Home / ಕವನ / ಕವಿತೆ

ಕವಿತೆ

ಇನ್ನೇನು ಕಳೆದು ಬಿಟ್ಟರೆ ಎರಡು ರಾತ್ರೆ ಸನ್ನಿಹಿತವಾಗುವುದು ಮುಂಡೋಡ್ಳು ಜಾತ್ರೆ ಹನ್ನೆರಡು ಮುಡಿ ಗದ್ದೆ ಉದ್ದಗಲ ಸಂತೆ ಕಿನ್ನರರ ನಗರಿಯೇ ಇಲ್ಲಿಗಿಳಿದಂತೆ ಎಲ್ಲಿ ನೋಡಿದರಲ್ಲಿ ಎಂಥದೋ ಸೆಳಕು ಎಲ್ಲರನು ಒಟ್ಟಿಗೇ ಸೆರೆಹಿಡಿವ ಥಳಕು ಮಲ್ಲಿಗೆಯ ಹೂ...

ಲಾಲಿ ಲಾಲೀ ಲಾಲಿ ಲಾಲೀ ವಾರಿ ಜೊಲ್ಲಿನ ಚಲುವಗೆ || ಎಲ್ಲಿ ನರಳಿಕೆ ಎಲ್ಲಿ ಬಳಲಿಕೆ ಅಲ್ಲಿ ಆಡುವ ಕಂದ ನೀ ಎಲ್ಲಿ ಹಸಿವೆಯ ಬೆಂದ ಬೆಳುವಲ ಅಲ್ಲಿ ಬೆಳೆಯುವ ಗೆಳೆಯ ನೀ ಜೋಗ ತಡಸಲ ನಿನಗೆ ಗುಡಿಸಲ ತೀರ್ಥ ಪಾನಂ ಗೈಯುವೆ ದಲಿತ ಎದೆಗಳ ತುಳಿತ ತನುಗಳ ಕಣ...

ಸ್ವಾಮಿ, ಇದೆ ಕಡೆಗೀಟು; ತಲೆತಲಾಂತರದಿಂದ ನಮ್ಮ ನಿಮ್ಮಜ್ಜ ಪಿಜ್ಜಂದಿರೆಲ್ಲರು ಬೆಸೆದ ಎಂಥ ಘನ ಬಾದರಾಯಣ ದೈತ್ಯಬಂಧವೂ ದಾಟಬಾರದ ಕಟ್ಟಕಡೆಗಟ್ಟು ಇದರೀಚೆ ಏನಿದ್ದರೂ ನನ್ನ ಸ್ವಂತ, ಅಪ್ಪಟ ನನ್ನ ಬದುಕು ನನ್ನದೆ ನಾಚು. ಹಾ! ನಿಲ್ಲಿ ನುಗ್ಗದಿರಿ; ಭಂ...

ಬಾಳಿನ ಕಡಲಲ್ಲಿ ಮಿಂದು ಬಂದೆ ನಾನು ಹೊಸ ವರುಷದ ಹೊಸ ಹರುಷದ ಹೊನಲಲಿ ನಗುವ ಹೂವಾಗಿ ಬಂದೆ ನಾನು|| ಕವಲೊಡೆದ ಸಸಿಯಂತೆ ಹೊಲ ಮರ ನೆಲಗಿಡ ಹಸಿರ ಹಾಸಿಗೆ ಬರಸೆಳೆಯುವಂತೆ ಬಯಕೆಗಳ ಹೊತ್ತು ಯೌವನ ಸಿರಿಯ ತೋರುವಂತೆ ಬಂದೆ ನಾನು|| ಬಳೆಗಾರನ ಬಳೆ ಸದ್ದಲ್...

ಪ್ರತಿ ಹಕ್ಕಿಯ ಕೊರಳ ತುಂಬಾ ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ ನಲಿಯುವ ಉಲಿಯುವ ಹಾಡಾಗಿ ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ. ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ ಬೀಜಗಳು ಚಿಗುರುವ ಮೊಳಕೆಯಾ...

