Home / ಕವನ / ಹನಿಗವನ

ಹನಿಗವನ

ತನ್ನಷ್ಟಕ್ಕೆ ತಾನು ನಡೆದು ಹೋಗುತ್ತಿದ್ದರೂ ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು ಯಾರೋ ನೋಡಿದಾಗ ಭಯಗೊಂಡು ಬೆವೆತು ಚಕ್ಕನೆ ಆ ಕಡೆ ಸರಿದರೆ ಯಾರು ಇಲ್ಲ ಆದರೂ – ಏಕೋ ಏನೋ ಸಂತೆಯಲ್ಲಿ ನಡೆದಾಡಿದ ನೆನಪು *****...

ಅರಿಯದವರ ಅನಿಸಿಕೆ ಹೆಣ್ಣು ಅಬಲೆ ತಿಳಿಯದು ಹೆಣ್ಣಿನ ಬೆಲೆ ಸಮಯಸಿಕ್ಕಾಗ ಬೀಸಿ ಬಲೆ ತೋರಿಸುತ್ತಾರೆ ಜಗತ್ತಿಗೆ ತಾವೆಂತಹ ಸಬಲೆ *****...

ಬಹಿರಂಗದಲಿ ರೊಟ್ಟಿ ಹಸಿವಿನ ಸಮಾನ ಸಂಗಾತಿ. ಅಂತರಾಳದಲಿ ಅಂತರಗಳ ವಿಜೃಂಭಣೆ. ಹಸಿವಿನ ಮೇಲರಿಮೆಯಲಿ ರೊಟ್ಟಿಯ ಹೆಡ್ಡತನಗಳು ಢಾಳಾಗಿ ಗೋಚರಿಸಿ ಕೀಳರಿಮೆಯಲಿ ನರಳಿಕೆ. ಮನಸುಗಳ ದೂರ ವಿಸ್ತಾರ....

ಆಕಾಶ ಭೂಮಿ ಮಹದ್ ಕಾವ್ಯ ಮರವೃಕ್ಷ ಸಕಲ ವೇದ ಗಿಡಬಳ್ಳಿ ಸರಳ ರಗಳೆ ಪೊದೆಕಳ್ಳಿ ಕಥೆ ಕಾದಂಬರಿ ನದಿನಾಲೆ ಪ್ರವಾಸ ಕಥನ ಸರೋವರ ಚಿಲುಮೆ ಭಾವಗೀತೆ ಸಾಗರ ಗ್ರಂಥಾಲಯ ಆಗರ ಯುಗಯುಗಕು ಮುಫ್ತಲಿ ಸಿಗುವ ಪಠ್ಯ ಪುಸ್ತಕಗಳಿವು ನಿಂತು ಓದು ಬಾ ಮಾನವ ಕುರುಡ ಬ...

ಪ್ಯಾಂಟು ಶರ್ಟು ತೊಟ್ಟು ಬಾಯ್‌ಕಟ್ ಮಾಡಿಕೊಂಡು ಹೊಂಡಾ ಓಡಿಸುವ ಹುಡುಗಿ – ಡಾಕ್ಟರ್‍ ಇಂಜಿನೀಯರ ಆಫೀಸರ್‍ ಬಿಸಿನೆಸ್‌ಮ್ಯಾನ್ ಎನ್ನುತ್ತಾ ಕಾರು ಓಡಿಸುವ ಹುಡುಗಿ ತಿಂಗಳು ಕೊನೆಗೆ ಬಚ್ಚಲಲ್ಲಿ ಬ್ಯುಸಿಯಾಗಿ ಹೆಣ್ಣಾಗಿರುತ್ತಾಳೆ. ಕನ್ನಡಿಯ ...

ತಾನೆಷ್ಟು ವಿನಯವಂತನೆಂಬ ಅಹಂಕಾರ ಎದ್ದು ಕಾಣುತ್ತಿದ್ದರೆ ಅವನಲ್ಲಿ ತನ್ನ ಅಹಂಕಾರ ಎಲ್ಲಿ ಕಾಣಿಸಿಕೊಂಡುಬಿಡುತ್ತದೆಯೋ ಎಂಬ ವಿನಯ ಇವನ ವರ್ತನೆಯಲ್ಲಿ *****...

ಹಸಿವಿನ ಗರ್ಭದೊಳಗೆ ಭ್ರೂಣವಾಗಿರುವ ಭಾವಗಳು ಏಕೋ ಕಾಣೆ ಮಾತುಗಳಾಗುವುದಿಲ್ಲ. ಬದಲಿಗೆ ಗರ್ಭಪಾತಕ್ಕೊಳಗಾಗುತ್ತವೆ. ಛಿದ್ರಗೊಂಡು ಸಿಡಿದುಬೀಳುತ್ತವೆ. ಆ ಪ್ರತಿ ಚೂರುಗಳಲ್ಲೂ ರೊಟ್ಟಿ ತನ್ನ ಸಾವು ಕಾಣುತ್ತದೆ....

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...