Year: 2013

#ಕವಿತೆ

ಯಾರೋ ಬಂದರು ಹಾರಿ

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಯಾರೋ ಬಂದರು ಹಾರಿ ಧಗೆಯ ಕುದುರೆಯನೇರಿ ಉರಿದಾವು ಹೂಮಲ್ಲಿಗೆ – ಬಿಸಿಯುಸಿರಿಗೆ ಬೂದಿಯಾದವು ಮೆಲ್ಲಗೆ ಬೆಂಕಿಯಂಗಾಲಿಂದ ತುಳಿದು ಕೆಂಡವ ಸುರಿದ ಉರಿದು ಹೋದವು ಹೂವು ಚಿಗುರು ಉಕ್ಕಿ ಹೋದವು ಹಾಲು ಹೌಹಾರಿ ಹಾಯೆನಲು ಬಿರಿದಾವು ಎದೆಯ ನೋವು – ಆಸೆಯೆ ಉರಿಗೆ ತೆರೆದಾವು ಎದೆಯ ನೋವು ನಿಂತ ನೀರಿನ ತು೦ಬ ನೂರು ತಾರೆಯ ಬಿಂಬ ನಡುಗಿ […]

#ಕವಿತೆ

ರೀತಿ ನೀತಿ (ಅಮೆರಿಕ)

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

೧ ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ ವೈಭವೀಕರಿಸಿ ಹೇಳುವ ರೀತಿಗೆ ಬೆರಗಾಗಬೇಕು ವಿಜ್ಞಾನ ತಂತ್ರಜ್ಞಾನ ಮೇರೆಮೀರಿದ ಡಾಲರ್ ಹೊಳೆ ಸಮಯ ಪ್ರಜ್ಞೆಗೆ ಟಾಮ್ ಹ್ಯಾರಿಗಳ ನಡುವೆ ಎರಡನೆಯ ದರ್ಜೆಯ ನಾಣಿ ಸೀನರ ಹೋರಾಟ ಗೋಳಾಟ ಹಣಕ್ಕೆ ಸಮಾಧಾನ ಪಡುವ ಗತಿ. ಅಮೆರಿಕದ ಬಗೆಗೆ ಅದೆಷ್ಟು ಪ್ರೀತಿ ಸಾಧಕ ಸಂಶೋಧಕರಿಗೆ ತವರು ಸಂಶಯವಿಲ್ಲ ಏನೆಲ್ಲ ಸೌಕರ್ಯ ಆಂತರಿಕ […]

#ಅಣಕ

ಬಿಜೆಪಿದೀಗ ತಬ್ಬಲಿಯು ನೀನಾದೆ ಮಗನೆ ಪೋಜು

0

ಇತ್ತೀಚೆಗೆ ಬಂದ ತಾಜಾಖಬರ್ ಗೊತ್ತೇನ್ರಿ? ಖ್ಬರಗೇಡಿ ಬಿಜೆಪಿ, ದ್ಯಾವೇಗೌಡ ಅಂಡ್ ಸನ್ಸ್ ಕಟುಕರ ಅಂಗಡಿನಾಗೆ ಕುರಿಯಾಗಿಬಿಟ್ಟದೆ. ಕುರ್ಚಿ ಆಶೆಗಾಗಿ ಕೂಗು ಮಾರಿ ಯಡೂರಿ ಗೋಡ್ರ ಪಾದಕ್ಕೆ ಶರಣಾಗಿ ಉಗುಳಿದರೆ ದಾಟುವಷ್ಟು ಪ್ಯಾರಸೈಟಾಗಿ ಬಿಟ್ಟಿರೋದ್ರಿಂದ, ಬಿಜೆಪಿ ಸ್ಥಿತಿ ಈಗ ತಬ್ಬಲಿಯೂ ನೀನಾದೆ ಮಗನೆ ಅಂಬಗಾಗೇತ್ರಿ. ಅಪ್ಪ ಮಕ್ಕಳ ಇರುದ್ದವಾಗಿ ಯಡೂರಿ ಅವಾಜ್ ಎತ್ತಿದ್ದೇ ಕಮ್ಮಿ. ಇಲ್ಲ ಅಂದ್ರೂ […]

