ಪ್ಲೋರೋ ಕಾರ್‍ಬನ್ ಹೊಸ ರಕ್ತ

ಪ್ಲೋರೋ ಕಾರ್‍ಬನ್ ಹೊಸ ರಕ್ತ

ಅಶಕ್ತರಿಗೆ, ರೋಗಿಗಳಿಗೆ, ರಕ್ತಹೀನರಿಗೆ ಅಗತ್ಯವಾದ ರಕ್ತವನ್ನು ಅವರಿವರಿಂದ ದಾನ ಪಡೆಯಲಾಗುತ್ತದೆ. ಅಥವಾ ಬ್ಲಡ್ ಬ್ಯಾಂಕಿನಿಂದ ಹಣ ತೆತ್ತು ತಂದು ರಕ್ತವನ್ನು ರೋಗಿಗಳಿಗೆ ಪೊರೈಸಲಾಗುತ್ತದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಕೆಲವರ ರಕ್ತದಿಂದ ಏಡ್ಸ್‌ನಂತ ಮಹಾರೋಗ ತಗುಲಬಹುದು ಮತ್ತು ದುಬಾರಿ ಬೆಲೆ ಕೊಟ್ಟು ಬಡವರಿಗೆ ಕೊಳ್ಳಲಾಗದಿರಬಹುದು. ಇಂಥಹ ಅಡ್ಡಪರಿಣಾಮಗಳನ್ನು ಹೋಗಲಾಡಿಸಲೆಂದೇ ವಿಜ್ಞಾವಿಗಳು ‘ಪ್ಲೋರೋ ಕಾರ್‍ಬನ್’ ನಿಂದ ರೋಗಿಗೆ ರಕ್ತವೃದ್ಧಿಯಾಗುವ ಸಂಶೋಧನೆಯನ್ನು ಮಾಡಿದ್ದಾರೆ. (ಇಲ್ಲಿ ರಕ್ತದ ವರ್‍ಗ ಸಹಿತ ಬದಲಾಗಬಹುದು)

ಅಮೇರಿಕಾದ ವಿಜ್ಞಾನಿಗಳಾದ ಡಾ|| ಪ್ರಾಂಕ್‌ಗೊರನ್ ಮತ್ತು ಡಾ|| ರೆಲ್ಯಾಂಡ್ ಕ್ಲಾರ್‍ಕ್‌ರು ಇದರ ಅದ್ಭುತ ಗುಣವನ್ನು ಬಯಲಿಗೆಳೆದರು. ಫ್ಲೂರೋ ಕಾರ್‍ಬನನ್ನು ದೇಹಕ್ಕೆ ಸೇರಿಸಿದರೆ ಅಡ್ಡಪರಿಣಾಮಗಳಾಗದೇ ಅದು ರಕ್ತವು ಎಷ್ಟು ಅಂಗಾರಾಮ್ಲ, ಆಮ್ಲಜನಕಗಳನ್ನು ಹೀರಿಕೊಳ್ಳುವುದೋ ಅದರ ೧೫ ಪಾಲಿನಷ್ಟು ಅಧಿಕವಾಗಿ ಹೀರಿಕೊಂಡು ರೋಗಿ ಸಾಯುವುದನ್ನು ತಪ್ಪಿಸಬಲ್ಲದು ಎಂದು ದೃಧೀಕರಿಸುತ್ತಾರೆ.

೧೯೭೨ ರಲ್ಲಿ ಅಮೇರಿಕಾದ ಡಾ || ವಿಲಿಯಂ ಕೋಸೆನ್‌ಬಾಂ ಅವರು ಇಲಿಗಳ ಮೇಲೆ ಅವುಗಳ ರಕ್ತದ ಪ್ರತಿಶತ ೭೫ ರಷ್ಟು ಪ್ರಮಾಣದಲ್ಲಿ ಫ್ಲೂರೋ ಕಾರ್‍ಬನನ್ನೂ ಪೂರೈಸಿ ನೋಡಿದರು. ಅದರಿಂದ ಇಲಿಗಳ ಮಿದುಳು ಮತ್ತು ಹೃದಯದ ಕ್ರಿಯೆಗಳಲ್ಲಿ ವ್ಯತ್ಯಾಸವುಂಟಾಗಲಿಲ್ಲ. ಬಹುಬೇಗನೆ ಫ್ಲೂರೋಕಾರ್ಬನ್ ಅಂಶ ದೇಹದಿಂದ ಮಾಯವಾಗಿ ರಕ್ತವು ಅಧಿಕಗೊಳ್ಳುತ್ತಿರುವುದು ಕಂಡು ಬಂದಿತು. ಇಲಿ ಮತ್ತು ನಾಯಿಗಳ ದೇಹಕ್ಕೆ ಫ್ಲೂರೋಕಾರ್‍ಬನನ್ನು ಪ್ರಯೋಗಿಸಿ ಅವು ದೀರ್‍ಘಕಾಲ ಏನೂ ತೊಂದರೆ ಇಲ್ಲದೇ ಬದುಕಿದ್ದನ್ನು ಮನಗಂಡರು.

ಹಾರ್ವರ್ಡ್‌ ವಿಶ್ವವಿದ್ಯಾಲಯರಲ್ಲಿ ೧,೫೦೦ ಕ್ಕಿಂತ ಹೆಚ್ಚುರ ರೀತಿ ಫ್ಲೂರೋ ಕಾರ್‍ಬನ ಮಾದರಿ ಚುಚ್ಚು ಮದ್ದುಗಳನ್ನು ತಯಾರಿಸಿ ಅಧ್ಯಯನ ಮಾಡುವ ಕಾರ್‍ಯ ಮುಂದುವರೆದಿದೆ. ಇದರಲ್ಲಿ ಯಾವ ಮಾದರಿಯ ಪ್ರಯೋಗದಿಂದ ಬಲುಬೇಗನೆ ತಾನಾಗಿ ರಕ್ತತುಂಬಿಗೊಳ್ಳುತ್ತದೆ ಎಂಬುದರ ಸೂಕ್ಷ್ಮ ಪರೀಕ್ಷೆಯೂ ನಡೆಯುತ್ತದೆ. ಈ ಶತಮಾನದ ಕೊನೆಗೆ ರಕ್ತಹಾನಿಯ ಅಗತ್ಯವಿಲ್ಲದೇ ನಿಜರಕ್ತವಿಲ್ಲದೇ ಹೊಸ ಮಾದರಿಯ ರಕ್ತ ಗಳಿಸುವ ಸಂಶೋಧನೆ ಬೆಳಕಿಗೆ ಬರುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಲ್ಲುದೆ ಲತೆ ಫಲಂ ತನ್ನ
Next post ಒಂದು ಸಾವಿನ ಸುತ್ತ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…