Home / ಕವನ / ಕವಿತೆ

ಕವಿತೆ

ಕರುಣೆ ತೋರು ನೀನೆನಗೆ ನನ್ನ ಬಾಳ ಏಳಿಗೆಗೆ | ದಾರಿದೀಪವಾಗೆನಗೆ ನನ್ನ ಬಾಳ ಈ ಹಾದಿಗೆ || ಗುರುನೀನೇ ಗುರಿತೋರಿಸು ನೀನೇ ಇನ್ನಾರಿಹರೆನಗೆ ನೀನಲ್ಲದೀಬಾಳಿಗೆ| ಬದುಕ ಬವಣೆಯ ಬಿಡಿಸು ಬಾಳ ಮಹಿಮೆಯ ತಿಳಿಸು|| ಏಕೆ ಮತ್ತೆ ಮತ್ತೆ ಪುನರಪಿಸುವೆವೋ ಕಾಣೆ...

ಯಾರು ಕಟ್ಟಿದರೊ ಈ ಭವ್ಯ ದೇಗುಲ ಕೋಟಿ ಜನ ಹೊಗಳುವ ಈ ಕೋಟೆಕೊತ್ತಲ? || ಯಾವ ಚರಿತೆಯು ಬರೆಯಲಿಲ್ಲ ಶಿಲಾಶಾಸನ ಕೊರೆಯಲಿಲ್ಲ ತಾಳೆಗರಿಗಳು ಮಿಡಿಯಲಿಲ್ಲ ತಾಮ್ರಪಟಗಳು ಹೊಗಳಲಿಲ್ಲ || ಕಟ್ಟಿಸಿದಾತನು ಪಟ್ಟದ ಮೇಲೆ ಅಟ್ಟಹಾಸದಲಿ ಹೆಸರಾದ ಕಟ್ಟಿದ ಸಾವಿ...

ಹಾಸಿಗೆ ಹಾಸಿದೆ ನೆಲದಾಗೆ ಅದು ಹಾಸದ ತಳವಿಲ್ಲ ಜಗದಾಗೆ || ಪ || ಹಸುಗೂಸು ಉರುಳಾಡಿ ಕೈಮೈಯಿ ತಿಕ್ಕಾಡಿ ಹೇಸಿಗೆ ಮಾಡಿದ್ದು ಹಾಸಿಗೆ ಹಸನಾಗಿ ಹಾಸಿದ್ದ ಗಸಬಸ ಕೆಡಿಸ್ಯಾಡಿ ರಸದಲ್ಲಿ ಉರುಳಿದ್ದು ಹಾಸಿಗೆ || ೧ || ಕಾಮದ ಕಲ್ಪನೆ ಏನೇನೂ ಇರದಾಗ ಮಾನ...

ಜನ ಜನ ನಮ್ಮ ಜನ ಕಾಳು ಕಡ್ಡಿ ತಿನ್ನುವ ಜನ ಹುಲ್ಲು ಮೇದು ಬರುವ ಜನ ಯಾವ ಕಸಾಯಿಖಾನೆಗೆ ಈ ಜನ ? ನಶ್ಶವ ತಿಣಿಕಿ ಎಡೆ ಎಡೆ ಹಣಿಕಿ ಏಕ್ಸಿ ಏಕ್ಸಿ ಎನ್ನುವರು ಎಡಬಲವೆನ್ನದೆ ಗಾಳಿಗೆ ಉಗಿದು ಬಯ್ಯುವರು ಬಯ್ಯಿಸಿಕೊಳ್ಳುವರು ಸಿಹಿ ಸಿಹಿ ಗುಲಾಬುಜಾಮೂನು...

