ಹೌದೇ ಹೌದು ಖಂಡಿತಾ ಹೌದು
ಮಹರಾಯ್ತಿ ಹೌದು ಹೌದು ಹೌದು ದೇವರಾಣೆ
ಮಕ್ಕಳನ್ನು ಸೇರಿದಂತೆ ಎಲ್ಲವೂ
ನನ್ನಿಂದಲೇ ಆದದ್ದು, ನಾನೇ ಕಾರಣ, ನಾನೇ ಹೊಣೆ
ನಾನೊಬ್ಬ ದೊಡ್ಡ ಬೆಪ್ಪು.
ಆದರೆ ಒಂದನ್ನಾದರೂ ಒಪ್ಪಿಕೊ ಪುಣ್ಯಾತ್ಗಿತ್ತಿ
ನನ್ನಂಥವನನ್ನು ಒಪ್ಪಿ ಮದುವೆಯಾದದ್ದು
ನೀನೇ ಮಾಡಿದ ಒಂದು ಸಣ್ಣ ತಪ್ಪು.
*****