ಉಜ್ಜೀವಿಸಲು ಬಯಸಿ ಹಾತೊರೆದು ಹೊರನಿಂತು
ಗಾನ ಆಶ್ರಯವೆರೆವ ದಿವ್ಯ ಸಂಮುದವೇ,
ತನಗೆ ತಡೆಯಿಲ್ಲವೆನೆ ಕೃತಮನಶ್ಶಮಹಾರಿ
ಸೂಭ್ರೂಕಟಾಕ್ಷಕ್ಕೆ ಮೊನೆಯೀವ ಬಲವೇ,
ಕುಶಲ ಪರಿಕರ್ಮದಿಂ ಶೃಂಗಾರಗೊಂಡು ಕಲೆ
ಬಾಡಿರುವ ಮೊಗವೆತ್ತಿ ಬೇಡುತಿಹ ವರವೇ,
ಸುಹೃದನನಹಂವಾದಿ ಅಪ್ರಮತ್ತಂ ಸಾಧು
ಪಾಪಿ ತಾನೆಂದೆಯೇ ಹಲುಬುತಿಹ ಪದವೇ,
ಎಂದು ನೀನೆತ್ತಲಾರಿಗೊಲಿವೆ-ಇದನರಿಯಲಳವೆ?
ನಿನಗೆ ಪಾತ್ರಾಪಾತ್ರದರಿವಿಲ್ಲ-ಅದಕೆ ನಾನಾಸೆಗೊಳುವೆ.
*****


