ಹರಿಯಲಿ ಮುಂದೆ ಹರಿಯಲಿ ಮಾನವ ಪ್ರೇಮದ ಮನಸುಗಳು ಒಂದಾಗಿ… ಒಂದೆಡೆಗೆ… ಒಂದು ಪಾತ್ರದಲಿ ಹಳ್ಳ ತೊರೆಗಳಂತೆ. ಹುಟ್ಟಿ ನಾಯಿ ಕೊಡೆಗಳಂತೆ ಒಂದಕ್ಕೊಂದು ಸೇರದೆ ಬಿಡಿ, ಬಿಡಿಯಾಗಿ ತುಸು ಅಲ್ಲಿ ಇಲ್ಲಿ ಸಾಗಿ ಸ್ವಾರ್ಥ, ಪ್ರತಿಷ್ಠೆ, ಶತೃ ...

ಸೋನೆ ಮಳೆಯ ಸಂಜೆ… ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ ಸ್ವೆಟರ್ ಏರಿಸಿ ಹಾಳೂರು.. ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು ದೀಪ ಧಾರಿಣಿಯಾದೆ, ಗಾಳಿ ಬಾಗಿಲ ತಳ್ಳಿತು ಎದುರಲ್ಲಿ ತೊಯ...

ಸುಗ್ಗಿಯ ಹಬ್ಬ | ನಮಗಿಂದು ಸಂಕ್ರಾಂತಿ ತಂದಿತು ನಮ್ಮಲ್ಲಿ | ಸುಖ ಶಾಂತಿ ಎಳ್ಳಿನ ಎಣ್ಣೆಯ | ಮಜ್ಜನ ಮಾಡುತ ಮೈಯಲಿ ಮೂಡಿತು | ಹೊಸ ಕಾಂತಿ ಮಾಗಿಯ ಚಳಿಯದು | ಇಳಿಯುವ ಹೊತ್ತು ರವಿಯ ಕಿರಣಗಳು | ನೇರಕ್ಕೆ ಬಿತ್ತು ಚೈತ್ರದ ಚಿಗುರು | ಮೂಡುವ ಹೊತ್ತ...

ರೆಡಿ ರೆಡಿ ರೆಡಿ ರೆಡಿ ಎವರೆಡಿಯೊ ತಡಿ ತಡಿ ತಡಿಯಂದ್ರ ನೀ ಕಡಿಯೊ ||ಪಲ್ಲ|| ಯಾಮಿನಿಟು ಸರಸಗಟು ಗಂಟುಮೂಟೆಯ ಕಟ್ಟು ಹೊಂಡಂದ ಗಳಿಗ್ಯಾಗ ನಾರಡಿಯೊ ಯಸ್ಸಂದ್ರ ಇಲ್ಲಂಬೊ ಉಸ್ಸಂದ್ರ ನೋವಂಬೊ ಯಸ್ಸೀನ ಕಿಸ್ಸೀಗಿ ನಾ ಕಡಿಯೊ ||೧|| ಟಿಂಟಾಂಗು ಡಿಂಡಾಂಗ...

ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು ಕಪ್ಪಗೆ ದೂರದಲ್ಲಿ ನೆಲಕ್ಕೆ ಜಾರಿದ ಮುಗಿಲು ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು ಹೊಳೆಸುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು ಹೊಳೆದ ಗಳಿಗೆ ಮೈಯುದ್ದ ಬೆಳೆದು ನೀ ಪರವಶ ನಾನು ಗಳಿಗೆಯಲ್ಲೆ ಸರಸರನೆ ...

ನನ್ನೊಳಗಿದ್ದು ಹೋದೆಯೆಲ್ಲಿಗೆ ಹೊಳೆಯಲೇ ಇಲ್ಲ ತಿಳಿಯಲೇ ಇಲ್ಲ. ಒಂದಿನಿತು ಸೂಚನೆ ಕೊಡದೆಯೆ ಹೋದುದರ ಮರ್ಮವೇನು. ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ ದಿಟ್ಟಿ ಮಿಟುಕದೆ, ಮೋಡಗಳಾಚೆಗೊಮ್ಮೆ ನೋಡಿದ್ದೆ ಬಂತು ನಿನ್ನ ಸುಳಿವು ಸಿಗಲಿಲ್ಲ ಮಳೆ ಹನಿಗಳನ್ನು...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...