(ಝೆನ್‌ಗುರು ಚುಅಂಗ್‌ತ್ತು ಹೀಗೆ ಹೇಳುತ್ತಾನೆ: ಕನ್ನಡಿಯನ್ನು ನೋಡಿ – ಅದು ಏನನ್ನೂ ಸ್ವೀಕರಿಸುವುದಿಲ್ಲ. ಏನನ್ನೂ ತಿರಸ್ಕರಿಸುವುದಿಲ್ಲ. ಅದು ಏನಿದ್ದರೂ ಗ್ರಹಿಸುತ್ತದೆ) ಕನ್ನಡಿ ನನ್ನನ್ನು ನೋಡಿತು. ನನ್ನ ಕಣ್ಣಂಚಿನ ನೀರನ್ನೂ ತನ್ನ ತು...

ಬಿಕ್ಕಳು ತಾಯಿ ಶರಧಿಯಾಳದಿ ಮುಖ ಹುಗಿಸಿ ಕಣ್ಣೀರ ಕೋಡಿ ಹಗುರ ಹೊರೆ ಸಾಗರ ಗರ್ಭ ಉಕ್ಕಿ ಸಿಡಿದು ಈಗ ನೀರನೊರೆ ಕೆನೆಕೆನೆಯ ಲಾಲಾರಸವಲ್ಲ, ಅದು ಲಾವಾ ಉಗುಳುತ್ತಿದೆ ಬೆಂಕಿ ಕೆಂಡ. ತಾಯ್ತನದ ಹಿರಿಮೆಯೆ ಹಾಗೆ ತನ್ನ ಇರಿದು, ಮುರಿದು, ಇಂಚು ಇಂಚು ಭಂಗ...

ಅಡಿಗರಿಂದಲು ಕಲಿತೆ ನಾಡಿಗರಿಂದಲು ಕಲಿತೆ ಅಡಿಗಡಿಗೆ ಕಲಿತುದನು ನುಡಿಯಲ್ಲಿ ಮರೆತೆ ರತಿಯ ಬಗ್ಗೆಯು ಬರೆದೆ ಆರತಿಯ ಬಗ್ಗೆಯು ಬರೆದೆ ಮತಿಯ ಪರಿಧಿಗೆ ತೋರಿದಂತೆ ಒರೆದೆ ಹರಿದ ಕಾಗದದ ಚೂರು ಮಹಾಯುದ್ಧಗಳ ಜೋರು ಧರೆಯೊಳಗೆ ಸಕಲವನು ತಿಳಿದವರು ಯಾರು? ಎ...

ಕಂಡಿರುವೆ ಮೂರು ಸಲ ಇವನ ಮೋರೆ, ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ, ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು, ಉಂಡದ್ದು ಉದರ ಸೇರದ ಯಾವ ರೋಗವೋ! ತಿನಿಮೋರೆ ಚಂದವೋ, ಅರಕೆ ಅತೃಪ್ತಿಗಳೆ ತೇದ ಇದ್ದಿಲ...

ನನ್ನದೆಂಬುದೇನಿದೆಯೋ ನಿನ್ನದೇ ಎಲ್ಲಾ ಸೂತ್ರಧಾರಿ ನೀನಾಗಿರಲು ಪಾತ್ರಧಾರಿಗಳೆಲ್ಲಾ ನಾನಾದರೋ ತಿಳಿಯೆ ಮಾಯದಾಸೆರೆಯಲಿ ಎಲ್ಲೆಲ್ಲೂ ನೀನಿರಲು ಕಾಣದಾಗಿಹೆ ||ನ|| ಮೌನ ಮಾತಾಡುವುದೇ ಕಾಡುವುದೇ ಪ್ರೇಮ ಸುಮ ಭಕುತಿಯಲಿ ಬಾಡುವುದೇ ಬಾಳಿನಂದದ ದೀಪ ರೂಪವ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...