ಊರ್ಧ್ವರೇತಸ್ ಹಾಡಿದರು ವೈದಿಕ ಋಷಿಗಳು
ಬೀಳದಿರಲಿ ಎಂದೆಂದೂ ಕೆಳಕ್ಕೆ ಮನಸು ಎಂದು
ಮನಸು ಬೀಳುವುದೆಂದರೆ ಸುಮ್ಮನೇ ಗಟ್ಟಿ
ಪಿಂಡವೇ ಬಿದ್ದಂತೆ ಅದು ಎದ್ದು ನಿಂತೀ
ತೆಂಬ ನಂಬಿಕೆಯಿಲ್ಲ
ಎಬ್ಬಿಸಿ ನಿಲ್ಲಿಸುವುದೂ ಕಷ್ಟ
ಬೀಳದಿರಲಿ ಮನಸ್ಸು
ಬೀಳದಿರಲಿ ಧೈರ್ಯ
ಬಾಡದಿರಲಿ ಬದುಕು
ಉಡುಗದಿರಲಿ ಉತ್ಸಾಹ.
*****