ಮಳೆರಾಜ ಬಂದಾನು ಭೂರಮೆಯ ಕರೆದಾನು ನಕ್ಕಾನು ಕೂಡ್ಯಾನು ಬಿತ್ಯಾನು ಬೀಜ ಕಿಲಕಿಲನೆ ನಕ್ಕಳು ಕೆರೆಕೊಳ್ಳ ತುಂಬಿತು ಉಕ್ಕಿ ಹರಿದಾವು ಹೊಳೆಹಳ್ಳ ಹದವಾದ ಭೂರಮೆಯ ಬಸಿರು ಉಬ್ಬುಬ್ಬಿ ಕ್ಷಣಕೊಂದು ಬೇನೆ ಕೊಟ್ಟಾಳ ಬೋಡು ಬೆಟ್ಟಗಳು ಚಿಗಿತಾವ ಕಾಡಿಗೆ ಕಾಡ...

ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ-‘ಮನ’ವ ಕೈಯ ಹಿಡಿಯಲಿ | ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ ಬೆಳಕಿನ ಪಥದಲಿ ನಿನ್ನರಿವೆ ತಾನದು ಹೊನ್ನ ದೀವಿಗೆ ಮರವೆ ತಾರದೆ ಜೊತೆ ಸೇರಲಿ | ದೇವ ...

ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು ಚಮಚ ...

ಮಲಗು ಮಲಗೆನ್ನೆದೆಯ ಮಂಟಪದ ಮೂರ್ತಿ ಮುಗಿಲಿನಲಿ ಮೋಡಗಳು ಕೂಡುತಿವೆ ಭರದಿ! ಜಗದ ಕೊನೆಯನು ತಂದ ದೂತರಂತೆ ಪ್ರಳಯ ರುದ್ರನ ಅಂಶ ತಾಳ್ದರಂತೆ ಗುಡುಗು ಸಿಡಿಲುಗಳೆರಗಿ ಜಗವ ನಡುಗಿಸುತಿಹವು. ನೀನೇಳಬೇಡ, ಮಗು, ಉಷೆಯೆ ಮಲಗಿನ್ನು! ನಾಳೆಯಂತೊ ಏನೊ ಎಂಬುದ...

ಅಧ್ಯಾಯ ೯ ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತನೊಬ್ಬ ನಾಗೂರಿಗೆ ಬಂದು ಮುಷ್ಕರದ ಕರಪತ್ರಗಳನ್ನು ಹಂಚತೊಡಗಿದ. ಓದುಬಾರದವರಿಗೆ ಓದಿ ಹೇಳುತ್ತಿದ್ದ. ಮುಂದಿನ ವಾರದಿಂದ-ಅಷ್ಟರೊಳಗಾಗಿ ಬೇಡಿಕೆಗಳ ಮಾನ್ಯವಾಗದಿದ್ದರೆ-ಎಲ್ಲ ಕಾರ್ಮಿಕರು ಮುಷ್ಕರ ಹೂಡಬ...

ದೇಹನ್ನೊಬ್ಬನಿಗೆ ಮನಸ್ಸೊಬ್ಬನಿಗೆ ಎಂಥಹ ಈ ಮೋಸ ನರ್ತಕಿ ಹೆಣ್ಣು ಎಲ್ಲೊ ಹುಟ್ಟು ಎಲ್ಲೊ ಬೆಳೆದ ನೀನು ಯಾರ್‍ಯಾರಿಗೆ ಎಷ್ಟೊಂದು ಮೋಸ ಮಾಡಿದಿ ಸುರಸುಂದರಿಯಂತೆ ಮೆರೆಯುತ್ತ ಶ್ರೀಮಂತರನ್ನು ಕಂಡು ಪ್ರೀತಿಸುವಳು ನಿನ್ನ ಮೋಸ ವಂಚನೆಗೆ ಬಲಿಯಾದ ಈ ನಮ್...

ಬಹಿಷ್ಠೆ ಹಸ್ತಿನಿ ಹೆಣ್ಣು ಗಜಮೈಥುನ ರಾಡಿಯಲ್ಲಿ ಸದಾ ತೆರೆದಿಟ್ಟ ಓಣಿ. ಓಣಿ ಓಣಿಗೆ ಬಸಿರಾದ ಹಿಡಿಂಬೆ ತೊಡೆ ಬಿಸಾಕಿದ ನನ್ನ ನಿರ್ಗತಿಕ ಪಿಂಡಗಳು ಚರಂಡಿಯಲ್ಲಿ ನಡುಗಿದವು ತಿಂತಿಣಿ ಬೆಳೆದು ಬೀದಿಗಳಲ್ಲಿ ಅಲೆದು ಹಸಿದು ಕೆಲವು ತಾವು ತಾವೇ ತಿಂದವು...

ಅದಾವ ಕ್ಷಣದಲೊ ಗಮ್ಯತೆ ಸೇರಿ ಮಾಸವೊಂದರಲ್ಲೇ ಅಸ್ತಿತ್ವ ತೋರಿ ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ ನಿನ್ನಾಟ ಒಡಲಲಿ ಬಾರಿ ಮತ್ತೇರಿ ಸೃಷ್ಟಿಕ್ರಿಯೆಯ ಆ ಕೈಚಳಕ ಹೊತ್ತು ತಂದಿದೆ ವರ್ಣಿಸಲಾಗದ ಪುಳಕ ಒದಿವಾಗ ಅವ ಎಡ ಬಲಕ ರೋಮಾಂಚನದ ಸಿಹಿಸಿಂಚನ ಮನಕ ನಿ...

ಎಡಬಿಡದೆ ಸುರಿದ ಮಹಾ ಮಾರಿ ಮಳೆಗೆ ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ ನೆಲಕ್ಕೆ ಕವುಚಿಬಿದ್ದ ಮರಿ ಹಕ್ಕಿ ಛಳಿಗೋ, ತೇವಕ್ಕೋ ಗಡಗಡನೆ ನಡುಗುತ್ತಾ ರೆಕ್ಕೆ ಬಿಚ್ಚಲಾಗದೇ ಮತ್ತಷ್ಟು ಮುದುಡುತ್ತಾ ತನ್ನ ಅಸಹಾಯಕತೆಗೆ ಬಿಕ್ಕುತ್ತಾ ಮನದೊಳಗೆ ಒಂ...

ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೇನು ತಪ್ಪಿಲ್ಲವೆನ್ನುತ್ತಾರೆ ಭಟ್ಟರು ಕಾವ್ಯವನ್ನು ಹೆಚ್ಚೆಂದರೆ ಬರಿ ಶ್ರವ್ಯವಾಗಿ ವಾಚಿಸಬಹುದು, ನಿಜವೆಂದರೆ ಕಾವ್ಯವಿರುವುದು ವಾಚನಕಲ್ಲವೇ ಅಲ್ಲ ನೇರ ಪಚನಕ್ಕೆನ್ನುತ್ತಾರೆ ಸನ್ಮಾನ್ಯ ಶ್ರೀ ಶರ್ಮರು. **...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....