ಎಲ್ಲಾದರೂ ಇರು
ಎಂತಾದರೂ ಇರು
ನೀ ಎಂದೆಂದಿಗೂ ಭಾರತೀಯನಾಗಿರು
ಭಾರತೀಯತೆ ಸತ್ಯ ಭಾರತೀಯತೆ ನಿತ್ಯ

ಭಾರತಾಂಬೆ ಓ ಮುದ್ದಿನ ಮಗು
ಭಾರತೀಯತೆ ನಿನ್ನಲ್ಲಿದರೆ
ಭಾರತಾಂಬೆಯ ಹೆಮ್ಮಯ ಪುತ್ರ
ಭಾರತಾಂಬೆಗೆ ನೀ ಕಲ್ಪತರು

ನೀ ನಡೆದಾಡುವ ನೆಲವೆಲ್ಲ ಭಾರತೀಯತೆ
ನೀ ಉಸಿರಾಡುವ ಗಾಳಿಯಲ್ಲ ಭಾರತೀಯತೆ
ರಾಮ ಸೀತೆಯರಿಗಾಗಿ ಎರಗೂವ ಮನ
ಹರಿದು-ಹಂಚಿಹೋದ ಭಾರತಕ್ಕೆ ಕೊರಗುವ ಮನ

ನೀ ಮುಟ್ಟುವ ಮರ
ಅದೇ ಶ್ರೀಗಂಧದ ಮರ
ನೀ ಕುಡಿಯುವ ನೀರು
ಗಂಗಾ-ಯಮುನ-ಬ್ರಹ್ಮಪುತ್ರ ಕಾವೇರಿ ನೀರು

ಜಾತಿ-ಮತ-ಭೇದ
ಅಳಿಸಿದಂತ ಮನ
ಭಾರತಾಂಬೆಯ ಮಕ್ಕಳೆಂದು
ಸಾರಿ ನುಡಿಯುವ ಮನ ತನುಮನ

ತಾ ಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಭಾರತೀಯತೆ
ಹಿತ ನುಡಿಯುವ ಮಾತಿಗೆ
ರೋಮಾಂಚನವಾಗುವ ತನುಮನ
*****