ಅವನೊಬ್ಬ ಕಟುಕ, ಮಾಂಸವನ್ನು ಕತ್ತರಿಸಿ ಅಂಗಡಿಯಲ್ಲಿ ತೂಗಿಹಾಕಿ ಮಾರಾಟ ಮಾಡುತ್ತಿದ್ದ. ಅವನು ಮರದ ಹಲಗೆಯ ಮೇಲೆ ಪ್ರಾಣಿಗಳ ಇಡೀ ದೇಹವನ್ನು ಕತ್ತರಿಸುವಾಗ ಅವನ ಹೃದಯ ಸ್ಪಂದಿಸುತ್ತಿರಲಿಲ್ಲ. ಒಮ್ಮೆ ಅವನ ಬೆರಳಿಗೆ ಕತ್ತಿ ಬಿದ್ದು ಬೆರಳು ತುಂಡಾಗಿ ರಕ್ತ ಸುರಿಯಿತು. ಅವನಿಗೆ ಪ್ರಾಣ ಹೋದಂತಾಗಿ ನೋವಿನ ಅರಿವಾಯಿತು. ಮರದ ಹಲಗೆಯ ಮೇಲೆ ತುಂಡರಿಸಿದ್ದ ಪ್ರಾಣಿಯ ಬಾಯಿ ಮಾತನಾಡಲು ಬಾಯಿ ತೆರದಂತೆನಿಸಿತು. ಅವನು ಕತ್ತಿ ಮಚ್ಚನ್ನು ಹೂಳಿಟ್ಟು ಬೇರೆ ವೃತ್ತಿಯನ್ನು ಹುಡುಕಿ ಹೊರಟ.
*****