ಚಳಿ ಎನ್ನುವ ಹುಳಿಗೆ
ಪ್ರೇಮ ಕನಸಿನ ಉಪ್ಪು ಹಚ್ಚಿ
ಮೆದ್ದಾಗ
ಚಿಮ್ಮುವ ನೀರಿನಂತೆ
ಮೈ ನಿಮಿರುವ ನಿನ್ನ ಮಾತು
ರಗ್ಗಿನೊಳಗೆ ಕಾವೇರಿಸುವದು.
*****