
ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...
ಮರಗಳೆಲೆಗಳ ನಡುವೆ ತೂರಿ, ಅಲೆಗಳ ಮೇಲೆ ಬೆಳ್ಳಿಯೆರಕವ ಹೊಯ್ದ ಚಂದಿರನ ಬೆಳಕಿನಲಿ ತೊರೆಯ ಹೃದಯವು ಅರಳಿ, ಚಿಮ್ಮಿ, ಕುಣಿಯುವಹಾಗೆ ಮನಸು ಕುಣಿಯುತಲಿಹುದು ನಿನ್ನ ನುಡಿ ನನಸಿನಲಿ ನಾ ಮುಂದೆ ಸಾಗುತಿರೆ! ಹಿಗ್ಗಿನಲಿ ಕುಣಿಯುತ್ತ, ನಿನ್ನ ಕಂಡೊಡನೆನ್ನ...
ಎಲ್ಲಿ ಹೋದಳು ಕತೀಜ, ನನ್ನ ಮಗಳು ಮೀನು ತರುತ್ತೇನೆಂದು ಹೋದವಳು ಬೇಗನೆ ಬರುವೆ ಎಂದವಳು? ಸಂಜೆಯಾಯಿತು ಕೊನೆಯ ಬಸ್ಸೂ ಹೊರಟು ಹೋಯಿತು ಏನು ನೋಡುತ್ತ ನಿಂತಳೊ ಏನೊ- ಸಂತೆಯ ದೀಪಗಳಲ್ಲಿ ಹೊಳೆಯುವ ಬಣ್ಣದ ಲಂಗ ಪೇಟೆಯವರು ಹಾಕುವಂಥ ಚಪ್ಪಲಿ ಹೊಸ ನಮೂನೆ...
ಅಷ್ಟಾವಕ್ರ ರೂಪ ಯಾರೋ ಇತ್ತ ಶಾಪ ತನ್ನಿರುವಿಕೆಗೆ ಮಳೆರಾಯನ ಸಾಕ್ಷಿಗೆ ಕರೆಕರೆದು ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ ಗಂಟಲೇ ಬರಿದು! ಎದೆಯಾಳದ ಮಾತು ಹೇಗೆ ಹೇಳುವುದು? ಆದರೂ ಯಾರಿಗೇನು ಕಡಿಮೆ? ಅಲ್ಪವೇ? ಉಭಯಚರವೆಂಬ ಹಿರಿಮೆ? ಭೂಮಿಯಲೇ ಇದ್ದರೂ ನೀ...
ಹೇಳಿ ಕೇಳಿ ನಾನು ಒಬ್ಬ ಕವಿ ಹೊಗಳಿಕೆ ತೆಗಳಿಕೆಯ ವಿಮರ್ಶೆಗಳನ್ನು ಒಂದರಲ್ಲಿ ಕೇಳಿ ಇನ್ನೊಂದರಲ್ಲಿ ಬಿಟ್ಟು ಬಿಡುವುದಕ್ಕಾಗಿ ದೇವರು ನನಗೆ ಕೊಟ್ಟಿದ್ದಾನೆ ಎರಡು ಕಿವಿ. *****...














