ನಡು ಸಮುದ್ರದ ನೆತ್ತಿಯ ಮೇಲೆ ನಡು ಸೂರ್ಯನ ಉರಿಬಿಸಿಲ ಕೆಳಗೆ ಸುಮ್ಮನೆ ನಿಂತು ಬಿಟ್ಟಂತಿದೆ ಈ ವಿಮಾನ ಕಿಡಕಿಯಾಚೆ ಕೆಳಗೆ ಇಣುಕಿದರೆ ಇಡೀ ಬ್ರಹ್ಮಾಂಡವೇ ಆವರ್ತಿಸಿದಂತೆ ಎಲ್ಲೆಲ್ಲೂ ಕಪ್ಪು ನೀಲಿ ನೀರೇ ನೀರು ಅರಬ್ಬಿ ಸಾಗರದ ದೈತ್ಯ. ಅಲ್ಲಲ್ಲಿ ತೊ...

ಒಮ್ಮೆ ಮನದೊಳಗಿಣುಕಿ ನೋಡು ನಿನ್ನನ್ನು ಕೆದಕಿ | ಹೃದಯವಿಹುದೆಲ್ಲರಲಿ ಮೀಟುತಲಿ ಕ್ಷಣ ಕ್ಷಣದಿ, ಹೃದಯವಂತಿಕೆ ಶೂನ್ಯ ಕಾಲ ಕಾಲಾಂತರದಿ, | ಸಂಚಿತದ ತಿಳಿವಿದ್ದರು ಸಂಕುಚಿತೆ ಬದುಕಿನಲಿ, ಮೌಲ್ಯಗಳು ಅಳಿದಳಿದು ಶೂನ್ಯ ಮನದಲಿ ಕವಿದು | ಭಾವ ತೀವ್ರತೆ...

ಎಲ್ಲಾ ಕನಸುಗಳ ದಾಟಿ ಕಣ್ಣ ಕಾಡಿಗೆ ತೀಡಿದೆ, ಮದರಂಗಿ ಅರಳಿದೆ ಕೈಯಲಿ, ಮಾಯೆ ಎದೆಯೊಳಗೆ ಇಳಿದಿದೆ, ಇಲ್ಲಿ ಅರಳುವ ಹೂಮನ ಎಲ್ಲೆಲ್ಲೂ ಘಮಘಮ. ಅಂತರ ದೃಷ್ಠಿಯ ಅಂತರದಲಿ ಸರಿದಾಗ ಆಳ ನಿರಾಳ ಕಣ್ಣೋಟಗಳು, ಬಿಂಬಿಸಿವೆ ಕಾಮನ ಬಿಲ್ಲಿನ ಬಣ್ಣ ಸಮಸಮ ಅಮಲು...

ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ ಬದಿಯಲ್ಲಿದ್ದ ಬೂದಿರಾಶಿಯ ಪಕ್ಕದಿಂದ ಗರಗಸದ ಹುಡಿಯನ್ನು ಕ...

ತಂಗಾಳಿಯೆಂದು ಕಿಡಕಿ ಬಾಗಿಲು ಹಾಕಿ ಕರ್ಟನ್ ಎಳೆದದ್ದಾಯಿತು – ಆದರೇನು ಬಾಗಿಲಿನ ಕೀಲಿಯ ಕಿಂಡಿಯಿಂದ ಒಳನುಸುಳುವುದೆ? *****...

ಹಾಸಿಗೆಯಿರುವುದು ನಿದ್ದೆಗೆಂದು ಯಾರು ಹೇಳಿದರು? ಅದು ಆನಂದಿಸುವುದಕ್ಕೆ ತಬ್ಬಿ ಹೊರಳಾಡುವುದಕ್ಕೆ ಎಲ್ಲ ಮರೆಯುವುದಕ್ಕೆ, ತೆರೆಯುವುದಕ್ಕೆ ಉದ್ದಕ್ಕು ಮೈಚಾಚಿ ಹಾವಸೆಯಾಗಿ ನಿನ್ನ ಪರೆಯಾಗಿ ನಾ ನೆನೆಯುತ್ತೇನೆ: ನಾನು ಇಲ್ಲೆ ಹುಟ್ಟಿದ್ದು ಸತ್ತದ್ದ...

ಗೋಡೆ ಗೋಡೆಗಳಲಿ ಅಲಂಕಾರಕ್ಕಿದ್ದ ಕತ್ತಿ ಚೂರಿಗಳಿಗೆಲ್ಲ ಹೊಳಪೋ, ಹೊಳಪು ಹರಿತವಹೆಚ್ಚಿಸುವ ಭಾರಿ ಹುರುಪು ಮಸೆವ ಕಲ್ಲಿಗೂ ಬಿಡುವಿಲ್ಲದ ಕೆಲಸ ಮನಮನದಲೂ ಕತ್ತಿ ಮಸೆವ ಬಿರುಸು ಸೈತಾನದ ಶಕ್ತಿಗೂ ಮತಾಂಧತೆಗೂ ಗಳಸ್ಯ ಕಂಠಸ್ಯ ಮಾನವತೆಗೂ ಬಿರುಕು ಕ್ರೂ...

ಯಾರೋ ಒದ್ದು ಚೆಲ್ಲಾಪಿಲ್ಲಿ ಹರಡಿದ ತನ್ನ ಕನಸುಗಳನೆಲ್ಲಾ ಬಾಚಿ ಗುಡ್ಡೆ ಹಾಕಿ ಗಂಟು ಕಟ್ಟಿ ಬೆನ್ನಿಗೇರಿಸಿ ಹೊರಟುಬಿಡುತ್ತಾಳೆ ಎಲ್ಲಾ ಧಿಕ್ಕರಿಸಿ! ಕಾಡು, ಕಂದರ, ಪರ್ವತ ಸಮುದ್ರ, ನದೀ ತಟ ಬಿಚ್ಚಿದ ಆಕಾಶ ಮುಚ್ಚಿದ ಭೂತಟ ಎಲ್ಲ ಎಲ್ಲವ ದಾಟಿ ನಡೆ...

ಹೌದೇ ಹೌದು ಖಂಡಿತಾ ಹೌದು ಮಹರಾಯ್ತಿ ಹೌದು ಹೌದು ಹೌದು ದೇವರಾಣೆ ಮಕ್ಕಳನ್ನು ಸೇರಿದಂತೆ ಎಲ್ಲವೂ ನನ್ನಿಂದಲೇ ಆದದ್ದು, ನಾನೇ ಕಾರಣ, ನಾನೇ ಹೊಣೆ ನಾನೊಬ್ಬ ದೊಡ್ಡ ಬೆಪ್ಪು. ಆದರೆ ಒಂದನ್ನಾದರೂ ಒಪ್ಪಿಕೊ ಪುಣ್ಯಾತ್ಗಿತ್ತಿ ನನ್ನಂಥವನನ್ನು ಒಪ್ಪಿ ಮ...

1...4546474849...73

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...