Month: May 2018

#ಕವಿತೆ

ಶ್ರೀ ಕಾಡಸಿದ್ದೇಶ್ವರಾ!

0

ಯತಿವರನೆ ನಿನ್ನ ಹೆಸರಿಂದು ಉಸಿರಾಗಿಹುದು ನಿನ್ನ ತಪೋಬಲದಿ ಬೆಳಗಿರುವೆ ನಾಡನೆಲ್ಲವನು ಸುಖ-ದುಃಖ ಸಮನಾಗಿಸಿದ ಸ್ಥಿತಪ್ರಜ್ಞ ನೀನು! ಕಡುವಿರ ಸಿದ್ಧಯೋಗಿ ಶ್ರೀ ಕಾಡಸಿದ್ದೇಶ್ವರಾ!! ಈ ಪುಣ್ಯ ಭೂಮಿಯಲಿ ಪುಲ್‌ಪೊದರು ಬೆಳೆದು ಹಿಂದೊಮ್ಮೆ, ಪ್ರಕೃತಿ ರೌದ್ರರಮಣೀಯತೆ ತಾಳಿತ್ತು, ನಿನ್ನ ಅಧ್ಯಕ್ಷತೆಯಲಿ ಸರ್ವವೂ ನಿಯತ ಸ್ವಚ್ಛಂಧವಿತ್ತು, ಇಂದೋ ಸೌ೦ದರ್ಯ ಸುಕುಮಾರತೆ ಮೆರೆಯುತ್ತಿವೆ! ಕಾಡೆಲ್ಲಾ ನಾಡಿನಾ ಬಯಲಾಯ್ತು; ಮೋಡ ಮಿಂಚಾಯ್ತು ಕಾಡು […]

#ಕವಿತೆ

ಶರೀಫಜ್ಜನಿಗೆ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಒಂದು ಧರ್ಮಕೆ ಮೊಳೆತು ಇನ್ನೊಂದರಲಿ ಫಲಿತು ಸಾರ ಒಂದೇ ಎಂದು ಹಾಡಿದಾತ, ಹನಿ ಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ ನಭವೇರಿ ಮುಗಿಲಾಗಿ ಆಡಿದಾತ, ಹತ್ತು ವನಗಳ ಸುತ್ತಿ, ಹೂ ಹೂವನೂ ಮುತ್ತಿ ಒಂದೇ ಜೇನಿನ ಹುಟ್ಟು ಕಟ್ಟಿದಾತ, ಎಲ್ಲಿ ಹೇಳೋ ತಾತ, ಹಿಂದೆ ಯಾ ಅವಧೂತ ಸಾಧಿಸಿದ ನಿನ್ನಂತೆ ಧರ್ಮವನ್ನು, ಕಾವ್ಯದಲಿ ಕಡೆದ ಆ […]

#ಹನಿಗವನ

ಪ್ರಶ್ನೆ ಉತ್ತರ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಪ್ರಶ್ನೆ ಎಲ್ಲಾ ದಿಕ್ಕಿನಲ್ಲಿ ‘ಉತ್ತರ’ಕೆ ದಿಕ್ಕೆ ಇಲ್ಲ *****

#ಕವಿತೆ

ಮನೆ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಭೂಮಿ ಮೇಲೆ ಅದೆಷ್ಟು ಜಾತಿ ಮತ ಧರ್ಮಗಳ ಹಗೆತನ ಕೊಲೆ ಭಯೋತ್ಪಾದನೆಗಳ ಅಟ್ಟಹಾಸ. ಆಕಾಶ ಮಾರ್ಗ ಅದೆಷ್ಟು ಹೊಚ್ಚ ಹೊಸತನ ಬಾನಂಗಳ ಅದೆಷ್ಟು ಸುಂದರ ನನ್ನ ಕಿಡಕಿಯಾಚೆ ಅದೇನು ನಯನಮನೋಹರ ಇಲ್ಲೊಂದು ಪುಟ್ಟ ಮನೆ ಕಟ್ಟುವಾಸೆ. ಕಲ್ಲು ಮಣ್ಣಿನ ಇಟ್ಟಿಗೆ ಸಿಮೆಂಟಿನ ಮನೆ ಬೇಡ- ಅದಕೆ ಬಾಗಿಲು, ಕಿಟಕಿ, ಕೋಣೆ, ಬಾಲ್ಕನಿ ಎನುತ ತಲೆ ಕೆಡಿಸಿಕೊಳ್ಳುವುದು […]

#ಕವಿತೆ

ಅನಾದಿ

0
ಎನ್ ಎಂ ಗಿರಿಜಾಪತಿಯವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಮದವರು.ತಂದೆ ದಿ|| ಎನ್ ಎಂ ಸೋಮಶೇಖರಸ್ವಾಮಿ, ತಾಯಿ ಶ್ರೀಮತಿ ಎನ್ ಎಂ ವಿಶಾಲಾಕ್ಷಮ್ಮ,.ಗಿರಿಜಾಪತಿಯವರು ಎಂ. ಎ., ಬಿ. ಇಡಿ., ಪದವಿ ಪೂರೈಸಿದ್ದು, ಪಿ. ಎಚ್‌ಡಿ., ವ್ಯಾಸಂಗ ಮಾಡುತ್ತಿದ್ದಾರೆ.

