ಚೈತ್ರ

ಚೈತ್ರದಂಗಳದಲ್ಲಿ ನೀನು ಚೈತ್ರವಾಹಿನಿ
ನಿನ್ನ ನಿಲುವೇ ಜೀವನ ಋತು ದರ್‍ಶಿನಿ ಪಾವನ
ನಿತ್ಯ ನೂತನ ನವಚೇತನ ಕಿರಣ ನಿನಗೆ ನನ್ನ ನಮನ||

ತಾಯ ಬಸಿರ ಉಸಿರೆ ಹಸಿರ ಬಾಂದಳವೆ
ಶಂಗ ನೆಲೆಯ ಮಣಿವ ಸೆರೆಯ ಸಿರಿಯೆ
ಬಾಳ ಬಂಗಾರ ತಂದಾರ ಹಿಡಿ ಹೊನ್ನ
ಸೋಲ ಒಪ್ಪದಿರೂ ಕನವಿರಿಸದಿರೂ ಕನಸಾಗಿಹ
ನೆನಪುಗಳ ನವಚೇತನ ನಿನಗೆ ನನ್ನ ನಮನ||

ದಾನಿಯಾಗಿ ಮಾನಿಯಾಗು ಭೇದವಿಲ್ಲದೇ ಎನ್ನ
ಕಾಲವೆ ತಡೆಯದಿರು ಸ್ವಾರ್‍ಥದ ಕಟು ಸತ್ಯದ
ಹೊರಗೆ ನಿಲ್ಲಲಾರೆ ನಲಿವ ಗೆಲುವ ಕಾಣುವ
ಸಾಕಾರವಾಗಿಸು ಬಾಯಾರಿ ಬಂದ ಮನಕೆ ತಂಪ
ನೀಡಲೇ ಚೈತನ್ಯವೇ ನಿನಗೆ ನನ್ನ ನಮನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಿಯುಗದ ಹರಿಶ್ಚಂದ್ರ ಅರ್ಥಾತ್ ಸಾಕ್ಷೀದಾರ
Next post ಗಳಿಕೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…