Month: January 2018

#ಇತರೆ

ಜಡ್ಡಿನ ಜಾಪತ್ರಿ

0
Latest posts by ವೀರೇಂದ್ರ ಸಿಂಪಿ (see all)

ಮಳೆ ಧೋ ಧೋ ಎಂದು ಸುರಿಯುತ್ತಿತ್ತು. ನನ್ನ ಹರಕು ಕೊಡೆ ಸತ್ಯಾಗ್ರಹ ಹೂಡಿತ್ತು. ಹೇಗೋ ಒಲುಮೆ ಜುಲುಮೆಗಳಿಂದ ಅದೇ ಕೊಡೆಯ ಆಶ್ರಯದಲ್ಲಿ ಮುಂದೆ ಸಾಗಿದ್ದೆ. ನನ್ನ ಲಂಗೋಟಿ ಗೆಳೆಯನೊಬ್ಬ ತನ್ನದೇ ಆದ ಗಾಂಭೀರ್ಯದಲ್ಲಿ ಮುಂದೆ ಬರುತ್ತಿದ್ದ. ಅಪರಿಚಿತರನ್ನಾಗಲಿ, ಬಹಳ ದಿನಗಳ ಮೇಲೆ ಭೆಟ್ಟಿಯಾದ ಪರಿಚಿತರನ್ನಾಗಲಿ ಮಾತಾನಾಡಿಸುವಂದೆಂದರೆ ನನಗೆ ಜೀವದ ಮೇಲೆ ಬರುತ್ತದೆ. ನಾನು ತಪ್ಪಿಸಿಕೊಳ್ಳಬೇಕೆಂದೆ. ನನ್ನ […]

#ಹನಿಗವನ

ಪ್ರಯಾಣ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಕೆಲವರಿಗೆ ರೈಲು ಕೆಲವರಿಗೆ ಜೈಲು ಕೆಲವರಿಗೆ ಬೈಲು ಎಲ್ಲರಿಗೂ ಪ್ರಯಾಣ ಮೈಲು, ಮೈಲು ಇದು ಜೀವನದ ಸ್ಟೈಲು ಜೋಪಾನವಾಗಿಡಿ ಪ್ರಯಾಣದ ಫೈಲು ಟಿಕೆಟ್ ಇರಲಿ ಕೈಲು *****

#ಕವಿತೆ

ಮ್ಯಾಟಿನಿ ಶೋ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಆಹಾ! ಎಷ್ಟೊಂದು ಸುಂದರ ಇದೇ ಇದೇ ಇಂದ್ರಲೋಕ ಇಂದ್ರನೊಡ್ಡೋಲಗ ಕಿನ್ನರರು ಕಿಂಪುರುಷರು ದೇವಾನುದೇವತೆಗಳು ಮೋಡಿನೊಡಲೊಳಗೇ ಚಲಿಸುವ ಇಲ್ಲೆಂದರಲ್ಲಿ ಅಲ್ಲೆಂದರಲ್ಲಿ ಇಂದ್ರಸುರೀಂದ್ರ ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯರ ತೋಳು ತೊಡೆ ಎದೆದಿಂಬುಗಳಿಗೊರಗಿ ಬೆಳ್ಳಿ ಶಲ್ಯ ಬಂಗಾರದೊಡವೆ ಮಣಿಮಾಣಿಕ್ಯ ಪಚ್ಚೆ ಆಕಾಶತುಂಬೆಲ್ಲ ಚೆಲ್ಲಾಪಿಲ್ಲಿ ನಡುಹಗಲಲ್ಲೇ ಕಂಡ ಇಂದ್ರನವತಾರ ಕಿಸಕ್ಕನೆ ನಕ್ಕೆ ಉಕ್ಕುಕ್ಕಿ ಬರುವ ಮೋಡನೊರೆ ವೈಯಾರಿಯರ ಬೆತ್ತಲೆ ಮುಚ್ಚಿ […]

#ಕವಿತೆ

ಸರತಿಯಲಿ ನಿಂತವರು

0

ಸಾವು ಮಾರಾಟಕ್ಕಿದೆ ಇಲ್ಲಿ ಜಗದ ಮಾರುಕಟ್ಟೆಯಲ್ಲಿ ತಕ್ಕಡಿಯ ಒಂದು ಬದಿ ಹಸಿವು ಕಲ್ಲಾಗಿದೆ ಇನ್ನೊಂದು ಬದಿ ಗ್ರೆನೇಡುಗಳು ಹಿಟ್ಟಿನ ಮುದ್ದೆ! ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ ಸಣ್ಣ ಕಂದಮ್ಮಗಳ ಎದೆಯ ಗೂಡಲ್ಲಿ ಇನ್ನೂ ಜೀವವಿದೆ ತೂರಿ ಆಟವಾಡುತ್ತಿವೆ ಕೈ ಬಾಂಬುಗಳನ್ನೇ ಚೆಂಡೆಂದು ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ ಅನ್ನದ ಡಬರಿಯಲಿ ತಮ್ಮದೇ ಕೂಸುಗಳು […]

#ಕವಿತೆ

ಯಾರದು ಯಾರದು ಯಾರದು?

