
ಅನ್ನೆವರಮರಿಯದಿಹ ತನ್ನ ದ್ಯುತಿಯುಚ್ಛೃತಿಯ ರತ್ನದೊಳು ಕಾಣುತ್ತ ನಲಿವುದಿನಕಿರಣ ತಾನೆಯರಿಯದ ತನ್ನ ಪ್ರಸ್ಫುರಚೇತವನು ಕಂಪಿನಲಿ ಕಂಡು ನಲಿವುದು ನೆಲದ ಹರಣ ತನ್ನಹಂಕಾರವನು ಶಮಿಸಿ ಮಮತೆಯ ತೊರೆದ ಸರ್ವಮುಕ್ತನೊಳೆ ಮೆರೆವುದು ಸರ್ವಮಮತೆ ತೋತೋರಿ ಮರೆಗ...
ಉರಿವ ಬಿಸಿಲಿನ ನಡುವೆ ಮಾವು, ಬೇವುಗಳ ಹೂಗಂಪು ಮುಂಜಾವಿನ ಕನಸಿನಲಿ ಕೆಂಡ ಮಿಂದೆದ್ದ ಸೂರ್ಯ ನಿಟ್ಟಸಿರು ಬಿಟ್ಟ ಕಣ್ಣೀರು! ಹೊಸ ವರುಷ ಬಂದಿದೆ ಸಾವಿನ ಸನ್ನಿಧಿಯಲ್ಲಿ ಪತರುಗುಟ್ಟುವ ಕ್ಷಣಗಳಲ್ಲಿ ಎಸಳು ಜೀವಗಳ ಹೊಸಕುತ್ತ ಕನಸುಗಳ ಕನ್ನಡಿ ಚೂರುಚೂರ...
ಒಬ್ಬನು-ಹುಂಬ- ಡಬ್ಬಿಯ ತುಂಬ ಕಗ್ಗತ್ತಲೆಯನು ತುಂಬಿದನು ಮುಚ್ಚಳ ಇಕ್ಕಿ ಕತ್ತಲೆ ಸಿಕ್ಕಿ- ಬಿದ್ದಿತು ಎಂದೇ ನಂಬಿದನು. ಮರುದಿನ ಎದ್ದು ತುಸುವೂ ಸದ್ದು ಮಾಡದೆ ಮುಚ್ಚಳ ಸರಿಸಿದನು ಕತ್ತಲೆಯಿಲ್ಲ! ಮನೆಯೊಳಗೆಲ್ಲಾ ಹುಡುಕುತ ಕಣ್ಣೀರ್ ಸುರಿಸಿದನು *...
ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ ಚರಿತೆ ಕಟ್ಟುವ ...
ಮುಗಿಲ ಲೋಕಕೆ ಮೌನ ಲೋಕಕೆ ಲಿಂಗ ತತ್ವಕೆ ಸ್ವಾಗತಂ ಶೂನ್ಯದಾಚೆಯ ಮಹಾ ಮೌನಕೆ ಜ್ಯೋತಿ ಲಿಂಗಕೆ ಸ್ವಾಗತಂ ಜಡವು ಜ೦ಗಮವಾಗಿ ಅರಳಿತು ಪರಮ ಗುರುವಿಗೆ ಸ್ವಾಗತಂ ತಪವು ತು೦ಬಿತು ತಂಪು ತೂರಿತು ಜ್ಞಾನ ಪೀಠಕೆ ಸ್ವಾಗತಂ ಉಸಿರು ಉಸಿರಿಗೆ ಲಿಂಗ ಪೂಜೆಯು ಪ್...
ನಿನ್ನ ಕಣ್ಣ ಕಾಂತಿಯಲ್ಲೇ ಪ್ರಪಂಚ ಬೆಳಗಿರುವಾಗ ಬೆಳಕಿನ ಹಂಗೇಕೆ ಬಾಳ ದಾರಿಯಲಿ ಕತ್ತಲಿನ ಗುಂಗೇಕೆ ಎನ್ನ ಮನದಲಿ ನಿನ್ನ ಮುಖದ ಕನ್ನಡಿಯಲ್ಲಿ ನನ್ನ ನಗುವಿನ ಪ್ರತಿಬಿಂಬ ನಿನ್ನ ಕಣ್ಣೀರು ಹರಿದಿದೆ ನನ್ನ ಕಣ್ಗಳಲಿ ಮುಖ ಬಾಡಿದೆ, ಮನಸ್ಸು ಮರುಕಪಟ್ಟ...
ಇನ್ನಾರುಮರಿಯದಿಹ ಅರಿಯಿಸಲುಮಾಗದಿಹ ಜೀವಾತ್ಮಸಂಸ್ಥೆಯಿದು, ಮಾತಿಲ್ಲ ತೆರೆಯೆ; ಗೀತನೃತ್ಯಾಭಿನಯ ಶಿಲ್ಪ ಕವಿತಾಚಿತ್ರ- ಗಳಿಗರಿದು ಈ ರಹಸ್ಯದ ಮುದ್ರೆಯೊಡೆಯೆ; ಪರಿಸರದ ಪರಿಸರದ ಪರಿಪರಿಯ ಬೆಲೆಗಳೊಳು ಆವ ಬೆಲೆಗೂ ತರದೆ ಉಳಿವುದಿದು ಕೊನೆಗೆ: ಜಗದಾವ ...













