ಆಧಾರವ ಬಲಿಯೆ, ಬೇಗೆ ಉರಿಯಿತ್ತು.
ಆ ಕಿಚ್ಚು ಆವರಿಸಿ ಊರ್ಧ್ವಕ್ಕೇರಿತ್ತು.
ಸಾಸಿರದಳ ಅಮೃತ ಕೊಡ ಕಾಯಿತ್ತು.
ಕಾದ ಅಮೃತ ಉಕ್ಕಿ ತೊಟ್ಟಿಕ್ಕಿ
ಅಮೃತವನುಂಡು ಹಸಿವೆ ಕೆಟ್ಟಿತ್ತು.
ತೃಷೆಯಡಗಿತ್ತು. ನಿದ್ರೆ ಆರತಿತ್ತು.
ಅಂಗಗುಣವಳಿಯಿತ್ತು. ಲಿಂಗಗುಣ ನಿಂದಿತ್ತು.
ಸಂಗಸುಖ ಹಿಂಗಿ, ಅಂಗಲಿಂಗವೆಂಬ ಉಭಯವಳಿದು,
ಮಂಗಳ ಮಹಾ ಬೆಳಗಿನಲ್ಲಿ ಓಲಾಡಿ
ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****