Home / ಕವನ / ಕವಿತೆ

ಕವಿತೆ

ನೂರಾರು ನೆನಪುಗಳಲ್ಲಿ ಹದಿನಾರು ಕನಸುಗಳು ಒಡಲ ತಣಿವು ನೂರಲ್ಲಿ ಭಾವನೆಗಳು ಸಾವಿರಾರು || ಆಸೆಗಳು ನೂರೆಂಟು ಪಂಜರ ಗಿಣಿ ಹದಿನೆಂಟು ಹಾರುವುದು ಮೌನವಾಗಿ ಜೀವನವೂ ಹಸಿರಾಗಿ || ಸಾವಿರದ ಪ್ರಾಯ ಹಾದೀ ಬಾಳು ಬದುಕು ಸವಿದಂತೆ ನೋವ ಮರೆತು ಸಂತೆಯಲಿ ನಡ...

ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೇ| ನನ್ನ ಹೃದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸುಮಧುರ ಮಾತೇ ಸಿರಿತನ| ನನಗೊಲಿದ ನಿನ್ನ ಮನದಲೊಂದಾಗಿ ಸದಾ ನಗೆಯಲೇ ತೇಲಿಸ...

ಮೊಳಕೆಯಲ್ಲೇ ಕೊರಳ ಕುಣಿಕೆ ಕಣ್ಣು ಮೂಗು ಮುಚ್ಚುವಷ್ಟು ಧೂಳು ದಣಿವು ಸೆಟೆದ ಎದೆಯಲ್ಲಿ ನೆರೆಬಂದು ಬಿಡದೆ ಬಂಡೆ ಸಂದಿಯಲ್ಲೂ ಚಿಗುರು ಸುತ್ತಮುತ್ತೆಲ್ಲ ಮುನ್ನೂರು ಉಗುರು. ಗರಿಕೆ ಹುಲ್ಲಿನ ಮಧ್ಯೆ ಗೊರಕೆ ಹೊಡೆಯದೆ ಎದ್ದು ಕಲ್ಲ ಕ್ಯಾಕರಿಸಿ ಅತ್ತ ...

೧ ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ? ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ? ಎಂದು ಮಲಿನತೆ ನೀಗುವೆ-ಮಗು ಳೆಂದು ನುಗುಮುಖವಾಗುವೆ ? ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ, ಯಾರು ಜಾಡ್ಯವ ಹರಿಸಿ...

ದೇವಿ ಶಾರದೇ ಮಾತೆ | ಸಕಲ ಭುವನ ಜವ್ಮದಾತೆ || ಪ || ಅಂದುಕೊಂಡೆ ಏನೋ ನೀನು | ಆಯಿತೆಲ್ಲ ಜೀವ ರಾಶಿ ನಿನ್ನ ಪಿಸುನುಡಿಯಲಿ ಹೊಮ್ಮಿ| ವ್ಯಾಪಿಸಿಹುದು ಜಗವಿದೆಲ್ಲ || ೧ || ನಾದವೇ ಅನಾದವೇನೊ | ಆದಿಯೇ ಆನಾದಿಯೇನೊ ವೇದಗಳೇ ಗೆಜ್ಜೆಯಾಗಿ | ಪಾದದಲ್ಲ...

ನೈವೇದ್ಯ ತೀರ್ಥ ಪ್ರಸಾದಗಳೆಲ್ಲ ನಮಗೇ ಸ್ವಾಹರ್ಪಿತ ಒಡವೆ, ವಸ್ತ್ರ, ಕಾಣಿಕೆಗಳು ನಮ್ಮ ಸ್ವಯಾರ್ಜಿತ. ಗುಡಿಯ ಸುತ್ತು, ಧ್ಯಾನ ಉರುಳು ಸೇವೆ, ನಮಸ್ಕಾರ ನಮ್ಮ ಯೋಗಾರ್ಥಕ ಬೇಡುವುದೆಲ್ಲ ನಮ್ಮ ಸುಖಕ ಪೂಜೆಯುಂಟು ಧರ್ಮಕ ಸ್ತೋತ್ರ, ಮಂತ್ರ, ದೀಪ, ಧೂಪ...

ಮಹಾನಗರದ ಮಧ್ಯದಲ್ಲೊಂದು ಕಾಂಕ್ರೀಟ್ ಕಾಡು ಆ ಕಾಡಿನಲ್ಲೊಂದು ಗಗನ ಚುಂಬಿ ವೃಕ್ಷ – ಗೃಹ ಸಂಕೀರ್ಣ ಅದರಲ್ಲಿ ಬೆಂಕಿ ಪೊಟ್ಟಣಗಳಂತಹ ಸಾವಿರಾರು ಸಣ್ಣ ಸಣ್ಣ ಮನೆಗಳು. ಅಂಥದೊಂದು ಗೂಡಿನಲ್ಲಿ ಟಿ.ವಿ.ಯ ಮುಂದೆ ಕುಳಿತು ಕಡಲ ತೀರ, ಹಚ್ಚ ಹಸಿರ ಕ...

ಶಬುದಾ ಕೇಳಿದಿಯೇನೊ ನೀ ಅಬುದಾ ನೋಡಿದಿಯೇನೊ ||ಪಲ್ಲ|| ರಾತ್ರಿಯ ಜಾತ್ರ್ಯಾಗ ಚುಕ್ಕಿಯ ತೇರ್ತೆರೊ ಜೋರ್ಜೋರೋ ಜೋರೊ ಭಜನೀಯ ಸೂರೋ ||೧|| ಪಾತ್ರದಾ ಪರಹೆಣ್ಣು ಸೂತ್ರದಾ ಸವಿಹೆಣ್ಣು ಕಣ್ ಕಣ್ಣು ಕಣೋ ಹುಣ್‍ಹುಣ್ಣು ಹುಣ್ಣೋ ||೨|| ಮುಗಲಾಗ ಹಗಲಿಲ್ಲ...

ಜೀವನದಲ್ಲಿ ಕೇವಲ ಹಸಿವು, ನೋವುಂಡು ಬೆಳೆದವಳು ಆಶಾಬೀ. ಹಸಿವಿನ ಕ್ರೂರ ಕೂಗನ್ನು ಕೇಳಲಾರದೇ ಒಂದು ದಿನ ತನ್ನೆರಡು ಹಸಳೆಗಳೊಡನೆ ನೀರಿನ ಪಾಲಾದಳು. ಆದರೆ, ಸಾವು ವಿಚಿತ್ರ. ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ. ತನ್ನ ಕರುಳ ಕುಡಿಗಳ ಕತ್ತನ್ನು ಹಿಸುಕಿ...

(‘ದಿ. ಜಾನ್ ಕೆನಡಿ’ಯ ಕೊಲೆಯನ್ನು ನೆನೆದು) ಅಯ್ಯೋ! ಹತನಾದ ವಿಶ್ವ ಪ್ರೇಮಿ!! ಕಗ್ಗೂಲೆಯ ಕಾಳ ರಾತ್ರಿಯಲಿ ಜಗ ಬೆರೆಯಿತು…. ವಿಶ್ವ ಪ್ರಾಣದ ರಕ್ತ – ಕೋಡಿ ಹರಿಯಿತು ಶೋಕಾಂಬುಧಿಯ ತೆರೆ ಎದ್ದು ಮೊರೆಯಿತು! ಜವರಾಯ ನೀ ನನ್ನಿಕಾರನೆಂದ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...