#ಕವಿತೆ

ವ್ಯಾಪಾರ

0

ಇಲ್ಲಿ ನಿತ್ಯಸಂತೆ ಅನುಕ್ಷಣವೂ ಬಿರುಸಿನ ಮಾರಾಟ ಎಲ್ಲ ಎಲ್ಲವೂ ವ್ಯಾಪಾರದಾಟ! ಹೂವು – ಹಣ್ಣು ಹಸಿರು – ಮೀನು ನಾನು – ನೀನು – ಅವನು ಎಲ್ಲ ಇಲ್ಲಿ ಬಿಕರಿಗಿಟ್ಟ ಸರಕು! ಭರಾಟೆ ಮಾರಾಟದಲಿ ಯಾರಿಗೆ ಬೇಕು ಹೃದಯದ ಕೂಡಬಲ್ಲ ಕಳೆಯಬಲ್ಲ ತಲೆಯಿದ್ದರೆ ಸಾಕು! ಕೊಡುವುದೆಷ್ಟು? ಕೊಳುವುದೆಷ್ಟು? ಲಾಭವೆಷ್ಟು? ನಷ್ಟವೆಷ್ಟು ಎಲ್ಲ ಬರಿಯ ಲೆಕ್ಕ ತಕ್ಕಡಿಯೇ […]

#ಹನಿಗವನ

ಮ್…ಮ್

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಈ ದೇಶದಲ್ಲಿ ಎಷ್ಟೋ ಸಮಸ್ಯೆಗಳು ಬೆಂಕಿ ಹೊತ್ತಿಕೊಂಡ ಕೊಂಪೆಯಂತೆ ಅವುಗಳಿಗೆ ಯಾವೋ ಪರಿಹಾರಗಳು ನೀರು ಬಾರದ ಪಂಪಿನಂತೆ *****

#ಜನಪದ

ದೀಪ ಮಾತಾಡಿತು

0
ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)

ಒಂದೂರಾಗ ಅತ್ತಿಗಿ ನಾದಿನಿ ಇದ್ದು ನಾದಿನಿ ನೀರು ಹೊಯ್ಕೊಂಡಿದ್ದಳು. ಐದರಾಗ ಅಣ್ಣ ತಂಗೀಗಿ ಕರಕೊಂಡು ಬರಲಿಕ್ಕ ಹೋದ. ಕರಕೊಂಡೂ ಬಂದ. ಅಡವ್ಯಾಗ ಒಂದು ಬಾಳೆಗಿಡ ಇತ್ತು. ಅದರ ಬುಡಕ್ಕ ಅಣ್ಣ ತಂಗಿ ಮನಕೊಂಡರು. ತಂಗಿ ನಿದ್ಯಾಗ ಗುರ್ ಹೊಡೆದಳು, ಹೊಟ್ಯಾಗಿನ ಕೂಸು ಗೊರಕಿ ಹೊಡೀತದ ಎಂದು ಅಣ್ಣ ತಂಗೀಗಿ ಲಗೂಮಾಡಿ ಮನೇಗಿ ಕರಕೊಂಡು ಬಂದ. ಅತಿಗಿ […]

#ನಗೆ ಹನಿ

ನಗೆ ಡಂಗುರ – ೯೭

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಅವರು: “ತಾವು ಸಿಗರೇಟು ಸೇದುತ್ತೀರಾ?” ಇವರು: “ಇಲ್ಲಪ್ಪ.” ಅವರು: “ಬೀಡಿ ಚುಟ್ಟ ಇತ್ಯಾದಿ?” ಇವರು: “ಛೇ, ಛೇ ಅವಾವುದೂ ಇಲ್ಲ” ಅವರು: “ಕುಡಿಯುವ ಅಭ್ಯಾಸ?” ಇವರು: “ಅಯ್ಯೋ ಅದರ ಗಂಧವೇ ಗೊತ್ತಿಲ್ಲ” ಅವರು: “ಆಯ್ತು. ಇಸ್ಪೀಟು, ಜೂಜು ವಗೈರೆ?” ಇವರು: “ಎಲ್ಲಾದರೂ ಉಂಟೆ? ಅಂತಹ ದುರಭ್ಯಾಸಗಳು ಇಲ್ಲವೇ ಇಲ್ಲ.” ಅವರು: “ಪರವಾಗಿಲ್ಲವೆ. ಯಾವೊಂದು ದುಶ್ಚಟವೂ ನಿಮಲ್ಲಿ […]

#ಸಣ್ಣ ಕಥೆ

ಬದುಕು ಹೀಗೇಕೆ !

0

ಮೊನ್ನೆ ನಾನು ಬೇಸಿಗೆಯಲ್ಲಿ ರಜಕ್ಕೆ ಊರಿಗೆ ಬಂದಾಗ ಭೀಮಣ್ಣ ತೀರಿಕೊಂಡ ಸುದ್ದಿಯನ್ನು ಅಮ್ಮ ಹೇಳಿದಳು. ಊಟ ರುಚಿಸಲಿಲ್ಲ.  ಭೀಮಣ್ಣ ಗಟ್ಟಿ ಮುಟ್ಟಾಗೇ ಇದ್ದ.  ನಮ್ಮಂತವರಿಗೆ ಅಮರಿಕೊಳ್ಳುವ ಡಯೊಬಿಟೀಸ್, ಬಿಪಿ ಆತನ ಬಳಿಯೂ ಸುಳಿದಿರಲಿಲ್ಲ ಆತನ ಜೀವನ ಶೈಲಿಯೇ ಅಂತದ್ದು, ಶ್ರಮಜೀವಿ ಸಾಯುವ ವಯಸ್ಸೇ ಆತನದಾದರು ಆತನ ಸಾವು ನನ್ನನ್ನು ಕ್ಷಣ ಗಲಿಬಿಲಿಗೊಳಿಸದಿರಲಿಲ್ಲ. ‘ಆರೋಗ್ಯವಾಗಿದ್ದನಲ್ಲ’ ಗೊಣಗಿದೆ.  ಇತ್ತೀಚೆಗೆ […]

#ಕವಿತೆ

ನನ್ನ ಮನವ ಕದ್ದವನೇ ಬಾ

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ನನ್ನ ಮನವ ಕದ್ದವನೇ ಬಾ ನನ್ನ ಹರಣ ಗೆದ್ದವನೇ ಬಾ ನನ್ನ ಕೂಡಿ ಕಳೆವ ಗಳಿಗೆಗೆ ಏನೆಲ್ಲವನೂ ಒದ್ದವನೇ ಬಾ ನಿನ್ನ ಎದುರು ಬಿಂಕ ಏನಿದೆ ದೇವರೆದುರು ಶಂಕೆ ಏನಿದೆ? ನಿನ್ನ ಸೇರಿ ಉರಿದು ಹೋಗುವಾ ಬೆಂಕಿ ಬಯಕೆ ಮೈಯೊಳೆದ್ದಿದೆ ನನ್ನೆದೆಯಾ ಚಿನ್ನ ಹಾರವೇ ಕನ್ನ ಕೊರೆದು ಸುಲಿವ ಭಾರವೇ ನಿಮಿಷಕ್ಕೊಮ್ಮೆ ರೋಮಾಂಚನಕೆ ಸಲಿಸುವಂಥ ಪ್ರೇಮಸಾರವೇ […]

#ಕವಿತೆ

ಇಜಿಪ್ತಿನೆದೆಯಾಳ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಉರಿ‌ಉರಿಬಿಸಿಲು ನೆತ್ತಿಯಮೇಲೆ ಸುಡುವ ಮರಳು ಕಾಲ್ಕೆಳಗೆ ಸುಂಯನೆ ಬೀಸುವ ಬಿಸಿ ಬಿರುಗಾಳಿ ಕೂತೂಹಲದ ಕಣ್ಣುಮನಸುಗಳ ಮೌನ ಮಾತು ನೋಡಬೇಕೆನ್ನುವ ತವಕ ಪಡದವರಾರು. ನೋಡಬೇಕು ನೋಡಲೇಬೇಕು ಏನೆಲ್ಲ ಮಾತನಾಡಬೇಕು ಪುರಾತನ ನಗರಿಗಳೊಂದಿಗೆ ತೇಲಬೇಕು ಮುಳುಗೇಳಲೇಬೇಕು ಜೀವನದಿ ನೈಲದೆದೆಯಾಳಕೆ ಮತ್ತೆ ಜೀವಬಂದಿದೆ ಪರೋಹಗಳಿಗೆ ಕಾತರಿಸಿರುವರು ಮಮ್ಮಿಗಳು ಮಾತನಾಡಲು ನೈಲ್ ನದಿಯ ಕಾಲಗರ್ಭ ಬಿಚ್ಚಿಕೊಳ್ಳುತ ಅದೇನೋ ಸಡಗರ ಮಂದಗಾಮಿನಿ ಒಮ್ಮೊಮ್ಮೆ […]