ಪಿಳ್ಳೇಗೌಡರು ಹೆಸರುವಾಸಿಯಾದ ಕಾಫಿ ಪ್ಲಾಂಟರು. ಅವರ ತೋಟ ಬಾಬಾಬುಡನ್ ಗಿರಿಗಳಲ್ಲೆಲ್ಲಾ ಬಹಳ ದೊಡ್ಡದು. ಯೂರೋಪಿಯನ್ ಪ್ಲಾಂಟರ್‌ಗಳು ಕೂಡ ಅವರಿಗೆ ಗೌರವ ಕೊಡುವರು. ಅವರ ದೇಹ ದೊಡ್ಡದು, ಗಂಟಲು ದೊಡ್ಡದು, ಹೊಟ್ಟೆ ದೊಡ್ಡದು, ಮನಸ್ಸು ದೊಡ್ಡದು; ಎಲ...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳು...

ಬೆಳಗ್ಗೆ ಎದ್ದವರು ಎದ್ದ ಹಾಗೆ ಶಾನುಭೋಗರು ಸಂಗಪ್ಪನ ಮನೆಗೆ ಬಂದರು. ಸಂಗಪ್ಪ ಶಯನಗೃಹವನ್ನಿನ್ನೂ ಬಿಟ್ಟಿರಲಿಲ್ಲ. ಅವನ ಹೆಂಡತಿಗೆ ಶಾನುಭೋಗರ ಮೇಲೆ ಸಿಟ್ಟೇ ಬಂದಿತು. ರಾತ್ರಿ ಸಂಗಪ್ಪ ಅದೆಲ್ಲಿ ಹೋಗಿದ್ದನೊ ಬೆಳಗಿನ ಜಾವದಲ್ಲಿ ಮನೆಗೆ ಬಂದಿದ್ದ. ಯ...

ಶಿಷ್ಯರನೇಕರು, ತಮಗೆ ತೋರಿದ ಕಾಣಿಕೆಯಾಗಿ ಬುಟ್ಟಿ, ಹಣ್ಣು, ಹೂವು, ಚಿನ್ನ, ಬೆಳ್ಳಿ, ಹಣ ಮೊದಲಾದವುಗಳನ್ನು ಗುರುಗಳಿಗೆ ತಂದು ಕೊಡುತ್ತಿದ್ದರು. ಶಿಷ್ಯ ರಾಮನಿಗೆ ಎನೂ ತೋಚಲಿಲ್ಲ. ಸೀದಾ ಗುರುಗಳಲ್ಲಿಗೆ ಬಂದು “ನನಗೆ ಏನು ಕಾಣಿಕೆ ಕೊಡಲು ತ...

ವೀಣಾ ತಾತನಿಗೆ ಮೋಹದ ಮೊಮ್ಮಗಳು. ಒಂದು ಗಳಿಗೆ ಮುದುಕ ಅವಳನ್ನು ಬಿಟ್ಟಿರಲಾರ. ತಂದೆತಾಯಿಗಳ ಜೊತೆಯಲ್ಲಿ ಒಂದು ದಿನ ಸಿನಿಮಾಕ್ಕೆ ಹೋಗಿ ಬಂದರೆ ಅಲ್ಲಿ ತಾನು ಕಂಡುದು ಕೇಳಿದ್ದು ಎಲ್ಲಾ ಅವನಿಗೆ ಎರಡು ದಿನ ಹೇಳುವಳು. ಮುದುಕನಿಗೆ ಸಿನಿಮಾ ಬೇಡ. “ಛೇ...

ಮೂಲ: ವಿ ಎಸ್ ಖಾಂಡೇಕರ ತೆಂಗಿನ ಗರಿಗಳ ಗುಡಿಸಲಿನ ಮುಂದೆ ಕುಳಿತು ಅಂತೂನನು ದಾರಿ ಕಾಯುತ್ತಿದ್ದ. ಅಂದವಾದ ಚಂದ್ರಕಲೆಯನ್ನು ತನ್ನ ಆಟಿಗೆಯನ್ನಾಗಿ ಮಾಡಿಕೊಳ್ಳಲು ಹವಣಿಸುವ ಬಾಲಕನ ಚೀರಾಟದಂತೆ ದೂರಿನಿಂದ ಸಮುದ್ರದ ತೆರೆಗಳ ಸಪ್ಪಳವು ಕೇಳಬರುತ್ತಿತ್...

ಭೂದಾನದ ವಿಷಯಕ್ಕೆ ಬಂದು ಭೂಸುಧಾರಣೆ ಸಂಗತಿ ತಿಳಿಸಿದ್ದಾಯ್ತು. ಈಗ ಅನೇಕರಿಗೆ ಗೊತ್ತಾಗಿದೆ `ಸಂಗಪ್ಪನ ಭೂಸುಧಾರಣೆ’ ಹೇಗಾಯ್ತು ಅಂತ. ಆದರೆ ಅದಕ್ಕೆ ಯಾರೇನೂ ಮಾಡಲಿಲ್ಲ. ಈ ಮಾದರಿ ಮನುಷ್ಯನನ್ನು ಇನ್ನೂ ಅನೇಕರು ಅನುಸರಿಸಿದರು. ಆದ್ದರಿಂದಲ...

ಬಹುದೂರದ ಹೊಲದಲ್ಲಿ ಖಾರದ ಮೆಣಸಿನ ಕಾಯಿಗಳು ಒಂಟಿತನದಲ್ಲಿ ಕೆಂಪಾಗಿ ಬಾಡುತ್ತಿದ್ದವು. ಸಮುದ್ರ ಉಪ್ಪು ಹೆಪ್ಪು ಗಟ್ಟಿ ಉಪ್ಪಿನ ಹರಳಾಗಿ ದಡದಲ್ಲಿ ಸಂಗಾತಿಗಾಗಿ ಕಾಯುತಿತ್ತು. ಗಾಳಿ ಬೀಸಿದಾಗಲೆಲ್ಲಾ ಹುಣಸೆ ಕಾಯಿಗಳು ನೆಲದ ಮೇಲೆ ಬಿದ್ದು ನರಳುತ್ತ...

ಮುರುಳೀಧರರಯನು ಮಹಡಿಯ ಮೇಲೆ ಕಿಟಕಿಯ ಮಗ್ಗುಲಲ್ಲಿ ಒಂದು ಸೋಫಾದ ಮೇಲೆ ಒರಗಿಕೊಂಡಿದ್ದಾನೆ. ಬಾಯಿ ತುಂಬು ಇರುವ ಅಡಿಕಲೆಯನ್ನು ಮಹತ್ತರವಾದ ಆಲೋಚನೆಯಲ್ಲಿ ಮುಳುಗಿದ್ದಾರೆ. ಮಂಗಳೂರು ಗಣೇಶ ಬೀಡಿಯ ಕಟ್ಟು ಒಂದು ದೀಪದಡ್ಡಿ ಪಟ್ಟಿಗೆ, ಮಗ್ಗುಲಲ್ಲಿರುವ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...