ಕುದುರೆಮುಖ ಕುದುರೆಮುಖ
ಆ ಹೆಸರಿನಲ್ಲೆ ಎಂಥ ಸುಖ

ಗುಡ್ಡವಿಲ್ಲ ಬೆಟ್ಟವಿಲ್ಲ
ಶಬ್ದ ಕೊರೆದ ನಿರ್ಮಿತಿ
ಗಾಳಿಗಿಂತ ವೇಗವಾಗಿ
ಎಲ್ಲಿ ನನ್ನನೊಯ್ಯುತಿ

ದಾಟಿ ಕಡಲ ಮೀಟಿ ಮುಗಿಲ
ಬಂದ ದೇಶ ಯಾವುದು
ತೆರೆದು ಕಿಟಿಕಿ ಕಣ್ಣ ಮಿಟುಕಿ
ಕಂಡ ರೂಪು ಯಾರದು

ನಡೆದು ಬೀದಿ ಮರೆತು ಹಾದಿ
ಕುಳಿತು ಮರದ ನೆರಳಲಿ
ತಂಪು ಗಾಳಿ ಜೊಂಪು ತೂಗಿ
ಕನಸಿನೊಳಗೆ ಕನಸಲಿ

ತುಂಬಿ ಹರಣ ಕಾಲ ಝಣಣ
ಕುಣಿದಳಾವ ಕನ್ನಿಕೆ
ಬಳಿಗೆ ಸರಿಯ ಕಣ್ಣ ತೆರೆಯೆ
ಸರಿಯಿತೇ ಮರೀಚಿಕೆ

ಕುದುರೆಮುಖ ಕುದುರೆಮುಖ
*****