Home / ಕವನ / ಕವಿತೆ

ಕವಿತೆ

ಹೂವು ಮುಳ್ಳಿನ ಬಗ್ಗೆ ಮುಳ್ಳು ಹೂವಿನ ಬಗ್ಗೆ ಏನು ಹೇಳುತ್ತಿದೆಯೋ ಅರ್‍ಥವಾಗುತ್ತಿಲ್ಲ. ಹಗಲು ರಾತ್ರಿಯ ಬಗ್ಗೆ ರಾತ್ರಿ ಹಗಲಿನ ಬಗ್ಗೆ ಏನು ಹೇಳುತ್ತಿದೆಯೊ ಅರ್‍ಥವಾಗುತ್ತಿಲ್ಲ. ನಗು ಅಳುವಿನ ಬಗ್ಗೆ ಅಳು ನಗುವಿನ ಬಗ್ಗೆ ಏನು ಹೇಳುತ್ತಿದೆಯೊ ಅರ್...

ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ ಹೊರಟು ಹೋಯಿತು ನೆಲವನ್ನು ತೊಯ್ಯದೆ ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ...

ಮೂಡಣ ಪಡುವಣ ಕಡಲಿನ ವಡಬನೆ ನಡು ಬಾನಿನ ವರ ಭಾಸ್ಕರನೆ ವೀಚೀ ರಂಗಾ ಭುವನ ತರಂಗಾ ಕೊಂಕಣ ತೆಂಕಣ ಶಾಮಲನೆ ಗಗನಾಂಗಣ ರವಿ ಎದೆಯಾಂಗಣ ಕವಿ ಭಾರತಿಯಾತ್ಮದ ಚಿನ್ಮಯನೆ ಸತ್ಯಾರಾಧನ ಶಾಂತಾಹ್ಲಾದನ ಹುಯ್ಲಿನ ಕೊಯ್ಲಿನ ವಿಪ್ಲವನೆ ಓವೋ ಗುರುಹರ ಆತ್ಮಾಂಗಣ ಚಿ...

ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು. ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು. ಸ್ನೇಹಕೂ ಹುಬ್ಬುಗಂಟನು ತರುವ ...

ಚೈತ್ರದಂಗಳದಲ್ಲಿ ನೀನು ಚೈತ್ರವಾಹಿನಿ ನಿನ್ನ ನಿಲುವೇ ಜೀವನ ಋತು ದರ್‍ಶಿನಿ ಪಾವನ ನಿತ್ಯ ನೂತನ ನವಚೇತನ ಕಿರಣ ನಿನಗೆ ನನ್ನ ನಮನ|| ತಾಯ ಬಸಿರ ಉಸಿರೆ ಹಸಿರ ಬಾಂದಳವೆ ಶಂಗ ನೆಲೆಯ ಮಣಿವ ಸೆರೆಯ ಸಿರಿಯೆ ಬಾಳ ಬಂಗಾರ ತಂದಾರ ಹಿಡಿ ಹೊನ್ನ ಸೋಲ ಒಪ್ಪದ...

ಕತ್ತಲು ಕೋಣೆಯಲಿ ಬೆಳಕಿನ ಅಕ್ಷರಗಳು ಮೌನ ಆವರಣದಲ್ಲಿ ಮಾತುಗಳ ಶಬ್ಧಗಳು ಕತ್ತಲು ಬೆಳಕು ಮೌನ ಮಾತು ಎಲ್ಲವೂ ಒಂದೇ ನಾಣ್ಯವಾದಾಗ, ಹುಡುಕುವುದು ಏನನ್ನೂ ಗಾಯಕ್ಕೆ, ಸವರಿದ ಮೂಲಾಮಿನ ತಣ್ಣನೆ ಸ್ಪರ್ಶ ಮರದಲ್ಲಿ ಚಿಗುರಿದ ಹಸಿರು, ಯಾತನೆಯಲ್ಲಿ ಸಾವಿನ...

ಬಿಸಿಲು ಕುದುರೆಯನೇರಿ ಹೋಗಬೇಡೋ ಗೆಳೆಯಾ ಬೆಂಗಾಡಿನಲಿ ಸುತ್ತಿ ಬೆವರ ಸುರಿಸಲು ಬೇಡ ಬಯಕೆ ಬೆಟ್ಟವ ಹತ್ತಿ ಹೋಗಬೇಡೋ ಗೆಳೆಯಾ ಬಂಡೆಯಂತೆ ಉರುಳಿ ಬೆರಗಾಗಲು ಬೇಡ ||ಬಿಸಿಲು|| ಬಿಸಿಲು ಮಚ್ಚಿನ ಮೇಲೆ ಬಿರಿದಿರಲು ಬಳಿ ಸೂರ್‍ಯ ಕಿಸುರ ಕಣ್ಣ ಒರೆಸಿ ತು...

ಕರೆಮೊಗೆಯ ಹಿಡಿದು ಹೊರಟೆ ಕೈಗೊಂದಿಷ್ಟು ಗೌರಿಯಾಕಳ ಹಾಲಿನ ತುಪ್ಪ ಸವರಿ ಕರು ಮೆಲ್ಲುತ್ತಿತ್ತು ಹುಲ್ಲು ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು ವಾಸನೆ ಗೃಹಿಸಿ, ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ ತೊಳಕಲು ಅಕ್ಕಚ್ಚು ಮೆಚ್ಚಿಲ್ಲ. ಅಚ್ಚು ಮೆ...

ಈ ಬಾರಿಯ ತಿರುವುಗಳಾ ಬಯಲಿನ ಹರಹುಗ- ಳೀ ಹುಡುಗಿಯ ಹುಬ್ಬುಗಳಾ ಸಂಜೆಯ ಮಬ್ಬುಗ- ಳಷ್ಟೆತ್ತರ ಬೆಟ್ವಗಳೀ ತೀರದ ತಗ್ಗುಗ- ಳಿನ್ನಿಲ್ಲ ಸಂಜೆಗಳು ಮತ್ತೀ ಬೆಳಕಿನ ಸುತ್ತಲ ಬೆತ್ತಲು ಆ ಕಣಿವೆಯ ಕೆಳಗಿನ ಕತ್ತಲು ಯಾವುದೊ ಕೋಟೆಯ ಸುತ್ತಲು ಇನ್ನಾವುದೊ ಪ್...

ಓ ವಿಶ್ವ ಮಾನವತೆ ಓ ಸತ್ಯ ಶಾಶ್ವತತೆ ಓ ಪ್ರೇಮ ಕಾಶ್ಮೀರ ಸುರಿದು ಬರಲಿ ಮುಗಿಲು ಮಲ್ಲಿಗೆ ಅರಳಿ ನೆಲತಾಯಿ ಚುಂಬಿಸಲಿ ಗುಡುಗು ಎಲುಬಿನ ಗಡಿಗಿ ಒಡೆದು ಬರಲಿ ನಾವು ಆತ್ಮರ ಬಳಗ ನಾವು ದೇವರ ಬಳಗ ಈ ಬದುಕು ಅಮೃತದ ಪ್ರೇಮ ಕೊಳಗ ಜಾತಿ ಬೇಲಿಯ ಕೋತಿ ಅಲ್...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...