ಮುಂಬೈನ ಬಿ.ಎ.ಎ.ಆರ್‍.ಸಿ. ಯವರಿಂದ ವಿಜ್ಞಾನ ಪ್ರಬಂಧಕ್ಕೆ ಗೌರವ ಪುರಸ್ಕಾರ. ‘ಮೃತ್ಯು ಸಂಝೀವಿನಿ’ ನಾಟಕ ಹಸ್ತಪ್ರತಿಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟೆಕ್ನಿಕಲ್ ಅಂಡ್ ಇಂಡಸ್ಟ್ರಿಯಲ್ ಮ್ಯೂಸಿಯಂನಿಂದ ಗೌರವ ಪುರಸ್ಕಾರ.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ, ಲಲಿತ ಪ್ರಬಂಧಕ್ಕೆ ಸಂಕ್ರಮಣ ಸಾಹಿತ್ಯ ಗೌರವ ದೊರೆತಿವೆ.

ಕೃತಿಗಳ ವಿವರ:

ಕವನ ಸಂಕಲನ:
ತಾಯಿ ಭಾರತಿ ಸುತೆ ಕನ್ನಡತಿ
ಭಾವನದಿಯ ದಂಡೆಯ ಮೇಲೆ...
ಆಮ್ಲ ಮಳೆ

ಕಥಾ ಸಂಕಲನ:
ನಾವು ನಮ್ಮವರು

ಮಕ್ಕಳ ನಾಟಕ:
ಅಪಾಯದ ಗಂಡೆ

ಸದ್ಭೋದಾಮೃತ ಶತಕ
ಕನ್ನಡ ವ್ಯಾಕರಣ ಮತ್ತು ಭಾಷಾ ರಚನೆ
ವಚನ ರತ್ನತ್ರಯರು
ಕಾವ್ಯ ಪರಿಕರಗಳು
ವಚನ ಚಿಂತಾಮಣಿ
ಕನ್ನಡ ಛಂದಸ್ಸಂಪದ
ಕನ್ನಡ ಛಂದೋದರ್ಪಣ
ಕನ್ನಡ ಭಾಷಾಲೋಕ
ಅಮೃತ ತರಂಗಿಣಿ
ಬೆಳಕಿನ ಹೆಜ್ಜೆಗಳು
ಪ್ರಾಚೀನ ಭಾರತೀಯ ಕಥಾ ಸಾಹಿತ್ಯ
ನಮ್ಮೂರ ಹೋಳಿ ಹಾಡು
*****
ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)

ಯಾವುದು ಮೊದಲೊ, ಮೊದಲಿಗ ರಾರೋ, ಭಾವವಿಸಂಗತ, ಅಲೇಖ್ಯ ನಂದನಕೆ, ಕೊನೆ ಎಲ್ಲಿಯದೊ, ಕೊನೆಯಿಸುವವರಾರೋ, ಭೂರಮೆ ಭಾಗ್ಯದ, ಬಾಂದಳದಂಗಳಕೆ, ಅಂಕುರವಾವುದೋ ಅಂದಣದ್ಹೇರಿಗೆ? ಅಂಕುಶವೆಲ್ಲಿಯೊ ಮುಂದಣ ಯಾನೆಗೆ? ನಿಃ ಶಬ್ದದಿ ದನಿಸಿದ ಇನಿದನಿಯಾವುದೊ, ಯುಗ-ಯುಗಾಂತರ ಜಾಲ-ಜಾಲದಲಿ, ಶಬ್ದ-ಶಬ್ದಾಬ್ದಿಯ ಶಾಬ್ದಿಕದಕ್ಕರ, ಜಗ-ಜಗ ಜಾತರ ಲೀಲಾ ಮಾಲೆಯಲಿ, ಪಲ್ಲವ-ಪಲ್ಲವಿ ಚರಣದ ಚಾರಣ, ವಲ್ಲರಿ ಗಾನ ಗಾಯನ ಸರ ಸ್ವರ ರಿಂಗಣ, ಪ್ರಕೃತಿ […]

