Home / ಕವನ / ಕವಿತೆ

ಕವಿತೆ

ಮೊನ್ನೆ ಸಂಜೆ ಗುರು ಶುಕ್ರರನ್ನೇ ಕಣ್ಣುಗಳಮಾಡಿ ಆಕಾಶವೇ ನಕ್ಕಂತೆ ನೀ ಬಿಡಿಸಿಟ್ಟ ಚಿತ್ರ, ಬಹಳ ವಿಚಿತ್ರ. ನಮ್ಮವರ ಚಂದ್ರಯಾನ ನಿನ್ನ ಮೇಲಿಳಿದಾಗ ಆಗಿದ್ದರೂ ಆಗಿರಬಹುದು ನಿನಗೊಂದಿಷ್ಟು ಕಚಗುಳಿ. ಆದರೆ ಮಧುಚಂದ್ರಕ್ಕೆ ಬಂದಿದ್ದಾರೆಂದೆಣಿಸಿ ಉದಾಸ...

ಬದುಕು ಬಡಿದಾಡುತ್ತ ಕಣ್ಣು ಹೊಸಕಿಕೊಳ್ಳುತ್ತ ಕ್ಯಾರಿಯರ್ ಹಿಡಿದುಕೊಂಡು ಕುಂಡಿಗೆ ಕಾಲು ಹಚ್ಚಿಕೊಂಡು ಓಡುತ್ತದೆ ಅಡಬುರಿಸಿ ಗಾರಾಡುತ್ತದೆ ಓಣಿಗಳಲ್ಲಿ ಬೀದಿಗಳಲ್ಲಿ ವಾಹನಗಳಲ್ಲಿ ಲಾರಿ ಬಸ್ಸುಗಳಲಿ ಸಾವಿರ ಸಾವಿರ ಹೆಜ್ಜೆಗಳು ನೆಲವನೊದ್ದು ಒದ್ದು ...

ಹೆಮ್ಮೆ ನನಗೆ ಅಮ್ಮ ನಿನ್ನ ತಾಯಿಯೆಂದು ಕರೆಯಲು ಕಂದನೆಂಬ ನಿನ್ನ ಪ್ರೀತಿ ಸವಿಯು ಜೇನಿಗಿಂತಲು ಏನು ತಾನೆ ಇದ್ದರೂ ನಿನಗೂ ಸಿರಿವಂತರು? ಬಲ್ಲೆ ನಾನೆ ಇರುವರೆಷ್ಟೋ ನಿನಗೂ ಧೀಮಂತರು; ಬಾಳಿಬಂದ ಗರಿಮೆಯಲ್ಲಿ ಯಾರು ಸಮಕೆ ಬರುವರು? ತಾಳಿ ನಿಂತ ಸಹನೆಯ...

ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ ಮಹಡಿ ಮನೆಗಳ ಮಂದಿಗೆ ಮೆಟ್ಟಿಲಾಗೈತಿ ದೊಡ್ಡದೊಡ್ಡ ಅಧಿಕಾರಸ್ಥರ ಕಾಲ ಕಸವಾಗೈತಿ ನಮ್ಮವರ ಬಣ್ಣ ಸೋಗಲಾಡಿ ರಾಜಕಾರಣಿಗಳ ಸೊಂಟದ ಲಂಗೋಟಿಯಾಗೈತಿ ನೀತಿ ಹೇಳೋ ಜಾತ್ಯಸ್ತರತಾಕ ಸುತ್ತಿಗೊಂಡು ಬಿ...

ಚಿಕ್ಕೆಯಾಗಿ ಒಳಗೆ ಹೊಳೆದು ತುಟಿಗೆ ಬಾರದವನೆ, ಮಕ್ಕಳ ನಗೆಗಣ್ಣಿನಲ್ಲಿ ಬಾಗಿಲು ತೆರೆದವನೆ, ಉಕ್ಕುವ ಹೂಚೆಲುವಿನಲ್ಲಿ ಸೊಕ್ಕುವ ತೆನೆ ಪಯಿರಿನಲ್ಲಿ ಸಿಕ್ಕಿದಂತೆ ನಟಿಸಿ ಸಿಗದೆ ಎಲ್ಲೋ ಸಾಗುವವನೆ! ಆಡುವ ಮಗು ಓಡಿ ಬಂದು ತೊಡೆಯನೇರಿದಾಗ, ಗೂಡ ನೆನೆ...

ಬನ್ನಿರಿ ಬಾಲರೆ ನಡೆಯಿರಿ ಗೆಳೆಯರೆ ನಾಡಿನ ಬಿಡುಗಡೆ ಕಾಳೆಗಕೆ ತನ್ನಿರಿ ನಿಮ್ಮ ಕಪ್ಪ ಕಾಣಿಕೆಯ ಭಾರತ ಮಾತೆಯ ಓಲಗಕೆ! ಸತ್ಯದ ಕುದುರೆಯನೆಲ್ಲರು ಹತ್ತಿ ಹಿಡಿದು ಝಳಪಿಸಿರಿ ಅಹಿಂಸೆ ಕತ್ತಿ ತಿರುಗಿಸಿ ಗಿರ್‍ರನೆ ನೂಲುವ ಚರಕ ಹುಟ್ಟಡಗಲಿ ದಾರಿದ್ರ್‍...

ತಾರಣ ವರುಷದ ನಾಲ್ಕನೆ ಮಾಸದ ಅಂತ್ಯದ ದಿನವದು ಮುಂಜಾನೆ ಊರಿನ ಜನರಿಗೆ ಹೇಳಲು ತೀರದ ಸಡಗರ ತುಂಬಿದೆ ಬಿಡುವಿಲ್ಲ ದಾನವು ಧರ್ಮವು ದಾಸರ ಪದಗಳು ಸ್ನಾನವು ಜಪಗಳು ನಡೆದಿಹುವು ಏನಿದು ಎಂದರೆ ಬಾಲಕನೊಬ್ಬನು ಕನ್ನಡಿಯೊಂದನು ತೋರಿದನು ಮಸಿಯನು ಪೂಸಿದ ಮು...

ಚಂದ್ರಾ, ಯಾವಾಗ ನೋಡಿದರೂ ಸದಾ ಮತ್ತದೇ ಪ್ರಶ್ನೆ ನಾನು ಹೆಚ್ಚೋ ಸೂರ್ಯ ಹೆಚ್ಚೋ?  ಸೂರ್ಯ ಹೆಚ್ಚೋ ನಾನು ಹೆಚ್ಚೋ…? ಉತ್ತರಿಸಿ ಸಾಕಾಗಿದೆ.  ನಿನ್ನನ್ನು ಬಿಡುವಂತಿಲ್ಲ ಬಿಡು ಈ ಹೆಚ್ಚುಗಾರಿಕೆಯ ಹುಚ್ಚು ಪಾಪ ನಿನಗೆ ಗೊತ್ತಿರೋದು ಇದೊಂದೆ ಕ...

ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ ಹಿಡಿಯಷ್ಟು ಸಾಮಗ್ರಿಯಿಂದ ಪೂರೈಸಬೇಕು ಎಲ್ಲರ ಇಷ್ಟ ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು ಕಪ್ಪು ಕರಾಳ ಕುರೂಪದೊಳಗೇ ಸುಂದರ ಲೋಕ ತೆರೆದು ತೋರಿಸಬೇಕು ದಿನದಿನವೂ ಹೊ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....