ಹಕ್ಕೀ ಹಾಗೇ ನಾನೂನೂ ರೆಕ್ಕೆ ಬಿಚ್ಕೊಂಡು ಹಾರಾಡ್ಬೇಕು ಮೋಡದ ನಡುವೆ ಭೂಮಿ ನೋಡ್ಕೊಂಡು! ಮೀನಿನ ಹಾಗೇ ನಾನೂ ಪಿಳ ಪಿಳ ಕಣ್ಣನ್ ಬಿಟ್ಕೊಂಡು ಈಜ್ತಿರಬೇಕು ಮೈಮಿಂಚಸ್ತ ನೀರನ್ ಸೀಳ್ಕೊಂಡು! ಪುಟಾಣಿ ಕರುವಿನ ಹಾಗೇ ನಾನೂ ಬಾಲ ಎತ್ಕೊಂಡು ಓಡ್ತಿರಬೇಕು ...

ಬೀಚಿಯವರ ಜೋಕು: ವರಮಹಾಶಯ ಮದುವೆಯಾಗಲು ಹೆಣ್ಣನ್ನು ನೋಡುವ ಸಂದರ್ಭ: “ಇವಳಿಗೆ ೨೦ ವರ್ಷ ೨೦೦೦೦/- ರೂ ವರದಕ್ಷಿಣೆ ಅವಳಿಗೆ ೩೦ ವರ್ಷ- ೩೦೦೦೦/-” ಅಲ್ಲಿದ್ದಾಳಲ್ಲ ಅವಳಿಗೆ ೪೦ ವರ್ಷ. ೪೦೦೦೦/- “ಯಾರನ್ನು ಇಷ್ಟಪಡುತ್ತೀ? ಗಂಡ...

ಆಧಾರವ ಬಲಿಯೆ, ಬೇಗೆ ಉರಿಯಿತ್ತು. ಆ ಕಿಚ್ಚು ಆವರಿಸಿ ಊರ್ಧ್ವಕ್ಕೇರಿತ್ತು. ಸಾಸಿರದಳ ಅಮೃತ ಕೊಡ ಕಾಯಿತ್ತು. ಕಾದ ಅಮೃತ ಉಕ್ಕಿ ತೊಟ್ಟಿಕ್ಕಿ ಅಮೃತವನುಂಡು ಹಸಿವೆ ಕೆಟ್ಟಿತ್ತು. ತೃಷೆಯಡಗಿತ್ತು. ನಿದ್ರೆ ಆರತಿತ್ತು. ಅಂಗಗುಣವಳಿಯಿತ್ತು. ಲಿಂಗಗುಣ...

ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು ಹಣದ ಹೆಣಗಳ ಮೆರವಣಿಗೆಗಳು ರಣಹದ್ದುಗಳ ಕಾಲುಗುರು ಕೊಕ್ಕುಗಳು ಗಂಟೆ ಜಾಗಟೆಗಳ ಶಂಖವಾದ್ಯಗಳು ಜುಟ್ಟು ಜನಿವಾರ ಸಿವುಡುಗಂಟುಗಳು ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ ...

ಅರವತ್ತರ ದಶಕದಲ್ಲಿ, ತಾರಾನಾಥ ನನ್ನನ್ನು ನನಗೆ ಸಾಧ್ಯವಾದ ಎತ್ತರಕ್ಕೆ ಏರುವಂತೆ ಪ್ರಚೋಸಿದ ಗೆಳೆಯ.  ಗೆಳೆಯ ಮಾತ್ರವಲ್ಲ ಗುರು, ತಿದ್ದಿತೀಡಿ ಹಂಗಿಸಿ ವಿಸ್ತರಿಸಿ ಹೊಗಳಿ ಬೆಳೆಸಿದವನು ರಾಜೀವ. ‘ಪ್ರಶ್ನೆ’ ಸಂಕಲನದ ಒಂದೊಂದು ಕಥೆಯೂ ರೂಪುಗೊಂಡಿದ್...

ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದರೆ ಅದನ್ನು ಮತ್ತೆ ಒಟ್ಟಿಗೆ ಸೇರಿಸಲಿಕ್ಕಾಗುವುದಿಲ್ಲ ಎಂದೆಲ್ಲ ನೇನೇಕೆ ಹೇಳಲಿ?  ಎಲ್ಲರಿಗೂ ಗೊತ್ತಿರುವ ತೀರ ಸಾಮಾನ್ಯವಾದ ಸಂಗತಿಗಳನ್ನು ಬಿಟ್ಟುಬಿಡೋಣ.  ಬರೇ ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ...

ಸೂರ್ಯ ಅಂಥವನು ಇಂಥವನು ಅಂತ ಅಟ್ಟಕ್ಕೇರಿಸಿ ಹೊಗಳಿ ಹೊತ್ಕೊಂಡು ಕುಣೀಲಿಕ್ಕೆ ಅವನೇನು ಮನುಷ್ಯನೇ.  ಏನು ಹೆಣ್ಣೇ ಅಥವಾ ಗಂಡೇ? ತಿಳಿಕೊಳ್ಳಿ ಅದೊಂದು ಸದಾ ಹೊತ್ತಿಕೊಂಡು ಉರೀತಿರೋ ಗುಂಡಾದ ಬರೀ ಬೆಂಕಿಯ ಉಂಡೆ *****...

ಬಂಡ್ವಾಳ್ವಿಲ್ಲದ ಬಡಾಯಿ ಅಥ್ವಾ ಹೀಗೂ ಉಂಟೆ ಒಂದು ಸಾಮಾಜಿಕ ಪ್ರಹಸನ ಪಾತ್ರಗಳು ಅಹೋಬ್ಲು : ಬುಳ್ಳಾಪುರದ ಲಾಯ್ರಿ ಜೀವು : ಈತನ ಪತ್ನಿ ಮುದ್ಮಣಿ : ಈತನ ಕುಮಾರ ಬಾಳು : ಈತನಿಗೆ ಕೋರ್ಟ್ನಲ್ಲಿ ಜೂನಿಯರ್, ಆಫೀಸ್ನಲ್ಲಿ ಕ್ಲರ್ಕ್, ಮನೆಯಲ್ಲಿ ಪರಿಚಾ...

1...1920212223...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...