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಯಾರದು, ಯಾರದು, ಯಾರದು ತಿಳಿಯಲು ಏತಕೆ ಬಾರದು? ಗಂಧದ ಮರದಲಿ ನಂದದ ಪರಿಮಳ ಲೇಪಿಸಿದವರಾರು? ಮಂದಾರದ ಹೂಬಟ್ಟಲ ಬಂಧವ ರೂಪಿಸಿದವರಾರು – ಗಿಡದಲಿ ಛಾಪಿಸಿದವರಾರು? ಬೆಟ್ಟದ ಮೈಯಲ್ಲೆಲ್ಲೋ ಸಂದಿಯ ಇಟ್ಟ ಧೀರ ಯಾರು? ಒಂದೊಂದೇ ಹನಿ ನೀರಿನಲಿ – ನದಿ ಹರಿಸಿದವರು ಯಾರು – ಸಾಗರ ತೆರೆಸಿದವರು ಯಾರು? ಹತ್ತದ ಆರದ ಕೆಂಡದ ಉಂಡೆಯ ಬಾನಿಗಿಟ್ಟರಾರು? […]

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೮

0

ನಾಟಕ ನಿರಂತರ. ನಾಟಕಶಾಲೆ ಬಿಟ್ಟುಕೊಟ್ಟು ಹೊರಡಬೇಕಾದವರು- ನಾವು *****

#ಸಣ್ಣ ಕಥೆ

ವಾಮನ ಮಾಸ್ತರರ ಏಳು ಬೀಳು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

“ಏಳು!” ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ ತನ್ನ ತಲೆಯನ್ನು ಅನಿಸಿ ಕುಳಿತಿದ್ದ. “ಏಳು!” ಅಂದರು ವಾಮನ ಮಾಸ್ತರರು ಇನ್ನೊಮ್ಮೆ, ತಗ್ಗಿದ ಆದರೆ ಕಠಿಣವಾದ ಧ್ವನಿಯಲ್ಲಿ. ರಾಜಪ್ಪ ಇದೊಂದು ತಲೆಹರಟೆ ಎನ್ನುವ ಭಾವವನ್ನು ಮೋರೆಯಲ್ಲಿ ಬೇಕಾದಷ್ಟು […]

#ಹನಿಗವನ

ಪ್ರೇಮೋನ್ಮಾದ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಚಟಪಟಿಸುವ ಎಲಬುಗಳನು ಕಿತ್ತು ಕುದಿಯುವ ರಕ್ತದಲಿ ಎದ್ದಿ ಸುಡುವ ಚರ್ಮದ ಮೇಲೆ ಬರೆದು ನಿನ್ನೆದೆಯ ಪೋಸ್ಟಬಾಕ್ಸಿಗೆ ಹಾಕಿದ್ದೇನೆ – ಬೇಕಾದರೆ ಓದು ಬೇಡವಾದರೆ ಅಲ್ಲಿಂದಲೇ ಅದಕೆ ಬೆಂಕಿ ಹಚ್ಚಿಬಿಡು. *****

#ಕವಿತೆ

ಗ್ರಾಮ ಒಂದು ಭೇಟಿ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಯಾರಿಗೆ ಯಾರು ಬರಕೊಟ್ವ ಉಂಬಳಿ ಈ ಗದ್ದೆ ಬಯಲು ಮನೆ ಮಠ ಅ ಮುದುಕ ಹೊದ್ಡ ಕಂಬಳಿ ? ಎರಡು ತಲೆಮಾರಿಗಿಂತ ಹಿ೦ದಿಲ್ಲದ ಇತಿಹಾಸ ಆದರೂ ಗುಡ್ಡದ ಕೆಂಗಣ್ಣ ದೇವತೆ ಎಲ್ಲವನ್ನೂ ನೊಡಿದೆ ಪಶ್ಚಿಮದ ಆಕಾಶ ರೇಖೆ ಅರಬೀ ಸಮುದ್ರದ ಅಂಚು ಈಚೆಗೆ ಘಟ್ಟಗಳ ಸಾಲು ತಪ್ಪಲಿನ ಹುಲ್ಲು ಹೊಂಬಣ್ಣಕ್ಕೆ ತಿರುಗುವ ನೀರವದಲ್ಲಿ ಸಮಳಿಸಿದ್ದೇನೆ ನಾನು […]

#ಕವಿತೆ

ಕೆಣಕದಿರಿ ಕವಿಯ

0
ಬೆಳಗೆರೆ ಜಾನಕಮ್ಮ
ಜನಕಜೆ
Latest posts by ಜನಕಜೆ (see all)

ಕವಿಗಳನು ಕೆಣಕದಿರಿ ದಮ್ಮಯ್ಯ ನೀವು ಕವಿಯಲ್ಲದವರಿಂಗೆ ಗೊತ್ತೆ ಕವಿತನವು ಭಳಿ ಭಳಿರೆ ಭಳಿರೆಂದು ಹೊಗಳದಿರಿ ಸಾಕು ಹೊಗಳಿಕೆಯು ತೆಗಳಿಕೆಯು ಕವಿಗೇನುಬೇಕು ಆವ ಭಾವಗಳವನ ಮುತ್ತಿಕೊಳುತಿಹುವೊ ಆವ ಕ್ರಾಂತಿಗಳೆದ್ದು ಅಟ್ಟಿಬರುತಿಹುವೊ ಆವ ರಾಜ್ಯವಸುತ್ತಿ ಸುತ್ತಿ ಬಳಲುವನೊ ಆವ ಸಾಹಸದೊಳಗೆ ತೊಡಗಿ ದಣಿಯುವನೋ ಅರಿವರಾರವನೊಳಿಹ ಸ್ವಚ್ಛಂದ ಸ್ಫೂರ್ತಿಯ ಕೆಣಕದಿರಿ ಎಂದಿಹಳು ಜನಕಜೆಯು ಕವಿಯ *****