳಿತ್ತು. ಇಂತಹ ಜೈವಿಕ ಸಮರಾಸ್ತ್ರಗಳನ್ನು ಬಹುತೇಕ ರಾಷ್ಟ್ರಗಳು ಇಂದು ಹೊಂದಿವೆ ಎಂಬುವುದು ಗುಪ್ತಗಾಮಿನಿಯ ಸತ್ಯ. ಈ ಜೈವಿಕ ಸಮರಾಸ್ತ್ರದಲ್ಲಿ ಇರುವುದರಿಂದ, ಇವು ಸ್ಫೋಟಗೊಂಡ ಸ್ಥಳದಲ್ಲಿ ಮುಂದೆಂದೂ ಜೀವಸಂಕುಲದ ವಾಸನೆ ಇರಲಾರದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಮರಾಸ್ತ್ರದ ಪರಿಣಾಮವಾಗಿ ಹುಟ್ಟಿಕೊಳ್ಳುವ ಪಿಡುಗುಗಳು ಅಸಂಖ್ಯ! ಕಳೆದ ಎರಡು ದಶಕಗಳಲ್ಲಿ ಸು. ೩೦ ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್ ಪಿಡುಗುಗಳು ಈ ಭೂಮಿಯ ಮೇಲೆ ಅವತರಿಸಿವೆ. ‘ಇಬೋಲ’ ಮತ್ತು ‘ಏಡ್ಸ್’ ಇವು ಪ್ರಮುಖವಾದ ಜೈವಿಕಾಸ್ತ್ರದ ಮೂಲಕೊಡುಗೆಗಳಾಗಿವೆ. ೧೯೯೫ ರಲ್ಲಿ ‘ಇಬೋಲ’ ಸೊಂಕು ಜೈರ್ ಸುತ್ತ ಮುತ್ತಲೂ ಕಾಣಿಸಿಕೊಂಡು ೧೫೦ ಜನರನ್ನು ಕೊಂದಿತು. ಈ ಸೊಂಕು ತಗುಲಿದ ೨೪ ಗಂಟೆಗಳ ಒಳಗೆ ಸಾವು ಖಚಿತ. ಇದಕ್ಕೆ ನಿಖರವಾದ ಚಿಕಿತ್ಸಯೇ ಇಲ್ಲ. ‘ಏಡ್ಸ್’ ಗೆ ಕಾರಣವಾಗುವ ಈಗ ಜಾಗತಿಕ ಮಟ್ಟದ ಕಾಡುವ ರೋಗ, ಇದರ ಜತೆಗೆ ಹಳೆಯ ರೋಗಗಳು ಪುನರಾವರ್ತನೆಗೊಳ್ಳುತ್ತಲಿವೆ. ‘ಪ್ಲೇಗು’ ಇದು ಕೂಡ ಭಯಂಕರ ರೋಗ. ಗುಜರಾತಿನಲ್ಲಿ ೧೯೯೪ ರಲ್ಲಿ ಕಾಣಿಸಿಕೊಂಡಿತು. ಇದು ಜೈವಿಕ ಸಮರಾಸ್ತ್ರದ ಪ್ರಯೋಗ ಎಂಬ ವಾದವಿದೆ. ೯೦ ರ ದಶಕದಲ್ಲಿ ಪ್ಲೇಗು ಜಗತ್ತಿನ ವಿವಿಧ ಭಾಗಗಳಲ್ಲಿ ಮರುಕಳಿಸುತ್ತಿರುವುದಂತು ಸತ್ಯ. ಭಾರತದಲ್ಲಿ ೩೦ ವರ್ಷಗಳ ನಂತರದಲ್ಲಿ ಕಾಣಿಸಿಕೊಂಡಿದ್ದರೆ ‘ಮಾಲವಿ’ ಮತ್ತು ‘ಜಿಂಬಾಬ್ವೆ’ ಯಲ್ಲಿ ೧೫ ವರ್ಷಗಳ ನಂತರ ಕಾಣಿಸಿಕೊಂಡಿತು. ಜಾಂಬಿಯಾದಲ್ಲಿ ೭೦ ವರ್ಷಗಳ ನಂತರ ಮರುಕಳಿಸಿತು. ಇದರ ಜೊತೆಗೆ ಮಲೇರಿಯಾ ಇದು ಕೂಡ ಒಂದು ವಿಲಕ್ಷಣ ರೋಗ, ಕ್ಲೋರೋಕ್ಟಿನ್ ರೋಧಕ ಮಲೇರಿಯಾ ಕ್ರಿಮಿಗಳು ವ್ಯಾಪಕವಾಗಿ ಹರಡುತ್ತವೆ. ಮಲೇರಿಯಾಕ್ಕೊಂದು ಪರಿಣಾಮಕಾರಿಯಾದ ಲಸಿಕೆಯನ್ನು ನಿರ್ಮಿಸಬೇಕೆಂಬ ಪ್ರಯತ್ನ ಇಂದಿಗೂ ಯಶಸ್ವಿಯಾಗಿಲ್ಲ. ಇದರಂತೆ ‘ಕ್ಷಯ’ ರೋಗವೂ ಒಂದು. ಪ್ರತಿವರ್ಷವೂ ಜಗತ್ತಿನ ಬಹುಭಾಗಗಳಲ್ಲಿರುವ ಹಲವು ರೋಗಗಳು ಸಣ್ಣ ಪುಟ್ಟ ಪಿಡುಗುಗಳ ರೀತಿಯಲ್ಲಿ ಮರುಕಳಿಸುತ್ತಿರುವ ಸುದ್ದಿಗಳು ಬರುತ್ತಿವೆ. ಕಾಲರಾ, ಕರಳುಬೇನೆ, ಜಾಪನೀಸ್, ಮಿದುಳು, ಜ್ವರ, ಡೆಂಗ್ಯೂಜ್ವರ ಮುಂತಾದವುಗಳು ಮನುಷ್ಯರನ್ನು ಆಗಾಗ ಆಕ್ರಮಿಸುತ್ತಲೇ ಇರುತ್ತವೆ.

ಈ ಹಿನ್ನಲೆಯಾಗಿ ಜೈವಿಕ ಸಮರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿ ಜಗತ್ತಿನಲ್ಲಿ ಶಾಂತಿ ಕಾಪಾಡಬೇಕಿದೆ. ಹಲವು ಶತೃರಾಷ್ಟ್ರಗಳಲ್ಲಿ ಇಂಥಹ ಜೈವಿಕ ಸಮರಾಸ್ತ್ರಗಳು ಆಂತರ್ಯದಲ್ಲಿಯೇ ತಯಾರಿಸಲಾಗುತ್ತದೆ, ಎಂಬ ಭಯಾನಕ ಸುದ್ದಿ ಇದೆ. ಮಾನವ ಕುಲವೆಲ್ಲ ಒಂದೇ ಶಾಂತಿ, ನೆಮ್ಮದಿ ನಮ್ಮೆಲ್ಲರ ಉಸಿರು ಎನ್ನುವುದು ಮುಖ್ಯವಾಗಬೇಕಿದೆ. ಇಲ್ಲದೇ ಹೋದರೆ ಈ ಅಸ್ತ್ರಗಳ ಪ್ರಯೋಗಗಳಿಂದ ಶಾಶ್ವತವಾಗಿ ಭೂಮಿ ಬಂಜರುವಾಗುವುದರಲ್ಲಿ ಸಂದೇಹವೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಗಿಲ ಬಡಿದಿದೆ ಭಾವೀ ವರ್ಷ
Next post ಕನ್ನಡಮ್ಮ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys