ಹಾಸಿಗೆ

ಹಾಸಿಗೆಯಿರುವುದು ನಿದ್ದೆಗೆಂದು
ಯಾರು ಹೇಳಿದರು?
ಅದು ಆನಂದಿಸುವುದಕ್ಕೆ
ತಬ್ಬಿ ಹೊರಳಾಡುವುದಕ್ಕೆ
ಎಲ್ಲ ಮರೆಯುವುದಕ್ಕೆ, ತೆರೆಯುವುದಕ್ಕೆ
ಉದ್ದಕ್ಕು ಮೈಚಾಚಿ
ಹಾವಸೆಯಾಗಿ
ನಿನ್ನ ಪರೆಯಾಗಿ ನಾ ನೆನೆಯುತ್ತೇನೆ:
ನಾನು ಇಲ್ಲೆ ಹುಟ್ಟಿದ್ದು
ಸತ್ತದ್ದೂ ಇಲ್ಲೆ
ಇದರ ಮಧ್ಯೆ ಬದುಕಿದ್ದು ನಿನ್ನಲ್ಲೆ
ನನ್ನ ಮೈ ಮೇಲೆ ನೀನು ಮೈಚಾಚಿ
ಎಳೆ ನಾಗರದಂತೆ
ಕಡಿದದ್ದು
ಕುಡಿದದ್ದು
ಲಿಂಗೈಕ್ಯರಾದದ್ದು
ಒಂದು ಕ್ಷಣವಲ್ಲ
ಅದು ಮಾತಿಗೆ ಬರುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಂಕಿ
Next post ತುಡಿತ

ಸಣ್ಣ ಕತೆ