ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!
ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ
ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****
ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!
ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ
ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****
ನಿಮ್ಮ ಕವಿತೆ ಯೊಳಗೆ ಇಣುಕಿದರೆ ಕಾಣುತಿದೆ ಧರೆಯ ಬರ . ಹೊರಲಾಗದೆ ಹೊಣೆ. ಇರಿಯುತಿದೆ ವಿವೇಚನೆ. ಕಾಣದಾಗಿದೆ ದಾರಿ ಬಂದು ಕೂತಿದೆ ಮಾರಿ .,. ಮಾರಾಟ ವಾಗುತ್ತಿದೆ ದೇಶ ಉಳಿಸಲು ಬರಲೋಲ್ಲ ಈಶ
ಭರವಸೆಯ ಬೆಳಕು ಬರಬಹುದು ಬದುಕು ಬದುಕು ಬದುಕು ತೊಲಗಲಿ ಹುಳುಕು.