ಹಸಿವಿನ ಗರ್ಭದೊಳಗೆ
ಭ್ರೂಣವಾಗಿರುವ ಭಾವಗಳು
ಏಕೋ ಕಾಣೆ ಮಾತುಗಳಾಗುವುದಿಲ್ಲ.
ಬದಲಿಗೆ ಗರ್ಭಪಾತಕ್ಕೊಳಗಾಗುತ್ತವೆ.
ಛಿದ್ರಗೊಂಡು ಸಿಡಿದುಬೀಳುತ್ತವೆ.
ಆ ಪ್ರತಿ ಚೂರುಗಳಲ್ಲೂ
ರೊಟ್ಟಿ ತನ್ನ ಸಾವು ಕಾಣುತ್ತದೆ.