ಒಂದು ಸಾವಿನ ಸುತ್ತ

ಪತ್ರಿಕೆಗಳು ಸುದ್ದಿ ಮಾಡಿದವು
ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು
ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ
ರಾತ್ರಿ ಕತ್ತಲೆಯಲಿ ನಡದೇ ಹೋಯ್ತು
ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ
ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ
ಮೆಟ್ರೋ ಮಹಿಳೆಯರ ಮೈಯಲ್ಲಿ ನಡುಕ.

ಜಾಗತಿಕ ಗ್ರಾಹಕರ ನೇರ ಸಮರ್‍ಪಕ
ಕಾಲ್‌ ಸೆಂಟರ್‌ಗಳ ಲೋಕ ಭಾವನಾತ್ಮಕ
ಹೈಟೆಕ್ ಸಂಸ್ಕೃತಿಗಳ ಹಿಂದೆ ಅಡಗಿರುವ
ನೂರಾರು ಗೈರತ್ತು-ಶಿಸ್ತಿನ ಕೊಕ್ಕುಗಳು
ದಾಟಲಾಗದು ಡೆಡ್‌ಲೈನ್‌ಗಳು
ಜೀವ ಹೋದರೂ ಸರಿಯೇ
ಹೊತ್ತಲ್ಲದ ಹೊತ್ತಿನಲ್ಲಿ ನಿರಂತರ ದುಡಿತ
ಮಾನಸಿಕ ಒತ್ತಡ, ರಕ್ಷಣೆ ಕೇಳಿದರೆ
ಕೆಲಸ ಹೋಗುವ ಭಯ
ದುಡಿಯಲೇಬೇಕಿದೆ ಹೊಟ್ಟೆಪಾಡಿದೆಯಲ್ಲ?
ಸಮಾನತೆಯ ಸೂತ್ರದಲ್ಲಿ ಬಂಧಿಸಿಯಾಗಿಸಿ
ಅವಳನು ಆಪತ್ತಿನ ಬಾಯಿಗೆ ದೂಡುವುದೇಕೆ?
ಜೀವನದಿಯಾಗಿ ತುಂಬಿ ಹರಿದವಳು
ಕರ್‍ಮ ಕಾಂಡಗಳ ಸಹಿಸಿ ಬತ್ತಬೇಕೇಕೆ?
ಸೂರ್‍ಯಶಿಕಾರಿಗೆ ಹೊರಟವಳ
ದಾರಿಗೆ, ಅಡ್ಡಗೋಡೆಗಳ ಒಡ್ಡುವುದೇಕೆ?
ಎಲ್ಲ ಸಾದಿಸಲು ಹೊರಟವಳಿಗೆ
ಇಲ್ಲವಾಗಿಸುವ ಹುನ್ನಾರವೇಕೆ?
ಅವಳ ಶ್ರಮ ಕಂಪನಿಗಳ ಲಾಭಕ್ಕಲ್ಲವೇ?
ಇರಲಿ ನಮ್ಮವನೇ ಚಾಲಕ ನಮ್ಮದೇ ಕಂಪನಿ
ವಿದೇಶಿಯರ ಲಾಭಕ್ಕೆ ಇನ್ನೆಷ್ಟು ಬಲಿಗಳು?
ಕತ್ತಲೆಯ ಗೋರಿಯಿಂದ ಎದ್ದು ಬಾರಮ್ಮ
ಅವರ ಪಾತಕದ ಒಂದೊಂದು ಬಿಲ್ಲೆಯ
ಲೆಕ್ಕವನೂ ಬಿಡದೇ ಕೇಳು ಬಾರಮ್ಮ
ಇಲ್ಲವಾದರೆ ಹೆಣ್ಣಗಳು ಹೇಗೆ ದುಡಿದಾರು?
ಭೂಮಿ ಮೇಲೆ ತಮ್ಮ ತುತ್ತನ್ನು
ತಾವು ಹೇಗೆ ಗಳಿಸಿಯಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ಲೋರೋ ಕಾರ್‍ಬನ್ ಹೊಸ ರಕ್ತ
Next post ಕಡಲಿದಿರು

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…