#ಕವಿತೆ

ಭಯೋತ್ಪಾದನೆ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಅವರು ಗಲಾಟೆ ಮಾಡುತ್ತ ಸರಿದು ಹೋದರು ಓಣಿತುಂಬ ತೊಟ್ಟಿಲಲಿ ಮಲಗಿದ ಕಂದ ಚಟ್ಟನೇ ಚೀರಿತು, ಅಂಗಳದ ತುಂಬ ಗಿಡಗಳು ಕಾಣದಂತೆ ಧೂಳು, ತಲ್ಲಣ ಆವರಿಸಿದ ಮುಂಜಾವು. ಅವರು ಬಾಯಿ ಮಾಡುತ್ತ ಬಂದರು, ಜೊತೆಯಲಿ ತುಂಬ ಜನರ ತಂದರು, ಎಲ್ಲಾ ಹೂಗಳು ಬಳ ಬಳ ಬಿಚ್ಚಿ ವಿಕಾಳ ಹೊರ ಮರೆತು ಒಳ ಇಣುಕಿದ ಕಿಡಿ ಬಿಂಬ ಎಲ್ಲರ […]

#ಕವಿತೆ

ಹುಟ್ಟಿ ಬಾ ಗಾಂಧೀ ಮತ್ತೊಮ್ಮೆ

0
Latest posts by ಅಬ್ದುಲ್ ಹಮೀದ್ ಪಕ್ಕಲಡ್ಕ (see all)

ಜೋಪಡಿಯ ಒಳಗಿಂದ ಖಾಲಿ ಮಡಕೆಯ ಮುಂದೆ ಅಳುವ ಕಂದನ ಕೂಗು ಕೇಳಿರುವೆ. ಸತ್ತ ನಗರದ ರಾಜರಸ್ತೆಯ ಓಣಿಯಲಿ ರಾತ್ರಿ ರಾಣಿಯರ ಬೇಹಾರ ಕಂಡಿರುವೆ. ನೆಟ್ಟ ಫಸಲಿಗೆ ಕಟ್ಟದ ಬೆಲೆ ಹೊಟ್ಟೆಗೆ ಒದ್ದೆ ಬಟ್ಟೆ, ಕಟ್ಟಿ ಮಲಗಿದ ರೈತನ ಕಣ್ಣೀರು ನೋಡಿರುವೆ. ಧರ್ಮ ಭೋಧಿಸಿ, ಪುಷ್ಕಲ ತಿಂದು ಹಾಯಾಗಿ ಪವಡಿಸಿದ ಧರ್ಮಾತ್ಮರ ಗೊರಕೆ ಶಬ್ದಕ್ಕೆ ಬೆದರಿರುವೆ. ಮೊಣಕೈಗೆ […]

#ಸಣ್ಣ ಕಥೆ

ಧರ್ಮಸಂಸ್ಥಾಪನಾರ್ಥಾಯ

0

ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ, ಧರ್ಮಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು ವೆಂಕಟಸುಬ್ಬಯ್ಯನವರು ದೇವಳದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರಲ್ಲಿ ಎತ್ತರದ ಸ್ವರದಲ್ಲಿ, ಒಂದೇ ಉಸಿರಲ್ಲಿ, ಮೂತಿಗೆ ಇಕ್ಕಿದಂತೆ ಹೇಳಿದಾಗ ಅವರು […]

#ಕವಿತೆ

ಯಾವ ಹಾಡನು ನಾ ಹಾಡಲಿ

0

ಯಾವ ಹಾಡನು ನಾ ಹಾಡಲಿ, ಇನ್ನು- ಬಾಳಿನ ಉಷೆಯನು ಎಚ್ಚರಿಸಲಿ? ಬಂಗಾರ ಬಯಲಲಿ ಸಿಂಗಾರ ಬೆಳೆಯಲಿ ತಂದು ಇಕ್ಕಿದರೊಂದು ಕಿಡಿ ಬೆಂಕಿ ! ಬೆಳೆಯಲ್ಲಿ ಉರಿ ತಾಗಿ, ಬಯಲೆಲ್ಲ ಹೊಗೆಯಾಗಿ ಉಳಿದುದೆಲ್ಲವು ಇಲ್ಲಿ – ಎದೆ ಬೆಂಕಿ ! ನೋವನರಿಯದ ಬಾಳು ಬಾಳಲ್ಲ, ಬರಿ ಬೀಳು ; ನೋವಿನ ನಿಜವರಿತ ಬಾಳು ಗೋಳು ! ಒಲವಿನ […]